ಎಲ್‌ಪಿಜಿ ಸಿಲಿಂಡರ್ ದರ ಏರಿಕೆ: ಎಲ್ಲಿ ಎಷ್ಟು?

Recommended Video

      LPG cylinder prices hike from today | LPG | Indian oil | Bharath | ONGC | Oneindia Kannada

      ನವದೆಹಲಿ, ಫೆಬ್ರವರಿ 12: ಎಲ್‌ಪಿಜಿ ಸಿಲಿಂಡರ್ ದರ ಸುಮಾರು 150 ರೂ. ಏರಿಕೆಯಾಗಿದೆ. ಈರುಳ್ಳಿ, ಪೆಟ್ರೋಲ್, ತರಕಾರಿಗಳ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ದೇಶದ ಜನತೆಗೆ ಇದೀಗ ಸಿಲಿಂಡರ್ ದರ ಹೆಚ್ಚಳ ಕೂಡ ಶಾಕ್ ನೀಡಿದೆ.

      ಎಲ್​ಪಿಜಿ ಸಿಲಿಂಡರ್​ಗಳಿಗೆ ಸರಾಸರಿ ಶೇ. 20ರಷ್ಟು ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಇಂಡೇನ್ ಗ್ಯಾಸ್ ಸಿಲಿಂಡರ್ ಬೆಲೆ 850ರ ಗಡಿ ದಾಟಿದೆ.ಸಬ್ಸಿಡಿ ರಹಿತ ಎಲ್​ಪಿಜಿ ಸಿಲಿಂಡರ್​ಗಳ ಬೆಲೆ ಮೆಟ್ರೋ ನಗರಗಳಲ್ಲಿ ಹೆಚ್ಚಳವಾಗಿದೆ. ದೆಹಲಿಯಲ್ಲಿ 14.2 ಕೆ.ಜಿ. ತೂಕದ ಎಲ್​ಪಿಜಿ ಸಿಲಿಂಡರ್​ಗಳ ಬೆಲೆ 858.50 ರೂ. (144.50 ರೂ. ಹೆಚ್ಚಳ) ಇದೆ.

      ಕೊಲ್ಕತಾದಲ್ಲಿ 896 ರೂ. (149 ರೂ. ಹೆಚ್ಚಳ), ಮುಂಬೈನಲ್ಲಿ 829.50 (145 ರೂ. ಹೆಚ್ಚಳ), ಹಾಗೂ ಚೆನ್ನೈನಲ್ಲಿ 881 ರೂ. (147 ರೂ. ಹೆಚ್ಚಳ) ಆಗಿದೆ. ಜನವರಿ 1ರಂದು ದೆಹಲಿಯಲ್ಲಿ ಎಲ್​ಪಿಜಿ ಸಿಲಿಂಡರ್​ ಬೆಲೆ 19 ರೂ , ಮುಂಬೈನಲ್ಲಿ 19.5 ರೂ. ಏರಿಕೆಯಾಗಿತ್ತು. ಕೊಲ್ಕತ್ತಾದಲ್ಲಿ ಗ್ಯಾಸ್ ಸಿಲಿಂಡರ್​​​​​ ಬೆಲೆ 21.5 ರೂ. ಹಾಗೂ ಚೆನ್ನೈನಲ್ಲಿ 20 ರೂ. ಹೆಚ್ಚಿಸಲಾಗಿತ್ತು. ಇದೀಗ ಮತ್ತೊಮ್ಮೆ ಬೆಲೆಯನ್ನು ಹೆಚ್ಚಿಸಿರುವುದಾಗಿ ಇಂಡಿಯನ್ ಆಯಿಲ್ ಕಾರ್ಪೋರೇಷನ್ ತಿಳಿಸಿದೆ.

      LPG Cylinder Prices Hiked Nearly By Rs 150

      19 ಕೆ.ಜಿ. ತೂಕದ ಎಲ್​ಪಿಜಿ ಸಿಲಿಂಡರ್​ಗಳ ಬೆಲೆಯಲ್ಲೂ ಏರಿಕೆಯಾಗಿದೆ. ದೆಹಲಿಯಲ್ಲಿ 1,466 ರೂ, ಕೊಲ್ಕತಾದಲ್ಲಿ 1,540.50 ರೂ, ಮುಂಬೈನಲ್ಲಿ 1,416 ರೂ, ಚೆನ್ನೈನಲ್ಲಿ 1,589.50 ರೂ. ನಿಗದಿಗೊಳಿಸಲಾಗಿದೆ. ಈ ಮೂಲಕ 2019ರ ಸೆಪ್ಟೆಂಬರ್ ನಂತರ ದೇಶದಲ್ಲಿ 6ನೇ ಬಾರಿಗೆ ಎಲ್​ಪಿಜಿ ಸಿಲಿಂಡರ್​ಗಳ ಬೆಲೆಯಲ್ಲಿ ಹೆಚ್ಚಳವಾದಂತಾಗಿದೆ.

      ಮೊದಲು ಗ್ಯಾಸ್ ಸಿಲಿಂಡರ್​ಗಳ ಬೆಲೆಯಲ್ಲಿ 19 ರೂ. ಏರಿಕೆಯಾಗಿತ್ತು. ಇದೀಗ ಮತ್ತೆ ಹೆಚ್ಚಳವಾಗಿರುವ ಸಿಲಿಂಡರ್ ಬೆಲೆಯಿಂದ ಗ್ರಾಹಕರ ಮೇಲೆ ಮತ್ತಷ್ಟು ಹೊರೆ ಬಿದ್ದಂತಾಗಿದೆ. ಸರಾಸರಿ ಒಟ್ಟಾರೆ ಶೇ. 20ರಷ್ಟು ಎಲ್​ಪಿಜಿ ಸಿಲಿಂಡರ್​ಗಳ ಬೆಲೆ ಏರಿಕೆಯಾದಂತಾಗಿದೆ. ಬೆಂಗಳೂರು ಸೇರಿದಂತೆ ದೇಶದ ಎಲ್ಲ ಮೆಟ್ರೋ ನಗರಗಳಲ್ಲಿ ಇಂದಿನಿಂದ ಸಬ್ಸಿಡಿರಹಿತ ಎಲ್​ಪಿಜಿ ಸಿಲಿಂಡರ್​ಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಲಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+