Cyclone forecast: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ, ರಾಜ್ಯದ ಜಿಲ್ಲಾಡಳಿತಗಳಿಗೆ ಎಚ್ಚರಿಕೆಯ ಸೂಚನೆ
ಭುವನೇಶ್ವರ, ನವೆಂಬರ್ 29: ಅಂಡಮಾನ್ ಸಮುದ್ರ ಮತ್ತು ಬಂಗಾಳಕೊಲ್ಲಿ ಸಮುದ್ರದಲ್ಲಿ ಮತ್ತೆ ಕಡಿಮೆ ಒತ್ತಡದ ಪ್ರದೇಶ ನಿರ್ಮಾಣವಾಗಿದೆ. ಇದು ಶುಕ್ರವಾರದ ಹೊತ್ತಿಗೆ ವಾಯುಭಾರ ಕುಸಿತವಾಗಿ ತೀವ್ರಗೊಳ್ಳುವ ಸಾಧ್ಯತೆಗಳು ಇವೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. .
ಸಮುದ್ರದ ಮೇಲಿನ ಈ ಹವಾಮಾನ ವೈಪರಿತ್ಯವು ಡಿಸೆಂಬರ್ ಮೊದಲ ವಾರದಲ್ಲಿ ಚಂಡಮಾರುತವಾಗಿ ಬದಲಾಗುವ ಸಾಧ್ಯತೆ ಇದೆ. ಈಗಾಗಲೇ ವಾಯುಭಾರ ಕುಸಿತದ ಲಕ್ಷಣಗಳನ್ನು ಇದು ಹೊಂದಿದೆ. ಒಂದು ವೇಳೆ ಅಂದುಕೊಂಡಂತೆ ಚಂಡಮಾರುತವಾದರೆ ಓಡಿಶಾ, ಚೆನ್ನೈ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ಕೆಲವು ರಾಜ್ಯಗಳಿಗೆ ಭಾರಿ ಮಳೆ ನಿರೀಕ್ಷಿಸಬಹುದು. ಚೆನ್ನೈನಲ್ಲಿ ಡಿಸೆಂಬರ್ ಮೊದಲ ಬಾರಿ ಮಳೆ ಸಕ್ರಿಯಗೊಳ್ಳಲಿದೆ.

ಓಡಿಶಾ ರಾಜ್ಯದಿಂದ ನೂರಾರು ಕಿಲೋ ಮೀಟರ್‌ಗಟ್ಟಲೆ ದೂರದಲ್ಲಿ ಸಮುದ್ರದಲ್ಲಿ ಹವಾಮಾನ ವೈಪರಿತ್ಯ ಕೇಂದ್ರೀಕೃತಗೊಂಡಿದೆ. ಮಳೆ ಸಂದರ್ಭದಲ್ಲಿ ಬೆಳೆ ಹಾನಿಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಒಡಿಶಾ ಸರ್ಕಾರ ಕೃಷಿ ಇಲಾಖೆಗೆ ತಿಳಿಸಿದೆ. ಅಲ್ಲದೇ ಮೀನುಗಾರರು ಶುಕ್ರವಾರ ಮೀನುಗಾರಿಕೆಗೆ ತೆರಳದಂತೆ ಐಎಂಡಿ ವಿಜ್ಞಾನಿಗಳು ಸೂಚನೆ ನೀಡಿದ್ದಾರೆ.
ಶುಕ್ರವಾರದ ನಂತರ ಚಂಡಮಾರುತ?
ಭಾರತೀಯ ಹವಾಮಾನ ಇಲಾಖೆ ಪ್ರಕಾರ, ದಕ್ಷಿಣ ಅಂಡಮಾನ್ ಸಮುದ್ರ ಮತ್ತು ಪಕ್ಕದ ಆಗ್ನೇಯ ಬಂಗಾಳಕೊಲ್ಲಿ ಸಮುದ್ರದಲ್ಲಿ ಎದ್ದಿದ್ದ ಸುಳಿಗಾಳಿ ಕಡಿಮೆ ಒತ್ತಡದ ಪ್ರದೇಶವಾಗಿ ಮಾರ್ಪಟ್ಟಿದೆ. ಶುಕ್ರವಾರಕ್ಕೆ ಇದು ವಾಯುಭಾರ ಕುಸಿತವಾಗಿ ಬದಲಾಗುವ ಸಂಭವವಿದ್ದು, ನಂತರ ಚಂಡಮಾರುತವಾಗಿ ತೀವ್ರಗೊಳ್ಳಬಹುದು ಎಂದು ಅಂದಾಜಿಸಲಾಗಿದೆ.

ಈ ಕಡಿಮೆ ಒತ್ತಡದ ಪ್ರದೇಶವು ನವೆಂಬರ್ 30 ರಂದು ಪಶ್ಚಿಮ-ವಾಯುವ್ಯ ದಿಕ್ಕಿನತ್ತ ಚಲಿಸಿ ಆಗ್ನೇಯ ಬಂಗಾಳ ಕೊಲ್ಲಿಯ ಮೇಲೆ ಖಿನ್ನತೆಗೆ ಒಳಗಾಗುವ ಸಾಧ್ಯತೆಗಳಿವೆ. ಅಲ್ಲಿಂದ ವಾಯುವ್ಯ ಧಿಕ್ಕಿನತ್ತ ಸಾಗಬಹುದು. ನಂತರದ 48 ಗಂಟೆಗಳಲ್ಲಿ ಇದು ನೈಋತ್ಯ ಮತ್ತು ಪಕ್ಕದ ಆಗ್ನೇಯ ಬಂಗಾಳಕೊಲ್ಲಿಯಲ್ಲಿ ಚಂಡಮಾರುತವಾಗಿ ಮತ್ತಷ್ಟು ತೀವ್ರಗೊಳ್ಳಬಹುದು ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ.
ಎಚ್ಚರಿಕೆ ವಹಿಸಲು ರೈತರು, ಮೀನುಗಾರರಿಗೆ ಸೂಚನೆ
ಇನ್ನೂ ಕರಾವಳಿ ಭಾಗದ ರಾಜ್ಯವಾದ ಒಡಿಶಾದಲ್ಲಿ ವಿಶೇಷ ಪರಿಹಾರ ಆಯುಕ್ತ (ಎಸ್‌ಆರ್‌ಸಿ) ಸತ್ಯಬ್ರತ ಸಾಹು ಅವರು ಕೃಷಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಸಂಭವನೀಯ ಭಾರಿ ಮಳೆ ಮುನ್ಸೂಚನೆ ಗಮನದಲ್ಲಿಟ್ಟುಕೊಂಡು, ಕ್ಷೇತ್ರ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆ ನೀಡಬೇಕು ಎಂದು ಉಲ್ಲೇಖಿಸಲಾಗಿದೆ. ಭತ್ತ ಮತ್ತು ಇತರ ಬೆಳೆಗಳನ್ನು ರಕ್ಷಿಸಲು ಸೂಕ್ತ ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳಲು ರೈತರಿಗೆ ಸೂಚಿಸಲಾಗಿದೆ.
ಏಳು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ
ಕರಾವಳಿಯ ಏಳು ಜಿಲ್ಲೆಗಳಾದ ಬಾಲಸೋರ್, ಭದ್ರಕ್, ಜಗತ್‌ಸಿಂಗ್‌ಪುರ, ಪುರಿ, ಖುರ್ದಾ, ಕೇಂದ್ರಪಾರಾ ಮತ್ತು ಗಂಜಾಮ್‌ಗಳ ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆ ವಹಿಸುವಂತೆ ಹೇಳಲಾಗಿದೆ. ಮೀನುಗಾರರು ಡಿಸೆಂಬರ್ 1 ರಿಂದ ಸಮುದ್ರಕ್ಕೆ ಹೋಗದಂತೆ ನೋಡಿಕೊಳ್ಳಲು ಮೀನುಗಾರಿಕೆ ಮತ್ತು ಪ್ರಾಣಿ ಸಂಪನ್ಮೂಲ ಇಲಾಖೆಗೆ ಮುನ್ಸೂಚನೆ ನೀಡಲಾಗಿದೆ. ಈ ಮೂಲಕ ಸಂಭವನೀಯ ಮಳೆ, ಚಂಡಮಾರುತ ಅಪಾಯ ತಡೆಗೆ ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದೆ.
ಡಿಸೆಂಬರ್‌ನಿಂದ ಬಂಗಾಳಕೊಲ್ಲಿಯಲ್ಲಿ ಗಾಳಿಯ ವೇಗ ಪ್ರತಿ 40ರಿಂದ 50 ರವರೆಗೆ ಇರಲಿದೆ. ಕೆಲವೊಮ್ಮೆ ಗಾಳಿಯ ವೇಗ ಇನ್ನೂ ಹೆಚಚಾಗು ಸಾಧ್ಯತೆಗಳು ಇವೆ ಎಂದು ಹೇಳಲಾಗುತ್ತಿದೆ.












Click it and Unblock the Notifications