ಕರ್ನಾಟಕ ಸೇರಿ ವಿವಿಧ ರಾಜ್ಯಗಳಿಗೆ ಚುನಾವಣೆ ಉಸ್ತುವಾರಿಗಳ ನೇಮಕ
ನವದೆಹಲಿ, ಜನವರಿ 06: ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಗೆ ಚುನಾವಣಾ ಉಸ್ತುವಾರಿಗಳನ್ನು ನೇಮಿಸಿ ಬಿಜೆಪಿ ಹೈಕಮಾಂಡ್ ಪ್ರಕಟಣೆ ಹೊರಡಿಸಿದೆ. ಕರ್ನಾಟಕಕ್ಕೆ ಮುರಳೀಧರ ರಾವ್ ಅವರು ಉಸ್ತುವಾರೊಯಾಗಿದ್ದರೆ, ಕಿರಣ್ ಮಹೇಶ್ವರಿ ಅವರು ಸಹ ಉಸ್ತುವಾರಿಯಾಗಿದ್ದಾರೆ.
ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಅವರಿಗೆ ಉತ್ತರಪ್ರದೇಶ ಹಾಗೂ ರಕ್ಷಣಾ ಸಚಿವ ನಿರ್ಮಲಾ ಸೀತಾರಾಮನ್ ಅವರಿಗೆ ದೆಹಲಿಯ ಉಸ್ತುವಾರಿ ನೀಡಲಾಗಿದೆ.

ದೆಹಲಿ, ಉತ್ತರಪ್ರದೇಶವಲ್ಲದೆ, ಕರ್ನಾಟಕ, ಹರ್ಯಾಣ, ತ್ರಿಪುರ, ಜಮ್ಮು ಮತ್ತು ಕಾಶ್ಮೀರ, ತಮಿಳುನಾಡು, ಕೇಂದ್ರಾಡಳಿತ ಪ್ರದೇಶವಾದ ಅಂಡಮಾನ್ ಮತ್ತು ನಿಕೋಬಾರ್ ಹಾಗೂ ಪುದುಚೇರಿಗಳಿಗೆ ಉಸ್ತುವಾರಿಗಳನ್ನು ನೇಮಿಸಲಾಗಿದೆ.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಮುರಳೀಧರ್ ರಾವ್ ಅವರು ಕರ್ನಾಟಕದ ಉಸ್ತುವಾರಿಯಾಗಿ ನೇಮಕಗೊಂಡಿದ್ದರೆ, ತಮಿಳುನಾಡಿಗೆ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಉಸ್ತುವಾರಿಯಾಗಿದ್ದು, ಕರ್ನಾಟಕದ ಮಾಜಿ ಸಚಿವ ಸಿಟಿ ರವಿ ಅವರು ಸಹ ಉಸ್ತುವಾರಿಯಾಗಿದ್ದಾರೆ.
ತಮಿಳುನಾಡು, ಅಂಡಮಾನ್ ಮತ್ತು ನಿಕೋಬಾರ್ ಹಾಗೂ ಪುದುಚೇರಿಗಳಿಗೆ ಗೋಯಲ್ ಅವರು ಉಸ್ತುವಾರಿಯಾಗಿದ್ದರೆ, ಸಿಟಿ ರವಿ ಅವರು ಸಹ ಉಸ್ತುವಾರಿಯಾಗಿದ್ದಾರೆ.
ಹರ್ಯಾಣಕ್ಕೆ ಹಿರಿಯ ನಾಯಕ ಕಲ್ ರಾಜ್ ಮಿಶ್ರಾ ಉಸ್ತುವಾರಿಯಾಗಿದ್ದರೆ, ವಿಶ್ವಾಸ್ ಸಾರಂಗ್ ಸಹ ಉಸ್ತುವಾರಿಯಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಹಾಗೂ ತ್ರಿಪುರಕ್ಕೆ ಅವಿನಾಶ್ ರಾಯ್ ಖನ್ನ ಪ್ರಭಾರಿಯಾಗಿ ನೇಮಿಸಲಾಗಿದೆ.












Click it and Unblock the Notifications