• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರಧಾನಿ ಮೋದಿ, ಯಡಿಯೂರಪ್ಪ ಸೇರಿ ಹಲವರಿಂದ ಮತದಾನ

|
   ಮತದಾನ ಮಾಡಿದ ನಂತರ ಸಾರ್ವಜನಿಕರಿಗೆ ಮತದಾನ ಮಾಡಲು ಕರೆ ಕೊಟ್ಟ ಮೋದಿ | Oneindia Kannada

   ನವದೆಹಲಿ, ಏಪ್ರಿಲ್ 23 : ಕರ್ನಾಟಕದ 14 ಕ್ಷೇತ್ರಗಳು ಸೇರಿದಂತೆ 14 ರಾಜ್ಯಗಳಲ್ಲಿ 115 ಲೋಕಸಭಾ ಕ್ಷೇತ್ರಗಳಲ್ಲಿ ಮಂಗಳವಾರ ಮತದಾನ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಹ್ಮದ್ ನಗರದಲ್ಲಿ ಮತದಾನ ಮಾಡಿದ್ದು, ಭಾರೀ ಸಂಖ್ಯೆಯಲ್ಲಿ ಜನರು ಮತದಾನದಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದ್ದಾರೆ.

   ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

   ಆಸ್ಸಾಂ(4), ಬಿಹಾರ(5), ಛತ್ತೀಸಗಢ(7), ದಾದ್ರ ಮತ್ತು ನಗರ ಹವೇಲಿ(1), ದಮನ್ ಮತ್ತು ದಿಯು(1), ಗೋವಾ(2), ಗುಜರಾತ್(26), ಜಮ್ಮು ಮತ್ತು ಕಾಶ್ಮೀರ(1), ಕರ್ನಾಟಕ(14), ಕೇರಳ(20), ಮಹಾರಾಷ್ಟ್ರ(14), ಒರಿಸ್ಸಾ(6), ಉತ್ತರ ಪ್ರದೇಶ(10), ಪಶ್ಚಿಮ ಬಂಗಾಳ(5) - ಈ ರಾಜ್ಯಗಳಲ್ಲಿ ಮತದಾನ ನಡೆಯುತ್ತಿದೆ.

   ಲೋಕಸಭೆ ಚುನಾವಣೆ LIVE: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಕಾರ್ಯಕರ್ತರ ಮೇಲೆ ಬಾಂಬ್ ಎಸೆತ

   ಕರ್ನಾಟಕದಲ್ಲಿ ಏಪ್ರಿಲ್ 18ರಂದು 14 ಕ್ಷೇತ್ರಗಳಲ್ಲಿ ಮತದಾನ ನಡೆದಿದ್ದರೆ, ಉಳಿದ 14 ಕ್ಷೇತ್ರಗಳಲ್ಲಿ ಇಂದು ಮತದಾರರು ಅಭ್ಯರ್ಥಿಗಳ ಹಣಬರಹ ನಿರ್ಧರಿಸಲಿದ್ದಾರೆ. ಪ್ರಮುಖ ಸಂಗತಿಯೆಂದರೆ, ಇಂದು ನಡೆಯುತ್ತಿರುವ 14 ಕ್ಷೇತ್ರಗಳಲ್ಲಿ ಬಿಜೆಪಿ 11ರಲ್ಲಿ ಗೆದ್ದಿರುವುದು. ಹೀಗಾಗಿ ಮೈತ್ರಿಕೂಟಕ್ಕೂ ಇಂದಿನ ಮತದಾನ ಭಾರೀ ಪ್ರತಿಷ್ಠೆಯ ವಿಷಯವಾಗಿದೆ.

   ಕರ್ನಾಟಕದಲ್ಲಿ ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಬಿಜಾಪುರ, ರಾಯಚೂರು, ಗುಲಬರ್ಗ, ಬೀದರ, ಕೊಪ್ಪಳ, ಹಾವೇರಿ, ಧಾರವಾಡ ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ ಮತ್ತು ಬಳ್ಳಾರಿಯಲ್ಲಿ ಬಿರುಸಿನ ಮತದಾನ ಆರಂಭವಾಗಿದೆ.

   ಮತದಾನ ಪ್ರಜಾಪ್ರಭುತ್ವದ ಅಸ್ತ್ರ : ಮೋದಿ

   ಮತದಾನ ಪ್ರಜಾಪ್ರಭುತ್ವದ ಅಸ್ತ್ರ : ಮೋದಿ

   ಪ್ರಧಾನಿ ನರೇಂದ್ರ ಮೋದಿಯವರು ಗುಜಾರಾತ್ ನ ಅಹ್ಮದಾಬಾದ್ ನಲ್ಲಿ ತಮ್ಮ ತಾಯಿಯ ನಿವಾಸಕ್ಕೆ ತೆರಳಿ, ಆಶೀರ್ವಾದ ಪಡೆದುಕೊಂಡು ಬೆಳಿಗ್ಗೆಯೇ ಮತದಾನ ಮಾಡಿದರು. ನಂತರ ಭರ್ಜರಿ ಮೆರವಣಿಗೆಯಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಕೂಡ ಹಾಜರಿದ್ದರು. ಮತದಾನದ ಬಳಿಕ, "ಐಇಡಿ ಭಯೋತ್ಪಾದಕರ ಅಸ್ತ್ರವಾಗಿದ್ದರೆ, ಮತದಾನ ಪ್ರಜಾಪ್ರಭುತ್ವದ ಅಸ್ತ್ರವಾಗಿದೆ" ಎಂದು ನರೇಂದ್ರ ಮೋದಿ ಅವರು ಮಾರ್ಮಿಕವಾಗಿ ನುಡಿದರು. ಅವರು ರಾಣಿಪ್ ನಲ್ಲಿರುವ ನಿಶಾನ್ ಶಾಲೆಯಲ್ಲಿನ ಬೂತ್ ನಲ್ಲಿ ಮತ ಚಲಾಯಿಸಿದರು.

   ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಸಾರ್ವಜನಿಕರಿಗೆ ಮೋದಿ ಕರೆ

   ಅಮಿತ್ ಶಾ ಮತ್ತು ಪತ್ನಿಯಿಂದ ಮತದಾನ

   ಅಮಿತ್ ಶಾ ಮತ್ತು ಪತ್ನಿಯಿಂದ ಮತದಾನ

   ಅಹ್ಮದಾಬಾದ್ ನಲ್ಲಿ ನಾರಾನ್ ಪುರ ಸಬ್ ಜೋನಲ್ ಕಚೇರಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ತಮ್ಮ ಪತ್ನಿ ಸೋನಲ್ ಶಾ ಅವರೊಂದಿಗೆ ಮತ ಚಲಾಯಿಸಿದರು. ಅಮಿತ್ ಶಾ ಅವರು ಈ ಬಾರಿ ಪ್ರತಿಷ್ಠಿತ ಗಾಂಧಿನಗರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರು ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಅಮಿತ್ ಶಾ ಅವರು ಪ್ರಥಮ ಬಾರಿಗೆ ಲೋಕಸಭಾ ಚುನಾವಣಾ ಕಣಕ್ಕಿಳಿದಿದ್ದಾರೆ.

   ಕರ್ನಾಟಕದಲ್ಲಿ ಲೋಕಸಮರ LIVE: 14 ಕ್ಷೇತ್ರಗಳಲ್ಲಿ ಮತದಾನ

   ಹಲವಾರು ಹಿರಿಯರಿಂದ ಮತದಾನ

   ಹಲವಾರು ಹಿರಿಯರಿಂದ ಮತದಾನ

   ಮತದಾನ ಮಾಡುವುದರಿಂದ ಹಲವಾರು ಜನರು ದೂರ ಉಳಿಯುತ್ತಿರುವ ಸಮಯದಲ್ಲಿ, ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿರುವ, ಮತದಾನ ಶ್ರೇಷ್ಠ ಎಂದು ನಂಬಿರುವ ಲಕ್ಷಾಂತರ ಜನರು ಈ ಮತಯಜ್ಞದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಕೋತ್ವಾಲಿ ಪ್ರಾಥಮಿಕ ಶಾಲೆಯೊಂದರಲ್ಲಿ ನಡೆದ ಮತದಾನದಲ್ಲಿ ವ್ಯಕ್ತಿಯೊಬ್ಬರು ತಮ್ಮ 87 ವರ್ಷದ ತಾಯಿಯನ್ನು ಮಗುವಿನಂತೆ ಎತ್ತಿಕೊಂಡು ಬಂದು ಮತ ಚಲಾವಣೆ ಮಾಡಿಸಿದರು. ಓಡಿಶಾದ ಭುವನೇಶ್ವರದ ಐಆರ್‌ಸಿ ಗ್ರಾಮದಲ್ಲಿ ವಿಶೇಷ ಚೇತನ ವ್ಯಕ್ತಿಯೊಬ್ಬರು ಉತ್ಸಾಹದಿಂದ ಮತದಾನ ಮಾಡಿದ್ದು ಕೂಡ ವಿಶೇಷ.

   93 ವರ್ಷದ ಪ್ರಭಾಕರ ಭಿಡೆ, 88ರ ಸುಶೀಲಾ ಭಿಡೆ

   93 ವರ್ಷದ ಪ್ರಭಾಕರ ಭಿಡೆ, 88ರ ಸುಶೀಲಾ ಭಿಡೆ

   ಮತ್ತೊಂದು ಘಟನೆಯೊಂದರಲ್ಲಿ, ಮಹಾರಾಷ್ಟ್ರದ ಪುಣೆಯ ಮಯೂರ್ ಕಾಲೋನಿಯಲ್ಲಿ 93 ವರ್ಷದ ಪ್ರಭಾಕರ್ ಭಿಡೆ ಅವರು ತಮ್ಮ ಧರ್ಮಪತ್ನಿ 88 ವರ್ಷದ ಸುಶೀಲಾ ಭಿಡೆ ಅವರೊಂದಿಗೆ ಬಂದು ತಮ್ಮ ಅತ್ಯಮೂಲ್ಯವಾದ ಮತ ಹಾಕಿದರು. ಅಹ್ಮದಾಬಾದ್ ನಲ್ಲಿ ನರೇಂದ್ರ ಮೋದಿಯವರ ತಾಯಿ 99 ವರ್ಷ ವಯಸ್ಸಿನ ಹೀರಾಬೆನ್ ಮೋದಿ ಅವರು ಕೂಡ ಮತ ಚಲಾಯಿಸಿದ್ದು ವಿಶೇಷ.

   ಶಿಕಾರಿಪುರದಲ್ಲಿ ಯಡಿಯೂರಪ್ಪ ಕುಟುಂಬ ಮತದಾನ

   ಶಿಕಾರಿಪುರದಲ್ಲಿ ಯಡಿಯೂರಪ್ಪ ಕುಟುಂಬ ಮತದಾನ

   ಕರ್ನಾಟಕದ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕೂಡ ಇಂದು ಮತದಾನ ನಡೆಯುತ್ತಿದ್ದು, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಶಿಕಾರಿಪುರದ ಹುಚ್ಚರಾಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ, ಪ್ರಸಾದ ಸ್ವೀಕರಿಸಿ ಮತ ಚಲಾಯಿಸಿದರು. ಅವರೊಂದಿಗೆ ಈ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ, ಸಹೋದರ ಬಿವೈ ವಿಜಯೇಂದ್ರ ಮತ್ತು ಕುಟುಂಬ ಸದಸ್ಯರು ಕೂಡ ಮತ ಚಲಾಯಿಸಿದರು. ಕಳೆದ ವರ್ಷ ನಡೆದಿದ್ದ ಉಪ ಚುನಾವಣೆಯಲ್ಲಿ ರಾಘವೇಂದ್ರ ಅವರು ಜೆಡಿಎಸ್ ನ ಮಧು ಬಂಗಾರಪ್ಪ ಅವರನ್ನು ಸೋಲಿಸಿ ಸಂಸತ್ ಪ್ರವೇಶಿಸಿದ್ದರು. ಈ ಬಾರಿ ಕೂಡ ಇವರಿಬ್ಬರೂ ಎದುರಾಳಿಗಳಾಗಿದ್ದಾರೆ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Lok Sabha Elections 2019 : Narendra Modi, Amit Shah, Yeddyurappa and family caste their vote. Many senior citizen, specially abled people too have participated in this democratic festival.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more