ಮೋದಿ ರಾಜ್ಯದಲ್ಲಿ ಮತ್ತೆ ಹುಟ್ಟಿಕೊಂಡ 'ಲವ್ ಜಿಹಾದ್'

Posted By:
Subscribe to Oneindia Kannada

ಗಾಂಧಿನಗರ, ಫೆ. 10: ಪ್ರಧಾನಿ ನರೇಂದ್ರ ಮೋದಿ ಅವರ ರಾಜ್ಯ ಗುಜರಾತಿನಲ್ಲಿ 'ಲವ್ ಜಿಹಾದ್' ಮತ್ತೊಮ್ಮೆ ಜೀವತಳೆದಿರುವ ಸುದ್ದಿ ಬಂದಿದೆ. ಮೊಬೈಲ್ ಎಸ್ಎಂಎಸ್, ವಾಟ್ಸಪ್ ಸಂದೇಶಗಳು ಹರಿದಾಡುತ್ತಿವೆ. ಬೇರೆ ಧರ್ಮದ ಹುಡುಗಿಯರನ್ನು ಮದುವೆಯಾಗುವ ಮುಸ್ಲಿಮ್ ಯುವಕರಿಗೆ ಇಷ್ಟು ಮೊತ್ತ ಸಿಗಲಿದೆ ಎಂದು ರೇಟ್ ಫಿಕ್ಸ್ ಮಾಡಲಾಗಿದೆ.

ಜೀ ನ್ಯೂಸ್ ವರದಿ ಪ್ರಕಾರ ಮುಸ್ಲಿಮ್ ಯುವಕರ ಸಂಘಟನೆಯೊಂದರಿಂದ ಹರಿದಾಡುತ್ತಿರುವ ಈ ಸಂದೇಶದಂತೆ ವಿವಿಧ ಜಾತಿ, ಧರ್ಮದ ಹುಡುಗಿಯರನ್ನು ಮದುವೆಯಾಗುವ ಮುಸ್ಲಿಮ್ ಯುವಕರಿಗೆ ವಿವಿಧ ಸ್ತರದ ಮೊತ್ತ ಫಿಕ್ಸ್ ಆಗಿದೆ. ಬೇರೆ ಸಮುದಾಯದ ಯುವತಿಯರನ್ನು ಪ್ರೇಮಪಾಶದಲ್ಲಿ ಸಿಲುಕಿಸಿಕೊಂಡು ಮದುವೆಯಾಗುವಂತೆ ಪ್ರೋತ್ಸಾಹಿಸಲಾಗುತ್ತಿದೆ.

ಮುಸ್ಲಿಮ್ ಯುವಕನೊಬ್ಬ ಹಿಂದೂ ಬ್ರಾಹ್ಮಣ ಯುವತಿಯನ್ನು ಮದುವೆಯಾದರೆ 5 ಲಕ್ಷ ರು ಸಿಗಲಿದೆ. ಇದೇ ರೀತಿ ಸಿಖ್ ಪಂಜಾಬಿ ಯುವತಿಯನ್ನು ಕೈ ಹಿಡಿದರೆ 7 ಲಕ್ಷ ನೀಡುತ್ತಾರಂತೆ. [ವಿವಾದಾತ್ಮಕ 'ಲವ್‌ ಜಿಹಾದ್‌'? ಎಂದರೇನು]

Love Jihad is back! Muslim boys offered Rs 7L to marry Sikh girl, Rs 5L for a Brahmin

ಕ್ಷತೀಯ ಹಿಂದೂ ಸಮುದಾಯದ ಯುವತಿಯರನ್ನು ಬಲೆಗೆ ಬೀಳಿಸಿಕೊಂಡರೆ 4.5 ಲಕ್ಷ , ಗುಜರಾತಿ ಬ್ರಾಹ್ಮಣ ಯುವತಿಯರನ್ನು ವರಿಸಿದರೆ 6 ಲಕ್ಷ ರು, ಪಂಜಾಬಿ ಹಿಂದೂ ಯುವತಿಯರನ್ನು ಮದುವೆಯಾದರೆ 6 ಲಕ್ಷ ರು, ಕ್ರೈಸ್ತ ರೋಮನ್ ಕ್ಯಾಥೋಲಿಕ್ ಗೆ 4 ಲಕ್ಷ ರು, ಕ್ರೈಸ್ತ ಪ್ರೊಟೆಸ್ಟಂಟ್ ಗೆ 3 ಲಕ್ಷ ರು,ಜೈನರಿಗೆ 3 ಲಕ್ಷ ರು, ಗುಜರಾತಿ ಕಚ್ ಯುವತಿ ವರಿಸಿದರೆ 3 ಲಕ್ಷರು ನೀಡುತ್ತೇವೆ ಎಂದು ಮುಸ್ಲಿಮ್ ಯೂಥ್ ಸಂಘಟನೆ ವತಿಯಿಂದ ಎಸ್ ಎಂಎಸ್ ಬಂದಿದೆ.

ಎಸ್ಎಂಎಸ್ ನಲ್ಲಿ ನಾಲ್ಕು ವಿಳಾಸಗಳನ್ನು ನೀಡಲಾಗಿದೆ. ಈ ಬಗ್ಗೆ ಈಗಾಗಲೇ ರಾಜ್ಯದ ವಿವಿಧೆಡೆ ದೂರು ದಾಖಾಲಾಗಿದ್ದು, ಹಲವಾರು ಮಂದಿ ಸ್ಪಾಮ್ ಸಂದೇಶ ಎಂದು ಕಡೆಗಣಿಸಿದ್ದಾರೆ. ಆದರೆ, ಪೊಲೀಸರು ಈ ಬಗ್ಗೆ ಸೂಕ್ಷ್ಮವಾಗಿ ನಿಗಾವಹಿಸಿದ್ದು, ಸರಣಿ ಸಂದೇಶಗಳನ್ನು ಸ್ಕ್ಯಾನ್ ಮಾಡುತ್ತಿದ್ದಾರೆ. (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The issue of 'Love Jihad' has come back in news as a SMS went viral on WhatsApp in Gujarat which said that Muslim boys who will marry girls belonging to other religions will be rewarded with cash.
Please Wait while comments are loading...