ಮಾರ್ಚ್ 25ರ ಎಣಿಕೆಯಂತೆ 306 ಅಭ್ಯರ್ಥಿಗಳನ್ನು ಹೆಸರಿಸಿರುವ ಬಿಜೆಪಿ
ನವದೆಹಲಿ, ಮಾರ್ಚ್ 25: ಭಾರತೀಯ ಜನತಾ ಪಕ್ಷವು ಇಂದಿನ ತನಕ ಒಟ್ಟು 9 ಬಾರಿ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಒಟ್ಟು 306 ಅಭ್ಯರ್ಥಿಗಳನ್ನು ಹೆಸರಿಸಿದೆ.
ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ
ಭಾನುವಾರದಂದು ಪ್ರಕಟವಾದ 9ನೇ ಪಟ್ಟಿಯಲ್ಲಿ ಛತ್ತೀಸ್ ಗಢ ಹಾಗೂ ಮೇಘಾಲಯ, ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ.
ಛತ್ತೀಸ್ ಗಢ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಸೋಲು ಕಂಡ ಬಳಿಕ ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸಲು ಪಕ್ಷ ನಿರ್ಧರಿಸಿತ್ತು. ಛತ್ತೀಸ್ ಗಢದ ಮಾಜಿ ಸಿಎಂ ರಮಣ್ ಸಿಂಗ್ ಅವರನ್ನು ರಾಜ್ ನಂದ್ ಗಾಂವ್ ಕ್ಷೇತ್ರದಿಂದ ಸ್ಪರ್ಧಿಸಲು ಸೂಚಿಸಲಾಗುತ್ತದೆ ಎಂಬ ಸುದ್ದಿಯಿತ್ತು. ಆದರೆ, ಸಂತೋಷ್ ಪಾಂಡೆ ಅವರಿಗೆ ಟಿಕೆಟ್ ನೀಡಲಾಗಿದೆ.

ಕೊರ್ಬಾದಿಂಅದ್ ಜ್ಯೋತಿ ನಂದ್ ದುಬೇ, ಬಿಲಾಸ್ ಪುರ್ ನಿಂದ ಅರುಣ್ ಶಾಹ್, ದುರ್ಗ್ ನಿಂದ ವಿಜಯ್ ಬಘೇಲ್, ರಾಯ್ ಪುರ್ ನಿಂದ ಸುನಿಲ್ ಸೋನಿ ಕಣಕ್ಕಿಳಿಯುತ್ತಿದ್ದಾರೆ.
Shri @JPNadda is addressing a press conference at BJP HQ. https://t.co/pc8B8vf8fZ
— BJP (@BJP4India) March 23, 2019
543 ಲೋಕಸಭಾ ಸ್ಥಾನಗಳಿಗಾಗಿ ಏಪ್ರಿಲ್ 11 ರಿಂದ ಮೇ 19ರ ತನಕ ಚುನಾವಣೆ ನಡೆಯಲಿದ್ದು, ಮೇ 23ರಂದು ಫಲಿತಾಂಶ ಹೊರ ಬರಲಿದೆ. ಏಪ್ರಿಲ್ 11ರಂದು 19 ರಾಜ್ಯಗಳ 91 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.












Click it and Unblock the Notifications