Lok Sabha Poll : ಸಟ್ಟಾ ಬಜಾರ್ ಭವಿಷ್ಯದಿಂದ ಬಿಜೆಪಿಗೆ ಶಾಕ್; ಯಾರಿಗೆಷ್ಟು ಸೀಟು?

ನವದೆಹಲಿ, ಮೇ 30: ದೇಶದಲ್ಲಿ ಏಳು ಹಂತದ ಲೋಕಸಭಾ ಚುನಾವಣೆಯಲ್ಲಿ ಈಗಾಗಲೇ ಆರು ಹಂತದಲ್ಲಿ ಮತದಾನ ನಡೆದಿದೆ. ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ದಿನಗಣನೆ ಶುರುವಾಗಿದ್ದು, ಚುನಾವಣೆ ಅಂತಿಮ ಘಟ್ಟಕ್ಕೆ ತಲುಪುತ್ತಿರುವಂತೆಯೇ ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತೊಂದು ಅವಧಿಗೆ ಕೇಂದ್ರದಲ್ಲಿ ಅಧಿಕಾರ ಗದ್ದುಗೆ ಹಿಡಿಯಲಿದೆ ಎಂಬ ಲೆಕ್ಕಾಚಾರ ಶುರುವಾಗಿದೆ.

ದೇಶದ ಪಾಲಿನ ಅನಧಿಕೃತ ಎಕ್ಸಿಟ್‌ ಪೋಲ್‌ ಎನಿಸಿಕೊಂಡಿರುವ ಸಟ್ಟಾ ಬಜಾರ್‌ನಲ್ಲಿ ಹೊಸ ಲೆಕ್ಕಾಚಾರ ಹೊರಬಿದ್ದಿದೆ. ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು ಎಂಬ ಕನಸು ಕಂಡಿದ್ದ ಬಿಜೆಪಿಗೆ ಶಾಕ್‌ ಎದುರಾಗಿದೆ. ದೇಶದಲ್ಲಿ ಈಗಾಗಲೇ 6 ಹಂತದ ಮತದಾನ ಮುಕ್ತಾಯದ ಬೆನ್ನಲ್ಲೇ ಹೊಸ ನಂಬರ್‌ ಬಿಜೆಪಿಯನ್ನ ನಿದ್ದೆಗೆಡಿಸುವಂತೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿ 400 ಕ್ಕೂ ಹೆಚ್ಚು ಸ್ಥಾನಗಳನ್ನ ಗೆಲ್ಲುವ ವಿಶ್ವಾಸವನ್ನ ವ್ಯಕ್ತಪಡಿಸಿದ್ದು, ಇದೀಗ ಕಂಗಾಲಾಗುವಂತೆ ಮಾಡಿದೆ.

Lok Sabha Poll Satta Bazaar Predicts BJP To Win 290 Seats

ಸಟ್ಟಾ ಬಜಾರ್‌ನಲ್ಲಿ ಹೊಸ ಲೆಕ್ಕಾಚಾರದ ಪ್ರಕಾರ ಕಾಂಗ್ರೆಸ್‌ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕೊಂಚ ನಿಟ್ಟುಸಿರು ಬಿಟ್ಟಿದ್ದು, ಬಿಜೆಪಿ ಆಘಾತಕಾರಿಯಾದ ಫಲಿತಾಂಶಗಳು ಬರುವ ಸೂಚನೆಯನ್ನ ಸಟ್ಟಾ ಬಜಾರ್‌ ನೀಡಿದೆ. ಎನ್‌ ಡಿಎ ನಾಯಕರು ಬರೋಬ್ಬರಿ 400 ಸ್ಥಾನಗಳನ್ನ ಗೆಲ್ಲುವ ವಿಶ್ವಾಸದಲ್ಲಿದ್ರು. ಚುನಾವಣೆಗೂ ಮುನ್ನ ಬಿಜೆಪಿಗೆ 315 ಸೀಟ್‌ಗಳ ಅಂದಾಜು ನೀಡಿದ ಸಟ್ಟಾ ಬಜಾರ್‌, 6ನೇ ಹಂತದ ಚುನಾವಣೆ ಮುಗಿದ ಬಳಿಕ ಬಿಜೆಪಿ 290 ಸೀಟ್‌ ಗೆಲ್ಲಬಹುದು ಎಂದು ಅಂದಾಜು ಮಾಡಿದೆ. ಇತ್ತ ಸಟ್ಟಾ ಬಜಾರ್‌ ಭವಿಷ್ಯದಿಂದ ಬಿಜೆಪಿ ನಾಯಕರಿಗೆ ಶಾಕ್‌ ಎದುರಾಗಿದ್ದು, ಕಾಂಗ್ರೆಸ್ ಪಕ್ಷದ ಗೆಲುವಿನ ಸಂಖ್ಯೆಯಲ್ಲಿ ಹೆಚ್ಚಿನ ಏರಿಕೆಯಾಗಿಲ್ಲ. ದೇಶದಲ್ಲಿ ಪ್ರಾದೇಶಿಕ ಪಕ್ಷಗಳು ಗೆಲ್ಲುವ ಸಂಖ್ಯೆಯಲ್ಲಿ ಏರಿಕೆ ಕಾಣಬಹುದು ಎಂದು ತಿಳಿಸಿದೆ.

ಯಾರಿಗೆ ಎಷ್ಟು ಸ್ಥಾನ?

ಸಟ್ಟಾ ಬಜಾರ್‌ ಮತದಾನಕ್ಕೂ ಮೊದಲು ಬಿಜೆಪಿ 315 ಸೀಟ್‌ ಗೆಲ್ಲಬಹುದು ಎಂದು ಅಂದಾಜು ಮಾಡಲಾಗಿದ್ದರೆ, ಕಾಂಗ್ರೆಸ್‌ 45-55 ಸೀಟ್‌ ಗೆಲ್ಲಬಹುದು ಎನ್ನಲಾಗಿತ್ತು. ಇನ್ನು 3ನೇ ಹಂತದ ಚುನಾವಣೆಯ ಬಳಿಕ ಬಿಜೆಪಿಯ ಈ ನಂಬರ್‌ಗಳು 270ಕ್ಕೆ ಕುಸಿದಿದ್ದರೆ, ಕಾಂಗ್ರೆಸ್‌ನ ನಂಬರ್‌ಗಳು 70 ರಿಂ 80ಕ್ಕೆ ಏರಿದ್ದವು. ಆದರೆ, ಆದರೇ ಹಂತದ ಮತದಾನದ ಬಳಿಕ, ಬಿಜೆಪಿ 290 ಸೀಟ್‌ ಗೆಲ್ಲಬಹುದು ಎಂದು ಭವಿಷ್ಯ ತಿಳಿಸಿದ್ದರೆ, ಎನ್‌ಡಿಎ 340 ರಿಂದ 350 ಸೀಟ್‌ ಗೆಲ್ಲಬಹುದು ಎನ್ನುವ ರೀತಿಯಲ್ಲಿ ಬೆಟ್ಟಿಗ್‌ ನಡೆಸಿದೆ. ಇನ್ನು ಕಾಂಗ್ರೆದ್ 50 ರಿಂದ 51 ಸೀಟ್‌ ಗೆಲ್ಲಬಹುದು ಎಂದು ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+