ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಯ 'ಲೋಕಸಭಾ ಪ್ರವಾಸ' ಕಾರ್ಯಕ್ರಮ: ಇದೇ ತಿಂಗಳು 11 ರಾಜ್ಯಗಳಿಗೆ ಅಮಿತ್ ಶಾ ಭೇಟಿ

|
Google Oneindia Kannada News

ನವದೆಹಲಿ, ಜ. 03: 2024 ರ ಸಾರ್ವತ್ರಿಕ ಚುನಾವಣೆಗೆ ಪಕ್ಷವನ್ನು ಬಲಪಡಿಸುವ ಉದ್ದೇಶದಿಂದ ಬಿಜೆಪಿ ನಾಯಕ ಅಮಿತ್ ಶಾ ಈ ತಿಂಗಳು 11 ರಾಜ್ಯಗಳಿಗೆ ಪ್ರಯಾಣ ಬೆಳೆಸಲಿದ್ದಾರೆ.

ಬಿಜೆಪಿಯ ಹಿರಿಯ ನಾಯಕ, ಕೇಂದ್ರ ಗೃಹ ಸಚಿವ ಅಮಿತ್ ಶಾ ತಮ್ಮ ಪಕ್ಷದ "ಲೋಕಸಭಾ ಪ್ರವಾಸ" ಕಾರ್ಯಕ್ರಮದ ಭಾಗವಾಗಿ ಈ ತಿಂಗಳು 11 ರಾಜ್ಯಗಳಿಗೆ ಪ್ರಯಾಣಿಸಲಿದ್ದಾರೆ. ಈ ಕಾರ್ಯಕ್ರಮವು 2024 ರ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಉದ್ದೇಶಿತ ಸಂಸದೀಯ ಕ್ಷೇತ್ರಗಳಲ್ಲಿ ತನ್ನ ಮತ ಬ್ಯಾಂಕ್ ಅನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

ರಸ್ತೆ, ಚರಂಡಿ ಸಣ್ಣಪುಟ್ಟ ಸಮಸ್ಯೆ ಬಿಟ್ಟು, ಲವ್ ಜಿಹಾದ್ ವಿರುದ್ಧ ಹೋರಾಡಿ: ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ರಸ್ತೆ, ಚರಂಡಿ ಸಣ್ಣಪುಟ್ಟ ಸಮಸ್ಯೆ ಬಿಟ್ಟು, ಲವ್ ಜಿಹಾದ್ ವಿರುದ್ಧ ಹೋರಾಡಿ: ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್

ಗುರುವಾರ ಅಮಿತ್ ಶಾ ಪ್ರವಾಸ ಆರಂಭಿಸಲಿದ್ದಾರೆ. ಮೊದಲ ದಿನವಾದ ಜನವರಿ 5 ರಂದು ತ್ರಿಪುರಾ ಮತ್ತು ಜನವರಿ 6 ರಂದು ಮಣಿಪುರ ಮತ್ತು ನಾಗಾಲ್ಯಾಂಡ್‌ಗ್ ಅಮಿತ್ ಶಾ ಭೇಟಿ ನೀಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Lok Sabha Prawas: Home Minister Amit Shah will travel 11 states this month

ಜನವರಿ 7 ರಂದು ಛತ್ತೀಸ್‌ಗಢ ಮತ್ತು ಜಾರ್ಖಂಡ್ ಮತ್ತು ಜನವರಿ 8 ರಂದು ಆಂಧ್ರಪ್ರದೇಶಕ್ಕೆ ಪ್ರಯಾಣಿಸಲಿದ್ದಾರೆ.

ಜನವರಿ 16 ರಂದು ಉತ್ತರ ಪ್ರದೇಶದಲ್ಲಿ, ಜನವರಿ 17 ರಂದು ಪಶ್ಚಿಮ ಬಂಗಾಳದಲ್ಲಿ ಮತ್ತು ಜನವರಿ 28 ರಂದು ಕರ್ನಾಟಕದ ಹುಬ್ಬಳ್ಳಿಯಲ್ಲಿ ಪಕ್ಷವನ್ನು ಬಲಪಡಿಸಲಿದ್ದಾರೆ.

ಗೃಹ ಸಚಿವ ಅಮಿತ್ ಶಾ ಜನವರಿ 29 ರಂದು ಉತ್ತರದ ರಾಜ್ಯಗಳಾದ ಹರಿಯಾಣ ಮತ್ತು ಪಂಜಾಬ್‌ನಲ್ಲಿ ಇರಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಆಡಳಿತಾರೂಢ ಪಕ್ಷದ ಪ್ರಮುಖ ಚುನಾವಣಾ ತಂತ್ರಗಾರರಾಗಿರುವ ಅಮಿತ್ ಶಾ ದೇಶದಲ್ಲಿ 2014 ರಿಂದ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಬಿಜೆಪಿಯ ವಿಸ್ತರಣೆಗೆ ಪ್ರಮುಖ ಕೇಂದ್ರವಾಗಿದ್ದಾರೆ. ಚಾಣಾಕ್ಷ್ಯ ಎಂದು ಕರೆಸಿಕೊಳ್ಳುವ ಅಮಿತ್ ಶಾ ಪಕ್ಷದ ಗೆಲುವಿಗೆ ದೊಡ್ಡ ರೂವಾರಿಯಾಗಿದ್ದಾರೆ.

ಬಿಜೆಪಿ 2014ರಲ್ಲಿ 160 ಸ್ಥಾನಗಳಲ್ಲಿ ಗೆಲುವು ದಾಖಲಿಸಿತ್ತು. 2019 ರ ಚುನಾವಣೆಯಲ್ಲಿ 160 ಸ್ಥಾನಗಳಲ್ಲಿ ಹೆಚ್ಚಿನವುಗಳನ್ನು ಸೋತಿದೆ. ತನ್ನ ಸ್ಥಾನಗಳನ್ನು ಕಳೆದುಕೊಂಡಿರುವಲ್ಲಿ ತನ್ನ ಸಂಘಟನೆ ಮತ್ತು ಸಾಮಾಜಿಕ ನೆಲೆಯನ್ನು ಬಲಪಡಿಸುವ ಮೂಲಕ ಮತ್ತೆ ಗೆಲ್ಲುಬಹುದು ಎಂದು ಬಿಜೆಪಿ ನಂಬಿದೆ.

English summary
Lok Sabha Prawas: Union Home Minister Amit Shah will travel to as many as 11 states this month as part of his party's Lok Sabha Prawas programme. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X