LPG Price: ಎಲ್‌ಪಿಜಿ ಸಿಲಿಂಡರ್‌ ಬೆಲೆ ಭಾರೀ ಇಳಿಕೆ, ಪರಿಷ್ಕೃತ ದರ ಎಷ್ಟಿದೆ?

ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ದಿನದಂದೇ ಸಿಹಿಸುದ್ದಿ ಸಿಕ್ಕಿದೆ. ನವೆಂಬರ್‌ ತಿಂಗಳ ಮೊದಲ ದಿನವೇ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಭರ್ಜರಿ ಇಳಿಕೆ ಕಂಡಿದೆ. ನವೆಂಬರ್ 1 ಶನಿವಾರದಿಂದಲೇ ಜಾರಿಗೆ ಬರುವಂತೆ ದೇಶದ ಪ್ರಮುಖ ಮಹಾನಗರಗಳಲ್ಲಿ 19 ಕೆ.ಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಕಡಿಮೆ ಮಾಡಲಾಗಿದೆ. ಯಾವ ನಗರದಲ್ಲಿ ಎಲ್‌ಪಿಜಿ ಹೊಸ ದರ ಎಷ್ಟಿದೆ ಎನ್ನುವ ವಿವರ ಇಲ್ಲಿದೆ.

ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್), ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ಪ್ರತಿ ತಿಂಗಳ ಮೊದಲ ದಿನದಂದು ಅಂತರರಾಷ್ಟ್ರೀಯ ಇಂಧನದ ಸರಾಸರಿ ಬೆಲೆ ಮತ್ತು ವಿದೇಶಿ ವಿನಿಮಯ ದರ ಆಧರಿಸಿ ಎಟಿಎಫ್ ಮತ್ತು ಎಲ್‌ಪಿಜಿ ಬೆಲೆಗಳನ್ನು ಪರಿಷ್ಕರಿಸುತ್ತವೆ. ಅದರಂತೆ ಸದ್ಯ ವಾಣಿಜ್ಯ ಸಿಲಿಂಡರ್‌ನ ಬೆಲೆ ಭಾರೀ ಇಳಿಕೆಯಾಗಿದೆ.

LPG Cylinder Price Cut Major Reduction In Commercial LPG Rates From November 1

ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯನ್ನು ಕಡಿಮೆ ಮಾಡಿವೆ. ಸದ್ಯ ವಾಣಿಜ್ಯ ಎಲ್‌ಪಿಜಿ ದರಗಳು ಸಿಲಿಂಡರ್‌ಗೆ 6.50 ರೂಪಾಯಿವರೆಗೆ ಕಡಿಮೆಯಾಗಿದೆ. ಇದರಿಂದಾಗಿ ದೈನಂದಿನ ಕಾರ್ಯಾಚರಣೆಗಳಿಗೆ ಎಲ್‌ಪಿಜಿಯನ್ನು ಹೆಚ್ಚು ಅವಲಂಬಿಸಿರುವ ರೆಸ್ಟೋರೆಂಟ್‌ಗಳು, ಹೋಟೆಲ್‌ಗಳಿಗೆ ಈ ದರ ಇಳಿಕೆಯಿಂದ ರಿಲೀಫ್‌ ಸಿಕ್ಕಿದೆ. ಸದ್ಯ ವಾಣಿಜ್ಯ ಬಳಕೆ ಸಿಲಿಂಡರ್‌ಗಳ ಬೆಲೆ ಮಾತ್ರ ಕಡಿಮೆಯಾಗಿದ್ದು, ಗೃಹಬಳಕೆ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಗಳು ಸ್ಥಿರವಾಗಿದೆ. ಇಲ್ಲಿಯವರೆಗೆ ಅಂತಹ ಯಾವುದೇ ಬದಲಾವಣೆಗಳನ್ನು ಘೋಷಿಸಲಾಗಿಲ್ಲ.

ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಇಂಧನ ಬೆಲೆಗಳಲ್ಲಿನ ಮಾಸಿಕ ಪರಿಷ್ಕರಣೆಯಲ್ಲಿ ವಿಮಾನ ಟರ್ಬೈನ್ ಇಂಧನ (ಎಟಿಎಫ್) ಬೆಲೆಗಳನ್ನು ಸಹ ಸುಮಾರು ಶೇ 1ರಷ್ಟು ಹೆಚ್ಚಿಸಲಾಗಿದೆ. ಇದರಿಂದ ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯವಹಾರಗಳಿಗೆ ಸ್ವಲ್ಪ ವಿಶ್ರಾಂತಿ ನೀಡುತ್ತದೆ. ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳ ಪರಿಷ್ಕರಣೆ ಬಳಿಕ ದೆಹಲಿಯಲ್ಲಿ ಹೊಸ ಚಿಲ್ಲರೆ ಬೆಲೆ ಈಗ 1,590.50 ರೂ.ಗಳಾಗಿದ್ದು, 5 ರೂ.ಗಳವರೆಗೆ ಇಳಿಕೆಯಾಗಿದೆ.

ಯಾವ ನಗರಗಳಲ್ಲಿ ದರ ಎಷ್ಟಿದೆ?

ಸೆಪ್ಟೆಂಬರ್‌ನಲ್ಲಿ 19 ಕೆಜಿ ಸಿಲಿಂಡರ್‌ ಬೆಲೆ 15.50 ರೂ. ಹೆಚ್ಚಳ ಘೋಷಿಸಿದ ನಂತರ ಈ ಬೆಲೆ ಇಳಿಕೆ ಕಂಡುಬಂದಿದೆ. ಪ್ರಸ್ತುತ ಕೋಲ್ಕತ್ತಾದಲ್ಲಿ ಬೆಲೆ ಕುಸಿತಗೊಂಡಿದ್ದು, ಪ್ರತಿ ಸಿಲಿಂಡರ್‌ಗೆ 6.50 ರೂ.ಗಳಷ್ಟು ಬೆಲೆ ಇಳಿಕೆಯಾಗಿದೆ. ಮುಂಬೈನಲ್ಲಿ 1,542 ರೂ, ಚೆನ್ನೈನಲ್ಲಿ 1,750 ಇದೆ. ಬೆಂಗಳೂರಿನಲ್ಲಿ ವಾಣಿಜ್ಯ ಸಿಲಿಂಡರ್‌ ಬೆಲೆಯು 1,664.50 ರೂಪಾಯಿ ಆಗಿದ್ದು, 4.50 ರೂ ಇಳಿಕೆ ಕಂಡಿದೆ. ವಾಣಿಜ್ಯ ಎಲ್‌ಪಿಜಿಯನ್ನು ಹೆಚ್ಚು ಅವಲಂಬಿಸಿರುವ ರೆಸ್ಟೋರೆಂಟ್‌ಗಳು, ಹೋಟೆಲ್‌ಗಳಿಗೆ ಇದರಿಂದ ರಿಲೀಫ್‌ ಸಿಕ್ಕಂತಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಜೆಟ್ ಇಂಧನ (ಎಟಿಎಫ್) ಬೆಲೆಯನ್ನು ಪ್ರತಿ ಕಿಲೋಲೀಟರ್‌ಗೆ 777 ರೂಪಾಯಿಯಷ್ಟು ಏರಿಕೆಯಾಗಿದೆ. ಬೆಲೆ ಶೇ 0.8ರಷ್ಟು ಹೆಚ್ಚಿಸಲಾಗಿದ್ದು, ಪ್ರತಿ ಕಿಲೋಲೀಟರ್‌ಗೆ 94,543.02 ರೂ.ಗೆ ತಲುಪಿದೆ ಎಂದು ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳು ತಿಳಿಸಿದ್ದಾರೆ. ಎಟಿಎಫ್ ದರಗಳಲ್ಲಿ ಸತತ ಎರಡನೇ ತಿಂಗಳು ಹೆಚ್ಚಳವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+