LPG Gas: ಎಲ್‌ಪಿಜಿ ಕೊರತೆ ನೀಗಿಸಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ; ಗ್ರಾಹಕರಿಗೆ ಸಿಗ್ತು ಭರ್ಜರಿ ಗುಡ್‌ ನ್ಯೂಸ್

PNG Gas: ಪಶ್ಚಿಮ ಏಷ್ಯಾದಲ್ಲಿನ ಭೌಗೋಳಿಕ ರಾಜಕೀಯ ಬಿಕ್ಕಟ್ಟಿನಿಂದಾಗಿ ಎಲ್‌ಪಿಜಿ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯವನ್ನು ಸರಿದೂಗಿಸಲು ಕೇಂದ್ರ ಸರ್ಕಾರವು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಭಾರತವು ಪೈಪ್‌ ಲೈನ್ ಮೂಲಕ ನೈಸರ್ಗಿಕ ಅನಿಲ (ಪಿಎನ್‌ಜಿ) ಪೂರೈಕೆ ವ್ಯವಸ್ಥೆಗೆ ಹೆಚ್ಚಿನ ವೇಗ ನೀಡಿದೆ. ಮಾರ್ಚ್ ತಿಂಗಳಿನಿಂದ ಈವರೆಗೆ 5.01 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಗ್ಯಾಸ್ ಸಂಪರ್ಕ ಕಲ್ಪಿಸಲಾಗಿದೆ. 5.68 ಲಕ್ಷಕ್ಕೂ ಹೆಚ್ಚು ಜನರು ಹೊಸದಾಗಿ ನೋಂದಣಿ ಮಾಡಿಕೊಂಡಿದ್ದಾರೆ.

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಅಡುಗೆ ಅನಿಲ (ಎಲ್‌ಪಿಜಿ) ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಮನೆಗಳು ಮತ್ತು ಕೈಗಾರಿಕೆಗಳಿಗೆ ಪಿಎನ್‌ಜಿ ಬಳಸುವಂತೆ ಸರ್ಕಾರ ಉತ್ತೇಜಿಸುತ್ತಿದೆ. ಪಿಎನ್‌ಜಿ ಹೆಚ್ಚು ಅನುಕೂಲಕರ ಪರ್ಯಾಯವಾಗಿದ್ದು, ಇದರ ಪೂರೈಕೆಯ ಮೇಲೆ ಯುದ್ಧದ ಪ್ರಭಾವ ಅಷ್ಟಾಗಿ ಉಂಟಾಗಿಲ್ಲ. ಆದ್ದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎನ್ನುವ ಮಾಹಿತಿಯಿದೆ.

LPG India Boosts PNG Connections Amid LPG Supply Concerns Due to West Asia Crisis Know details

ಪೈಪ್‌ಲೈನ್‌ ಮೂಲಕ ಪಿಎನ್‌ಜಿ ಸಂಪರ್ಕ ಹೆಚ್ಚಳ

ಪಿಎನ್‌ಜಿ ಸಂಪರ್ಕ ಲಭ್ಯವಿರುವ ವ್ಯಾಪ್ತಿಯಲ್ಲಿರುವ ಎಲ್‌ಪಿಜಿ ಗ್ರಾಹಕರಿಗೆ ಪೈಪ್‌ ಲೈನ್ ವ್ಯವಸ್ಥೆಗೆ ಬದಲಾಗುವಂತೆ ಸೂಚಿಸಲಾಗಿದೆ. ಜೊತೆಗೆ, ಮನೆಯಲ್ಲಿನ ಗ್ಯಾಸ್‌ ಒಲೆಗಳಿಗೆ ನೇರವಾಗಿ ಅನಿಲ ಪೂರೈಸುವ ಪೈಪ್‌ ಲೈನ್ ಅಳವಡಿಕೆ ಕಾರ್ಯಕ್ಕೆ ತ್ವರಿತವಾಗಿ ಅನುಮೋದನೆ ನೀಡುವಂತೆ ಆದೇಶ ಹೊರಡಿಸಲಾಗಿದೆ. ಈ ವ್ಯವಸ್ಥೆಯಿಂದ ಸಿಲಿಂಡರ್ ಬುಕಿಂಗ್ ಮತ್ತು ವಿತರಣೆಯ ವಿಳಂಬದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗುವ ನಿರೀಕ್ಷೆಯಿದೆ.

ಎಲ್‌ಪಿಜಿ ಬದಲಿಗೆ ಪಿಎನ್‌ಜಿ ಕಡೆಗೆ ಮುಖ ಮಾಡಿದ ಜನ

ನವದೆಹಲಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಅವರು ಮಹತ್ವದ ಮಾಹಿತಿಯನ್ನು ನೀಡಿದ್ದಾರೆ. "2026ರ ಮಾರ್ಚ್‌ನಿಂದ ಈವರೆಗೆ 5.01 ಲಕ್ಷಕ್ಕೂ ಹೆಚ್ಚು ಪಿಎನ್‌ಜಿ ಸಂಪರ್ಕಗಳಿಗೆ ಅನಿಲ ಪೂರೈಕೆ ಆರಂಭಿಸಲಾಗಿದೆ. ಅಲ್ಲದೆ, ಹೊಸ ಸಂಪರ್ಕಗಳಿಗಾಗಿ 5.68 ಲಕ್ಷಕ್ಕೂ ಹೆಚ್ಚು ಗ್ರಾಹಕರು ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ. ಏಪ್ರಿಲ್ 19ರವರೆಗೆ ಸುಮಾರು 39,400 ಪಿಎನ್‌ಜಿ ಕಡೆಗೆ ಹೆಚ್ಚು ಆಸಕ್ತಿ ತೋರಿದ್ದಾರೆ," ಎಂದು ಅವರು ತಿಳಿಸಿದ್ದಾರೆ.

ಆನ್‌ಲೈನ್ ಬುಕಿಂಗ್ ಪ್ರಮಾಣ ಹೆಚ್ಚಳ

"ದೇಶೀಯ ಎಲ್‌ಪಿಜಿ ಪೂರೈಕೆಯು ಸ್ಥಿರವಾಗಿದ್ದು, ವಿತರಕರಲ್ಲಿ ಅನಿಲದ ಕೊರತೆ ಉಂಟಾದ ಬಗ್ಗೆ ಯಾವುದೇ ವರದಿಗಳಿಲ್ಲ. ಅಡುಗೆ ಅನಿಲದ ಆನ್‌ಲೈನ್ ಬುಕಿಂಗ್ ಪ್ರಮಾಣ ಶೇಕಡಾ 98ಕ್ಕೆ ಏರಿಕೆಯಾಗಿದೆ. ಅನಿಲ ಪೂರೈಕೆಯು ದುರುಪಯೋಗವಾಗುವುದನ್ನು ತಡೆಯಲು ಜಾರಿಗೆ ತರಲಾದ 'ಡೆಲಿವರಿ ಅಥೆಂಟಿಕೇಶನ್ ಕೋಡ್' ಆಧಾರಿತ ಪೂರೈಕೆಯು ಶೇಕಡಾ 92ಕ್ಕೆ ಹೆಚ್ಚಳವಾಗಿದೆ," ಎಂದು ಮಾಹಿತಿ ನೀಡಿದರು.

ವಾಣಿಜ್ಯ ಎಲ್‌ಪಿಜಿ ಲಭ್ಯತೆಯನ್ನು ಬಿಕ್ಕಟ್ಟಿನ ಮುಂಚೆಗಿಂತ ಸುಮಾರು ಶೇಕಡ 70ಕ್ಕೆ ಹೆಚ್ಚಿಸಲಾಗಿದೆ. ಜೊತೆಗೆ ಪೈಪ್‌ಲೈನ್‌ ಮೂಲಕ ನೈಸರ್ಗಿಕ ಅನಿಲ (PNG) ಬಳಕೆಗೆ ಉತ್ತೇಜನ ನೀಡಲಾಗುತ್ತಿದೆ. ಸರ್ಕಾರವು ವಲಸೆ ಕಾರ್ಮಿಕರಿಗಾಗಿ ರಾಜ್ಯಗಳ ಮೂಲಕ ನೀಡಲಾಗುವ 5 ಕೆ.ಜಿ. ಸಿಲಿಂಡರ್‌ಗಳ ದೈನಂದಿನ ಪೂರೈಕೆಯನ್ನು ಹೆಚ್ಚಳ ಮಾಡಿದೆ. ಮಾರ್ಚ್ ಅಂತ್ಯದಿಂದ ಈವರೆಗೆ ದೇಶಾದ್ಯಂತ ನಡೆಸಲಾದ ಜಾಗೃತಿ ಅಭಿಯಾನಗಳಿಂದ 19.2ಲಕ್ಷಕ್ಕೂ ಹೆಚ್ಚು ಇಂತಹ ಸಿಲಿಂಡರ್‌ಗಳನ್ನು ಮಾರಾಟ ಮಾಡಲಾಗಿದೆ ಎಂದು ತಿಳಿದುಬಂದಿದೆ.

"ಏಪ್ರಿಲ್ 1ರಿಂದ ಏಪ್ರಿಲ್ 20ರವರೆಗಿನ ಅವಧಿಯಲ್ಲಿ ವಾಣಿಜ್ಯ ಎಲ್‌ಪಿಜಿ (LPG) ಮಾರಾಟವು ಸುಮಾರು 1,23,680 ಟನ್‌ಗಳಷ್ಟಿತ್ತು. ಇದು 65 ಲಕ್ಷಕ್ಕೂ ಅಧಿಕ (19 ಕೆಜಿ ತೂಕದ) ಸಿಲಿಂಡರ್‌ಗಳಿಗೆ ಸಮಾನವಾಗಿದೆ. ಏಪ್ರಿಲ್ 20ರಂದು ಒಂದೇ ದಿನ 8,822 ಟನ್ ಮಾರಾಟವಾಗಿದೆ," ಎಂದು ಅವರು ತಿಳಿಸಿದ್ದಾರೆ.

ನಗರ ಅನಿಲ ವಿತರಣಾ ಕೇಂದ್ರಗಳಿಗೆ ನೈಸರ್ಗಿಕ ಅನಿಲ ಪೂರೈಕೆಯಲ್ಲಿ ಆದ್ಯತೆ ನೀಡಲಾಗಿದೆ. ಗೃಹಬಳಕೆಯ ಪಿಎನ್‌ಜಿ ಮತ್ತು ಸಾರಿಗೆ ವಲಯದ ಸಿಎನ್‌ಜಿ ವಿಭಾಗಗಳಿಗೆ ಪೂರ್ಣ ಪ್ರಮಾಣದ ಹಂಚಿಕೆ ಮಾಡಲಾಗಿದ್ದು, ರಸಗೊಬ್ಬರ ಕಾರ್ಖಾನೆಗಳು ಮತ್ತು ಕೈಗಾರಿಕೆಗಳಿಗೆ ಪೂರೈಕೆಯನ್ನು ಹೆಚ್ಚಿಸಲಾಗಿದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿಯು ದೇಶಾದ್ಯಂತ ಹಮ್ಮಿಕೊಂಡಿರುವ ಪೈಪ್‌ಲೈನ್‌ನ ನೈಸರ್ಗಿಕ ಅನಿಲ (PNG) ವಿಸ್ತರಣಾ ಅಭಿಯಾನವನ್ನು ಜೂನ್ 30 ರವರೆಗೆ ವಿಸ್ತರಿಸಿದೆ ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+