2009ರಲ್ಲಿ ಹತ್ಯೆಯಾಗಿದ್ದ LTTEಯ ಪ್ರಭಾಕರನ್ ಇನ್ನೂ ಜೀವಂತ, ಶೀಘ್ರವೇ ಪ್ರತ್ಯಕ್ಷ: ನಡುಮಾರನ್
ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ' (LTTE) ನಾಯಕ ಪ್ರಭಾಕರನ್ ಇನ್ನೂ ಜೀವಂತವಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕ ಪಜಾ ನೆಡುಮಾರನ್ ಘೋಷಿಸಿದ್ದಾರೆ.
ಬೆಂಗಳೂರು, ಫೆಬ್ರವರಿ 13: ಉಗ್ರ ಸಂಘಟನೆಯಾಗಿ ಕೆಲ ವರ್ಷಗಳ ಹಿಂದೆ ಅಸ್ತಿತ್ವದಲ್ಲಿದ್ದ 'ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ' (LTTE) ಮುಖ್ಯಸ್ಥ ಪ್ರಭಾಕರನ್ ಕುರಿತ ಮಹತ್ವದ ಸತ್ಯವೊಂದು ತಡವಾಗಿ ಬೆಳಕಿಗೆ ಬಂದಿದೆ.
ಹೌದು, 'ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ' (LTTE) ಮುಖ್ಯಸ್ಥ ಪ್ರಭಾಕರನ್ ಸಾವಿನ ಕುರಿತು ತಮಿಳರ ರಾಷ್ಟ್ರೀಯವಾದಿ ಚಳುವಳಿಯ ನಾಯಕ ಪಜಾ ನೆಡುಮಾರನ್ ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ. ಎಲ್‌ಟಿಟಿಇ ನ ಮುಖ್ಯಸ್ಥ ಪ್ರಭಾಕರ್ ಇನ್ನೂ ಜೀವಂತವಾಗಿದ್ದಾರೆ. ಅವರು ಸೂಕ್ತ ಸಮಯದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ (ಎಲ್‌ಟಿಟಿಇ) ಮುಖ್ಯಸ್ಥ ಪ್ರಭಾಕರನ್ ಇನ್ನೂ ಜೀವಂತವಾಗಿದ್ದಾರೆ. ಅವರು ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ. ಸೂಕ್ತ ಸಮಯಕ್ಕೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿರುವ ಅವರು ತಮಿಳು ಜನಾಂಗದ ವಿಮೋಚನೆ ಸಂಬಂಧ ಯೋಜನೆ ಒಂದನ್ನು ಘೋಷಣೆ ಮಾಡಲಿದ್ದಾರೆ. ಪ್ರಪಂಚದ ಎಲ್ಲಾ ತಮಿಳು ಜನರು ಒಟ್ಟಾಗಿ ಅವರನ್ನು ಬೆಂಬಲಿಸಬೇಕು ಎಂದು ಪಜಾ ನಡುಮಾರನ್ ಮನವಿ ಮಾಡಿಕೊಂಡಿದ್ದಾರೆ.

ತಮಿಳರ ರಾಷ್ಟ್ರೀಯ ನಾಯಕ, ಎಲ್‌ಟಿಟಿಇ ಮುಖ್ಯಸ್ಥ ಪ್ರಭಾಕರನ್ ಸಂಬಂಧಿಸಿದ ಸತ್ಯವನ್ನು ತಮಿಳು ಜನರಿಗೆ ಹಾಗೂ ಜಗತ್ತಿಗೆ ತಿಳಿಸಲು ಸಂತೋಷವೆನಿಸುತ್ತದೆ. ಪ್ರಭಾಕರನ್ ಚನ್ನಾಗಿದ್ದಾರೆ ಎಂದು ನಡುಮಾರನ್ ತಿಳಿಸಿದ್ದಾರೆ. ಇದೊಂದು ಘೋಷಣೆ ಇದುವರೆಗೆ ಇದ್ದ ವ್ಯವಸ್ಥಿತವಾಗಿ ನಡೆಯುತ್ತಿದ್ದ ಊಹಾ ಪೋಹಗಳಿಗೆ ಅಂತ್ಯ ಹಾಡಿದೆ.
ಎಲ್‌ಟಿಟಿಇ ಮುಖ್ಯಸ್ಥ ಪ್ರಭಾಕರನ್ ಅವರನ್ನು ಶ್ರೀಲಂಕಾ ಸೇನಾಪಡೆ 2009 ರಲ್ಲಿ ಹತ್ಯೆಗೈಯ್ಯಲಾಗಿತ್ತು.
ತಮಿಳುನಾಡು-ಶ್ರೀಲಂಕಾದಲ್ಲಿ ವರ್ಷಗಳ ಹಿಂದೆ ಅಸ್ತಿತ್ವದಲ್ಲಿ ಇದ್ದ ಎಲ್‌ಟಿಟಿಇ ಬಗ್ಗೆ ತಿಳಿದಿರುವ ಸತ್ಯ. ಈ ಸಂಘಟನೆಯನ್ನು ವರ್ಷಗಳ ಹಿಂದೆಯೇ ವಿಸರ್ಜಿಸಲಾಗಿದ್ದು, ಆ ಸಂಘಟನೆಯ ನಾಯಕರಾದ ಪ್ರಭಾಕರನ್ ಅವರನ್ನು ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿತ್ತು.

2009ರ ಮೇ ತಿಂಗಳಲ್ಲಿ ಶ್ರೀಲಂಕಾ ದೇಶದ ಮಿಲಿಟರಿಯು ಪ್ರಭಾಕರನ್ ಹತ್ಯೆ ಬಗ್ಗೆ ಮಾಹಿತಿ ಒದಗಿಸಿತ್ತು. ಆ ಸಂದರ್ಭದಲ್ಲಿ ಶ್ರೀಲಂಕಾ ತಮಿಳರು ಯುದ್ಧ ನಡೆಸಿದ್ದರು. ಇದರಲ್ಲಿ ಹಲವು ತಮಿಳರು ಪ್ರಾಣ ಬಿಟ್ಟಿದ್ದರು. ವಿಶ್ವದಲ್ಲಿ ಬೇರೆ ಇರುವ ತಮಿಳರು ಈ ಹತ್ಯೆಯನ್ನು ಖಂಡಿಸಿದ್ದಾರೆ. ಶ್ರೀಲಂಕಾದಲ್ಲಿ ಅಂದು ಅಧ್ಯಕ್ಷರಾಗಿದ್ದ ಮಹಿಂದಾ ರಾಜಪಕ್ಸೆ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸಬೇಕೆಂದೂ ವಿದೇಶದಲ್ಲಿನ ತಮಿಳರು ಆಗ್ರಹಿಸಿದ್ದರು.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ












Click it and Unblock the Notifications