Lok Sabha: ಮಹತ್ವದ ಬಿಲ್ ಮಂಡಿಸಿದ ಅಮಿತ್ ಶಾ, ಲೋಕಸಭೆಯಲ್ಲಿ ಭಾರಿ ಗದ್ದಲ

ನವದೆಹಲಿ: ಲೋಕಸಭೆ ಇಂದು ಅಕ್ಷರಶಃ ರಣರಂಗವಾಗಿ ಹೋಗಿತ್ತು, ಒಂದು ಕಡೆ ಹಲವು ದಿನಗಳಿಂದ ನಡೆಯುತ್ತಿರುವ ಲೋಕಸಭೆ ಅಧಿವೇಶನದಲ್ಲಿ ಆಡಳಿತಾರೂಢ ಎನ್‌ಡಿಎ & ಇಂಡಿಯಾ ಒಕ್ಕೂಟಗಳ ನಡುವೆ ತೀವ್ರ ತಿಕ್ಕಾಟ ನಡೆದಿತ್ತು. ಆದರೆ ಇಂದು ಹೊಸ ಬಿಲ್ ವಿಚಾರವಾಗಿ ಮತ್ತಷ್ಟು ಕಾವೇರಿದ ಚರ್ಚೆ ನಡೆಯುತ್ತಿತ್ತು. ಇದೇ ಸಮಯದಲ್ಲಿ ಭಾರಿ ದೊಡ್ಡ ಕೋಲಾಹಲ ಕೂಡ ಏರ್ಪಟ್ಟಿತು.

ಅಂದಹಾಗೆ ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆ ಕೂಡ ಈಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಲೋಕಸಭೆಯಲ್ಲಿ 3 ಮಸೂದೆ ಮಂಡನೆ ಮಾಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಲೋಕಸಭೆಯ ಅಧಿವೇಶನದಲ್ಲಿ ಇದೀಗ ಮಂಡನೆ ಮಾಡಿರುವ ಮಸೂದೆಗಳ ಪೈಕಿ, ಗಂಭೀರ ಕ್ರಿಮಿನಲ್ ಆರೋಪಗಳಿಗೆ ಸಂಬಂಧಿಸಿದ ಒಂದು ಬಿಲ್ ಭಾರಿ ದೊಡ್ಡ ತಿಕ್ಕಾಟಕ್ಕೆ ಈಗ ಕಾರಣವಾಗಿದೆ.

Lok Sabha Refers Three Bills by Amit Shah to Joint Committee

ಈ ಹೊಸ ಮಸೂದೆ, ಕ್ರಿಮಿನಲ್ ಆರೋಪಕ್ಕೆ ಸಂಬಂಧಿಸಿದಂತೆ ಪ್ರಧಾನಿ, ಮುಖ್ಯಮಂತ್ರಿಗಳು & ಕೇಂದ್ರ ಸಚಿವರು ಸೇರಿದಂತೆ ಚುನಾಯಿತ ಪ್ರತಿನಿಧಿಗಳನ್ನ 30 ದಿನಗಳ ತನಕ ಸತತವಾಗಿ ಬಂಧನದಲ್ಲಿ ಇರಿಸಿದ್ದರೆ ಅವರನ್ನ ಚುನಾಯಿತ ಪ್ರತಿನಿಧಿ ಸ್ಥಾನದಿಂದಲೇ ತೆಗೆದು ಹಾಕುವ ಪ್ರಸ್ತಾವನೆ ಮಸೂದೆಯು ಹೊಂದಿತ್ತು. ಇನ್ನು ಮಸೂದೆ ಬಗ್ಗೆ ವಿರೋಧ ಪಕ್ಷಗಳು ಭಾರಿ ವಿರೋಧ ವ್ಯಕ್ತಪಡಿಸಿದ ಕಾರಣ ತಿಕ್ಕಾಟ ಜೋರಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+