LPG Price: ಎಲ್‌ಪಿಜಿ ಬಳಕೆದಾರರಿಗೆ ಕೇಂದ್ರ ಸರ್ಕಾರದಿಂದ ಬಿಗ್ ರಿಲೀಫ್
ಎಲ್‌ಪಿಜಿ ಬಳಕೆದಾರರಿಗೆ ಕೇಂದ್ರ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದೆ. ದೇಶದಲ್ಲಿ ಪ್ರತಿ ತಿಂಗಳು ಕೂಡ ಎಲ್‌ಪಿಜಿ ಸಿಲಿಂಡರ್ ದರಗಳು ಏರಿಳಿತ ಕಾಣುತ್ತಿವೆ. ಆದರೂ ಬಡ ಮಹಿಳೆಯರಿಗೆ ಸಬ್ಸಿಡಿ ಮೂಲಕ ಎಲ್‌ಪಿಜಿ ಸಿಲಿಂಡರ್ ಅನ್ನು ಮನೆಬಾಗಿಲಿಗೆ ವಿತರಣೆ ಮಾಡುವ ವ್ಯವಸ್ಥೆ ಜಾರಿಯಲ್ಲಿದೆ. ಆದರೆ ಸದ್ಯ ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆಗೆ ಸಮಸ್ಯೆಯಾಗಿದೆಯೇ ಎಂಬ ಪ್ರಶ್ನೆಗಳು ಮುನ್ನೆಲೆಗೆ ಬಂದಿವೆ. ಇದಕ್ಕೆ ಪೂರಕವಾಗಿ ಭಾರತದ ಸಾರ್ವಜನಿಕ ವಲಯದ ತೈಲ ಕಂಪನಿಗಳು ಎಲ್‌ಪಿಜಿಯನ್ನು ವಿದೇಶದಿಂದ ಆಮದು ಮಾಡಿಕೊಳ್ಳಲು ಮುಂದಾಗಿವೆ ಎಂದು ವರದಿಯಾಗಿದೆ. ಇದರಿಂದ ಎಲ್‌ಪಿಜಿ ಬಳಕೆದಾರರಿಗೆ ಏನೆಲ್ಲ ಅನುಕೂಲವಾಗಬಹುದು? ದರ ಮತ್ತಷ್ಟು ಇಳಿಕೆಯಾಗುತ್ತಾ? ಎಂಬುದನ್ನು ಇಲ್ಲಿ ತಿಳಿಯಿರಿ.
ಹೌದು, ಭಾರತದ ಸಾರ್ವಜನಿಕ ವಲಯದ ತೈಲ ಕಂಪನಿಗಳು ಈಗ ಅಮೆರಿಕದ ಗಲ್ಫ್ ಕರಾವಳಿಯಿಂದ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) ಆಮದು ಮಾಡಿಕೊಳ್ಳುವ ಒಂದು ವರ್ಷದ ಒಪ್ಪಂದವನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿವೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿರುವ ಅವರು, 2026ರ ಒಪ್ಪಂದದಂತೆ ವರ್ಷಕ್ಕೆ ಅಮೇರಿಕಾದ ಗಲ್ಫ್ ಕರಾವಳಿಯಿಂದ ಭಾರತವು ವಾರ್ಷಿಕವಾಗಿ ಸುಮಾರು 2.2 ಮಿಲಿಯನ್ ಟನ್‌ಗಳಷ್ಟು ಎಲ್‌ಪಿಜಿ ಆಮದು ಮಾಡಿಕೊಳ್ಳಲಿದೆ. ಇದು "ಭಾರತೀಯ ಮಾರುಕಟ್ಟೆಗೆ ಯುಎಸ್ ಎಲ್‌ಪಿಜಿಯ ಮೊದಲ ರಚನಾತ್ಮಕ ಒಪ್ಪಂದ ಎಂದಿದ್ದಾರೆ.

ಇದು ಇತಿಹಾಸದಲ್ಲೇ ಮೊದಲು. ವಿಶ್ವದ ಅತಿದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ಎಲ್‌ಪಿಜಿ ಮಾರುಕಟ್ಟೆಗಳಲ್ಲಿ ಒಂದಾದ ಅಮೆರಿಕ ಸಂಯುಕ್ತ ಸಂಸ್ಥಾನವು ನಮ್ಮೊಂದಿಗೆ ಎಲ್‌ಪಿಜಿ ಪೂರೈಕೆ ಮಾಡಲಿದೆ. ಭಾರತದ ಜನರಿಗೆ ಸುರಕ್ಷಿತ ಹಾಗು ಕೈಗೆಟುಕುವ ದರಕ್ಕೆ ಎಲ್‌ಪಿಜಿ ಸರಬರಾಜುಗಳನ್ನು ಒದಗಿಸುವ ನಮ್ಮ ಪ್ರಯತ್ನದಲ್ಲಿ ನಮ್ಮ ಎಲ್‌ಪಿಜಿ ಸೋರ್ಸಿಂಗ್ ಅನ್ನು ವೈವಿಧ್ಯಗೊಳಿಸುತ್ತಿದ್ದೇವೆ. ಈ ಒಪ್ಪಂದದಂತೆ 2.2 ಮಿಲಿಯನ್ ಟನ್‌ಗಳಷ್ಟು ಎಲ್‌ಪಿಜಿ ಆಮದು ಭಾರತದ ವಾರ್ಷಿಕ ಆಮದಿನ ಶೇ 10ರಷ್ಟಿರುತ್ತದೆ ಎಂದು ಹೇಳಿದ್ದಾರೆ.
ಈ ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ಪಿಎಸ್‌ಯು ತೈಲ ಕಂಪನಿಗಳು ಸುಮಾರು ಎಲ್‌ಪಿಜಿ ಆಮದು ಮಾಡಿಕೊಳ್ಳಲು 1 ವರ್ಷದ ಒಪ್ಪಂದವನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿವೆ. ಇದು ನಮ್ಮ ವಾರ್ಷಿಕ ಆಮದಿನ ಸುಮಾರು ಶೇ 10ರಷ್ಟಿರಲಿದೆ. 2026ರ ಒಪ್ಪಂದದಡಿ ಒಂದು ವರ್ಷಕ್ಕೆ ಅಮೇರಿಕಾ ಗಲ್ಫ್ ಕೋಸ್ಟ್‌ನಿಂದ ಎಲ್‌ಪಿಜಿ ಪಡೆಯಲಾಗುವುದು. ಈ ಖರೀದಿಯು ಎಲ್‌ಪಿಜಿ ಖರೀದಿಗಳಿಗೆ ಮಾನದಂಡವಾಗಿ ಮೌಂಟ್ ಬೆಲ್ವಿಯು ಅನ್ನು ಬಳಸುವುದನ್ನು ಆಧರಿಸಿದೆ. ನಮ್ಮ ಇಂಡಿಯನ್ ಆಯಿಲ್, ಬಿಪಿಸಿಎಲ್, ಎಚ್‌ಪಿಸಿಎಲ್‌ನ ಅಧಿಕಾರಿಗಳ ತಂಡವು ಅಮೇರಿಕಾಗೆ ಭೇಟಿ ನೀಡಿ ಕಳೆದ ಕೆಲವು ತಿಂಗಳುಗಳಿಂದ ಪ್ರಮುಖ ಉತ್ಪಾದಕರೊಂದಿಗೆ ಚರ್ಚೆಗಳಲ್ಲಿ ತೊಡಗಿಸಿಕೊಂಡಿತ್ತು. ಅಂತಿಮವಾಗಿ ಈಗ ಇದನ್ನು ಮುಕ್ತಾಯಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಉಜ್ವಲ ಗ್ರಾಹಕರಿಗೆ ಕೇವಲ ₹500ಕ್ಕೆ ಎಲ್‌ಪಿಜಿ
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಮ್ಮ ಪಿಎಸ್‌ಯು ತೈಲ ಕಂಪನಿಗಳು ನಮ್ಮ ಎಲ್ಲ ತಾಯಂದಿರು ಮತ್ತು ಸಹೋದರಿಯರಿಗೆ ಕಡಿಮೆ ಜಾಗತಿಕ ಬೆಲೆಯಲ್ಲಿ ಎಲ್‌ಪಿಜಿಯನ್ನು ಒದಗಿಸುತ್ತಿವೆ. ಕಳೆದ ವರ್ಷ ಜಾಗತಿಕ ಬೆಲೆಗಳು ಶೇ 60ಕ್ಕಿಂತ ಹೆಚ್ಚಿಗೆ ಏರಿದ್ದರೂ, ಮೋದಿ ಅವರು ನಮ್ಮ ಉಜ್ವಲ ಗ್ರಾಹಕರಿಗೆ ಕೇವಲ ₹500-550ಗೆ ಎಲ್‌ಪಿಜಿ ಸಿಲಿಂಡರ್ ಪಡೆಯುವುದನ್ನು ಮುಂದುವರೆಸಿದರು. ಆದರೆ ಆಗ ಸಿಲಿಂಡರ್‌ನ ನಿಜವಾದ ಬೆಲೆ ₹1100ಕ್ಕಿಂತ ಏರಿಕೆ ಕಂಡಿತ್ತು. ಅಂತರರಾಷ್ಟ್ರೀಯ ಎಲ್‌ಪಿಜಿ ಬೆಲೆಗಳ ಏರಿಕೆಯ ಹೊರೆಯನ್ನು ನಮ್ಮ ತಾಯಂದಿರು ಮತ್ತು ಸಹೋದರಿಯರು ಅನುಭವಿಸದಂತೆ ನೋಡಿಕೊಳ್ಳಲು ಕಳೆದ ವರ್ಷ ಭಾರತ ಸರ್ಕಾರವು ₹40,000 ಕೋಟಿಗಳಿಗೂ ಹೆಚ್ಚು ವೆಚ್ಚವನ್ನು ಭರಿಸಿದೆ ಎಂದಿದ್ದಾರೆ.
-
Kerosene: ಎಲ್‌ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
ಮಾರ್ಚ್ 30ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral












Click it and Unblock the Notifications