LPG: ಕೇವಲ 300 ರೂಪಾಯಿಗೆ ಎಲ್ಪಿಜಿ ಸಿಲಿಂಡರ್ ಘೋಷಿಸಿದ ಸರ್ಕಾರ
ಕೇಂದ್ರ ಸರ್ಕಾರವು ಸಬ್ಸಿಡಿ ಮೂಲಕ ಎಲ್ಪಿಜಿ ಸಿಲಿಂಡರ್ ಅನ್ನು ಮನೆಬಾಗಿಲಿಗೆ ತಲುಪಿಸುತ್ತಿದೆ. ಡಿಸೆಂಬರ್ ಆರಂಭದಲ್ಲೇ ವಾಣಿಜ್ಯ ಬಳಕೆ ಸಿಲಿಂಡರ್ ದರ ಇಳಿಸುವ ಮೂಲಕ ಗುಡ್ನ್ಯೂಸ್ ಕೊಟ್ಟಿದೆ. ಆದರೆ ದಿನಬಳಕೆ ಸಿಲಿಂಡರ್ ದರ ಯತಾಸ್ಥಿತಿಯಲ್ಲಿದ್ದು, ಕರ್ನಾಟಕದಲ್ಲಿ ದಿನಬಳಕೆ ಎಲ್ಪಿಜಿ ದರ ₹855.50 ಇದೆ. ಆದರೆ ಅಸ್ಸಾಂ ಸರ್ಕಾರ ಕೇವಲ ₹300ಗೆ ಎಲ್ಪಿಜಿ ಸಿಲಿಂಡರ್ ಲಭ್ಯವಾಗುವಂತೆ ಪ್ರಮುಖ ಸಬ್ಸಿಡಿಯನ್ನು ಘೋಷಿಸಿದೆ.
ಹೌದು, ಅಸ್ಸಾಂ ಸರ್ಕಾರವು ಅರ್ಹರ ಮನೆಗಳಿಗೆ ಕೇವಲ ₹300ಗೆ ಎಲ್ಪಿಜಿ ಸಿಲಿಂಡರ್ ಲಭ್ಯವಾಗುವಂತೆ ಪ್ರಮುಖ ಸಬ್ಸಿಡಿಯನ್ನು ಘೋಷಿಸುವ ಮೂಲಕ ಬಡ ಕುಟುಂಬಗಳಿಗೆ ನೆಮ್ಮದಿ ನೀಡಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ) ಅಡಿಯಲ್ಲಿ ಕಡಿಮೆ ಆದಾಯದ ಕುಟುಂಬಗಳನ್ನು ಗುರಿಯಾಗಿರಿಸಿ ಈ ಘೋಷಣೆ ಮಾಡಲಾಗಿದೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಡಿಸೆಂಬರ್ ಆರಂಭದಲ್ಲೇ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಹಂಚಿಕೊಂಡರು.

ರಾಜ್ಯದ ಲಕ್ಷಾಂತರ ಕುಟುಂಬಗಳಿಗೆ 300 ರೂಪಾಯಿಗೆ ಎಲ್ಪಿಜಿ ಸಿಲಿಂಡರ್ ಶೀಘ್ರದಲ್ಲೇ ಕೈಸೇರಲಿದೆ ಎಂದು ಘೋಷಿಸಿದರು. ಕಡಿಮೆ ಆದಾಯದ ಕುಟುಂಬಗಳ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರುವ ಈ ಉಪಕ್ರಮವು ಒರುನೋಡೈ ಯೋಜನೆ ಮತ್ತು ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಫಲಾನುಭವಿಗಳಿಗೆ ಎಲ್ಪಿಜಿ ಸಿಲಿಂಡರ್ಗಳ ಮೇಲೆ 250 ರೂಪಾಯಿ ಸಬ್ಸಿಡಿ ಒದಗಿಸುತ್ತದೆ ಎಂದಿದ್ದಾರೆ.
ರಾಜ್ಯ ಸರ್ಕಾರವು ಶುದ್ಧ ಅಡುಗೆ ಇಂಧನವನ್ನು ಕೈಗೆಟುಕುವ ದರದಲ್ಲಿ ಪಡೆಯಲು ಹೆಚ್ಚುವರಿ ಬೆಂಬಲವನ್ನು ನೀಡಲಿದೆ ಎಂದಿದ್ದಾರೆ. ಅದರಂತೆ ಕೇವಲ 300 ರೂಪಾಯಿಗೆ ಅಡುಗೆ ಅನಿಲ ಸಿಗುವುದು ಇನ್ಮುಂದೆ ಕೇವಲ ಕನಸಲ್ಲ, ಆದರೆ ಅಸ್ಸಾಂನ ಲಕ್ಷಾಂತರ ಕುಟುಂಬಗಳಿಗೆ ಶೀಘ್ರದಲ್ಲೇ ಇದು ಕಾರ್ಯರೂಪಕ್ಕೆ ಬರಲಿದೆ ಎಂದು ಸಿಹಿಸುದ್ದಿ ನೀಡಿದ್ದಾರೆ.
ಅಸ್ಸಾಂನ ಒರುನೋಡಿ ಕುಟುಂಬಗಳು ಮತ್ತು ಪಿಎಂ ಉಜ್ವಲ ಫಲಾನುಭವಿಗಳು ಶೀಘ್ರದಲ್ಲೇ ರಾಜ್ಯ ಸರ್ಕಾರದಿಂದ ತಮ್ಮ ಎಲ್ಪಿಜಿ ಸಿಲಿಂಡರ್ಗಳಿಗೆ ರೂ. 250 ಸಬ್ಸಿಡಿ ಪಡೆಯಲಿದ್ದಾರೆ. ಇದು ನನ್ನ ಕುಟುಂಬ ಸದಸ್ಯರಿಗೆ ಜೀವನವನ್ನು ಮತ್ತಷ್ಟು ಸುಲಭಗೊಳಿಸುತ್ತದೆ ಎಂದು ಅವರು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ ಪಿಎಂಯುವೈ ಅಡಿಯಲ್ಲಿ ಕೇಂದ್ರ ಸರ್ಕಾರದ ಅಸ್ತಿತ್ವದಲ್ಲಿರುವ ಬೆಂಬಲಕ್ಕೆ ಪೂರಕವಾಗಿ ಈ ಸಬ್ಸಿಡಿಯನ್ನು ನೇರವಾಗಿ ಫಲಾನುಭವಿಗಳಿಗೆ ನೀಡಲು ಅಸ್ಸಾಂ ಸರ್ಕಾರ ಮುಂದಾಗಿದೆ.
ಸರ್ಕಾರದ ಈ ಕ್ರಮದಿಂದಾಗಿ ಆರ್ಥಿಕವಾಗಿ ದುರ್ಬಲ ಕುಟುಂಬಗಳ ದೊಡ್ಡ ಭಾಗಕ್ಕೆ, ವಿಶೇಷವಾಗಿ ಮಹಿಳೆಯರಿಗೆ ಪ್ರಯೋಜನವನ್ನು ನೀಡುತ್ತದೆ. ಅಸ್ಸಾಂನ ಒರುನೋಡೈ ಮತ್ತು ಪಿಎಂಯುವೈ ಫಲಾನುಭವಿಗಳಿಗೆ ಈ ನಿರ್ಧಾರವು ದೊಡ್ಡ ವರದಾನವಾಗಲಿದೆ. ಅಸ್ಸಾಂನ ಪ್ರಮುಖ ಕಲ್ಯಾಣ ಕಾರ್ಯಕ್ರಮಗಳಲ್ಲಿ ಒಂದಾದ ಒರುನೋಡೈ ಯೋಜನೆಯು ಪ್ರಸ್ತುತ ಅರ್ಹ ಕುಟುಂಬಗಳಿಗೆ ಅಗತ್ಯ ವೆಚ್ಚಗಳನ್ನು ಪೂರೈಸಲು ಮಾಸಿಕವಾಗಿ ಆರ್ಥಿಕ ಸಹಾಯವನ್ನು ಒದಗಿಸುತ್ತಿದೆ.
ಕರ್ನಾಟಕದಲ್ಲೂ ದರ ಇಳಿಕೆ?
ಹೀಗಾಗಿ ಸದ್ಯ ಎಲ್ಪಿಜಿ ಸಬ್ಸಿಡಿಯನ್ನು ಇದೇ ಯೋಜನೆಗೆ ಸಂಯೋಜಿಸುವ ಮೂಲಕ ರಾಜ್ಯ ಸರ್ಕಾರವು ಹೆಚ್ಚುತ್ತಿರುವ ಮನೆಯ ವೆಚ್ಚಗಳನ್ನು ಮತ್ತಷ್ಟು ಪರಿಹರಿಸಲು ಮುಂದಾಗಿದೆ. ಇಂಧನ ಬೆಲೆಗಳು ಕಡಿಮೆ ಆದಾಯದ ಜನರಿಗೆ ಹೊರೆಯಾಗಿರುವುದರಿಂದ ಮುಂದಿನ ವರ್ಷದ ವಿಧಾನಸಭಾ ಚುನಾವಣೆಗೆ ಮುನ್ನವೇ ರಾಜ್ಯದ ಜನರಿಗೆ ಈ ರಿಲೀಫ್ ನೀಡಿದೆ. ಕರ್ನಾಟಕ ಸರ್ಕಾರ ಕೂಡ ಇದೇ ಮಾದರಿ ಕಡಿಮೆ ದರಕ್ಕೆ ಎಲ್ಪಿಜಿ ಸಿಲಿಂಡರ್ ವಿತರಿಸಿದರೆ ಜನಸಾಮಾನ್ಯರಿಗೆ ಹೊರೆ ತಗ್ಗಲಿದೆ.
-
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
BMTC: ಉಚಿತ ಬಸ್ ಪ್ರಯಾಣದ ಹೊರೆ, ಆರ್ಥಿಕ ಸಂಕಷ್ಟದಲ್ಲಿ ಬಿಎಂಟಿಸಿ; ಸರ್ಕಾರದಿಂದ ₹850 ಕೋಟಿ ಪಾವತಿ ವಿಳಂಬ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
ಜೆಎಎಲ್ ದಿವಾಳಿ ಪ್ರಕ್ರಿಯೆ ಬಗ್ಗೆ ವೇದಾಂತ ಆಕ್ಷೇಪ; ಅದಾನಿ ಬಿಡ್ಗೆ ಸಾಲದಾತರ ಸಮಿತಿ, ನ್ಯಾಯಮಂಡಳಿಗಳ ಬೆಂಬಲ ದಾಖಲೆಗಳಿಂದ ದೃಢ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ











Click it and Unblock the Notifications