ರೈಲ್ವೆ ಟಿಕೆಟ್‌ನಲ್ಲಿ ಮೋದಿ ಚಿತ್ರ: ಇಬ್ಬರು ಉದ್ಯೋಗಿಗಳ ಅಮಾನತು

ನವದೆಹಲಿ, ಏಪ್ರಿಲ್ 16: ಉತ್ತರ ಪ್ರದೇಶದ ಬಾರಾಬಂಕಿಯ ರೈಲ್ವೆ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ಮುದ್ರಿಸಿರುವ ರೈಲ್ವೆ ಟಿಕೆಟ್‌ಗಳನ್ನು ಪ್ರಯಾಣಿಕರಿಗೆ ವಿತರಿಸಿದ್ದಕ್ಕೆ ಇಬ್ಬರು ರೈಲ್ವೆ ಉದ್ಯೋಗಿಗಳನ್ನು ಸೋಮವಾರ ಅಮಾನತು ಮಾಡಲಾಗಿದೆ.

ಏಪ್ರಿಲ್ 13ರಂದು ಟಿಕೆಟ್ ವಿತರಿಸುವ ಉದ್ಯೋಗಿಗಳ ಪಾಳಿ ಬದಲಾಗಿತ್ತು. ಈ ಸಂದರ್ಭದಲ್ಲಿ ಹಳೆಯ ಟಿಕೆಟ್ ರೋಲ್ ಅನ್ನು ಕಣ್ತಪ್ಪಿನಿಂದ ಬಳಸಿಕೊಳ್ಳಲಾಗಿತ್ತು. ಈ ತಪ್ಪಿಗಾಗಿ ಇಬ್ಬರು ಉದ್ಯೋಗಿಗಳನ್ನು ಅಮಾನತು ಮಾಡಲಾಗಿದೆ. ಇಲಾಖಾ ತನಿಖೆ ನಡೆಯುತ್ತಿದೆ ಎಂದು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ತಿಳಿಸಿದ್ದಾರೆ.

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ತಡೆಯಲು ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರವಿರುವ ಟಿಕೆಟ್‌ಗಳನ್ನು ಹಿಂದಕ್ಕೆ ಪಡೆಯುವುದಾಗಿ ರೈಲ್ವೆ ಇಲಾಖೆ ತಿಳಿಸಿತ್ತು. ಆದರೆ, ಆ ಪ್ರಕಟಣೆ ಹೊರಡಿಸಿದ ಬಳಿಕವೂ ಟಿಕೆಟ್‌ಗಳ ವಿತರಣೆ ನಡೆದಿದೆ ಎಂದು ಆರೋಪಿಸಲಾಗಿದೆ.

lok sabha elections 2019 indian railway suspend two officials PM Modi photo on railway ticket

ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರವನ್ನು ಮುದ್ರಿಸಿದ ಮತ್ತು ಪ್ರಧಾನ ಮಂತ್ರಿ ಆವಾಸ್ ಯೋಜನೆಯ ವಿವರಗಳನ್ನು ಟಿಕೆಟ್ ಹಿಂಬದಿಯಲ್ಲಿ ಮುದ್ರಿಸಿದ ಟಿಕೆಟ್‌ಅನ್ನು ಪ್ರಯಾಣಿಕರೊಬ್ಬರಿಗೆ ಭಾನುವಾರ ನೀಡಲಾಗಿತ್ತು. ಈ ಬಗ್ಗೆ ಅಲ್ಲಿನ ಮೇಲಧಿಕಾರಿಗಳಿಗೆ ದೂರು ನೀಡಲು ಹೋದಾಗ ದಬಾಯಿಸಿ ಅಲ್ಲಿಂದ ತೆರಳುವಂತೆ ಸೂಚಿಸಲಾಯಿತು ಎಂದು ಪ್ರಯಾಣಿಕ ದೂರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+