ವಿವಿಪ್ಯಾಟ್ ಹೆಚ್ಚಳದಿಂದ ಲೋಕಸಭೆ ಚುನಾವಣೆ ಫಲಿತಾಂಶ ವಿಳಂಬ

ನವದೆಹಲಿ, ಮೇ 08: ಲೋಕಸಭೆ ಚುನಾವಣೆ 2019ರಲ್ಲಿ ವಿದ್ಯುನ್ಮಾನ ಮತ ಯಂತ್ರಗಳೊಂದಿಗೆ (ಇವಿಎಂ) ಕನಿಷ್ಠ ಶೇ 50ರಷ್ಟು ವಿವಿಪ್ಯಾಟ್ ಚೀಟಿಗಳನ್ನು ಪರಿಶೀಲನೆಗೆ ಒಳಪಡಿಸಬೇಕು ಎಂಬ 21 ವಿರೋಧ ಪಕ್ಷಗಳ ಅರ್ಜಿಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದೆ. ಆದರೆ, ವಿವಿಪ್ಯಾಟ್ ಹೆಚ್ಚಳದಿಂದ ಮೇ 23ರಂದು ಫಲಿತಾಂಶ ತಡವಾಗಿ ಪ್ರಕಟವಾಗುವ ಸಾಧ್ಯತೆಯಿದೆ ಅಥವಾ ಮೇ 24ರ ಮುಂಜಾನೆ ತನಕವೂ ಮತ ಎಣಿಕೆ ನಡೆಯುವ ಸಂಭವವಿದೆ ಎಂದು ವರದಿ ಬಂದಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಲೋಕಸಭೆ ಚುನಾವಣೆ ಏಪ್ರಿಲ್ 11ರಿಂದ ಮೇ 19ರ ತನಕ ಏಳು ಹಂತಗಳಲ್ಲಿ ದೇಶದೆಲ್ಲೆಡೆ ಆಯೋಜಿಸಲಾಗಿದೆ. ಮೇ.12ರಂದು ದೆಹಲಿ ಹಾಗೂ ಹರ್ಯಾಣ ಸೇರಿದಂತೆ 7 ರಾಜ್ಯಗಳ 59 ಸೀಟುಗಳಿಗೆ ಮತದಾನ ನಡೆಯಲಿದೆ. ಮೇ 19ರಂದು 8 ರಾಜ್ಯಗಳ 59 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ.

Lok Sabha results may delay due to VVPAT increase on May 23 or even on May 24

ಮೇ 23 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಕೊಂಚ ತಡವಾಗಿ ಫಲಿತಾಂಶ ಹೊರ ಬೀಳಲಿದೆ, ನಾಲ್ಕೈದು ಗಂಟೆಗಳ ಕಾಲ ತಡವಾಗಬಹುದು ಎಂದು ಉಪ ಚುನಾವಣಾ ಆಯುಕ್ತ ಸುದೀಪ್ ಜೈನ್ ಹೇಳಿದ್ದಾರೆ. ಫಲಿತಾಂಶ ತಡವಾಗಲು ಇವಿಎಂ ಹಗೂ ವಿವಿಪ್ಯಾಟ್ ಹೆಚ್ಚಳವೇ ಕಾರಣ ಎಂದು ತಿಳಿದು ಬಂದಿದೆ. ಒಂದು ವಿವಿಪ್ಯಾಟ್ ಬದಲಿಗೆ ಐದು ಮಷಿನ್ ಗಳನ್ನು ಮ್ಯಾಚ್ ಮಾಡಬೇಕಾಗುತ್ತದೆ.

ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿನ ಒಂದರಿಂದ ಐದು ಮತಗಟ್ಟೆಗಳಿಂದ ಇವಿಎಂ ಜತೆ ವಿವಿಪ್ಯಾಟ್ ಚೀಟಿಗಳನ್ನು ಹೊಂದಿಸುವ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+