NDA ಸರ್ಕಾರ ರಚನೆಗೆ ಮೋದಿ, ಅಮಿತ್ ಶಾ ಕಸರತ್ತು; ನಿತೀಶ್, ಚಂದ್ರಬಾಬು ನಾಯ್ಡು ಇಟ್ಟ ಬೇಡಿಕೆಗಳೇನು ಗೊತ್ತಾ?
ದೆಹಲಿ, ಜೂನ್ 05: 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿ ಎ ಮೈತ್ರಿಕೂಟ ಬರೋಬ್ಬರಿ 400 ಕ್ಷೇತ್ರಗಳನ್ನ ಗೆಲ್ಲುವ ನಿರೀಕ್ಷೆಯಲ್ಲಿತ್ತು. ಆದರೆ, ಈ ಬಾರಿ 300 ಸ್ಥಾನಗಳನ್ನ ಗೆಲ್ಲಲು ಸಾಧ್ಯವಾಗಿಲ್ಲ. ಈಗಾಗಲೇ ಸರ್ಕಾರ ರಚನೆಗೆ ಮೋದಿ ಹಾಗೂ ಅಮಿತ್ ಕಸರತ್ತು ನಡೆಸುತ್ತಿದ್ದಾರೆ.
ಕೇಂದ್ರ ಸರ್ಕಾರ ರಚಿಸುವ ನಿರೀಕ್ಷೆಯಲ್ಲಿರುವ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ ಹಲವು ಸಂಕಷ್ಟಗಳು ಎದುರಾಗಿದೆ. 2019 ರ ಲೋಕಸಭಾ ಚುನಾವಣೆಯಲ್ಲಿ ಪಡೆದ ಸ್ಥಾನಗಳಿಗಿಂತ ಈ ಬಾರಿ 63 ಸ್ಥಾನಗಳನ್ನು ಕಳೆದುಕೊಂಡಿರುವ ಬಿಜೆಪಿ ಈ ಬಾರಿ ಹಲವು ಮಿತ್ರ ಪಕ್ಷಗಳನ್ನ ಅವಲಂಭಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಇತ್ತ ದೇಶದಲ್ಲಿ ಮೋದಿ ಅಲೆ ಕಡಿಮೆಯಾದಂತೆ ಕಾಣುತ್ತಿದ್ದು, ಇಂಡಿಯಾ ಮೈತ್ರಿ ಕೂಟ ಈ ಬಾರಿ ಸರ್ಕಾರ ರಚಿವಷ್ಟು ಸ್ಥಾನಗಳನ್ನ ಗೆಲ್ಲದಿದ್ದರು, ಸರ್ಕಾರ ರಚನೆಯ ಕಸರತ್ತನ್ನ ನಡೆಸುತ್ತಿದೆ.

ಇಂಡಿಯಾ ಮೈತ್ರಿ ಕೂಟ ಹಾಗೂ ಎನ್ ಡಿ ಎ ಕೂಟವೂ ಅನಿವಾರ್ಯವಾಗಿ ಮಿತ್ರ ಪಕ್ಷಗಳನ್ನು ಅವಲಂಭಿಸಬೇಕಾಗಿದ್ದು, ಟಿಡಿಪಿ ಹಾಗೂ ಜೆಡಿಯುಗೆ ಎರಡು ಕಡೆಯಿಂದಲೂ ಬೇಡಿಕೆ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಚಂದ್ರಬಾಬು ನಾಯ್ಡು ಹಾಗೂ ನಿತೀಶ್ ಕುಮಾರ್ ಕಿಂಗ್ ಮೇಕರ್ ಆಗಿ ಹೊರಹೊಮ್ಮಿದ್ದಾರೆ. ಚಂದ್ರಬಾಬು ನಾಯ್ಡು ಹಾಗೂ ನಿತೀಶ್ ಕುಮಾರ್ ಸದ್ಯ ಎನ್ ಡಿ ಎ ಜೊತೆಗೆ ಹೋಗುತ್ತೇವೆ ಎಂದು ಹೇಳಿದ್ದಾರೆ.
ಆದ್ರೆ ಈ ಇಬ್ಬರು ನಾಯಕರು ಸಹ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಮುಂದೆ ದೊಡ್ಡ ದೊಡ್ಡ ಬೇಡಿಕೆಗಳನ್ನ ಮುಂದಿಟ್ಟಿದ್ದು, ಅನಿವಾರ್ಯವಾಗಿ ಈ ಬೇಡಿಕೆಗಳನ್ನ ಒಪ್ಪಿಕೊಳ್ಳಬೇಕಾದ ಸಂಕಷ್ಟಕ್ಕೆ ಮೋದಿ, ಅಮಿತ್ ಶಾ ಸಿಲುಕಿದ್ದಾರೆ ಎನ್ನಲಾಗಿದೆ.
ಈ ಹಿಂದೆ ಎನ್ ಡಿ ಯ ಭಾಗವಾಗಿ ಈ ಇಬ್ಬರು ನಾಯಕರಿದ್ದರು, ಪ್ರಧಾನಿ ಮೋದಿ ಅವರ ಜೊಗಿನ ಭಿನ್ನಾಭಿಪ್ರಾಯಿಂದ ಎನ್ ಡಿಎ ತೊರೆದಿದ್ರು. 2024 ರ ಚುನಾವಣೆಗೂ ಮುನ್ನ ಎನ್‌ಡಿಎ ಮೈತ್ರಿಕೂಟಕ್ಕೆ ಚಂದ್ರಬಾಬು ನಾಯ್ಡು ಹಾಗೂ ನಿತೀಶ್ ಕುಮಾರ್ ಮರಳಿದ್ದರು. ಆದರೆ, ಚುನಾವಣೆ ಫಲಿತಾಂಶದ ಬಳಿಕ ಇಂಡಿಯಾ ನಾಯಕರಿಂದ ದೊಡ್ಡ ದೊಡ್ಡ ಆಫರ್‌ಗಳು ಇಬ್ಬರಿಗೂ ಬರುತ್ತಿವೆ.ಈ ಬೇಡಿಕೆಯನ್ನ ತಳ್ಳಿ ಹಾಕಿ ಎನ್ ಡಿಎ ಜೊತೆಗೆ ನಿಲ್ಲಲ್ಲು ಈ ಇಬ್ಬರು ನಾಯಕರು ದೊಡ್ಡ ದೊಡ್ಡ ಬೇಡಿಕೆ ಇಟ್ಟಿದ್ದು, ಅಂತಿಮವಾಗಿ ಈ ಬೇಡಿಕೆಗಳ ಕುರಿತು ಮೋದಿ, ಅಮಿತ್ ತಿರ್ಮಾನ ತೆಗೆದುಕೊಳ್ಳಲಿದ್ದಾರೆ.
ತಮ್ಮ ಪಕ್ಷಕ್ಕೆ ಮೂರರಿಂದ ನಾಲ್ಕು ಸಚಿವ ಸ್ಥಾನಗಳನ್ನು ನೀಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೇ ಆಂಧ್ರ ಪ್ರದೇಶಕ್ಕೆ 371ನೇ ವಿಧಿ ಮೂಲಕ ವಿಶೇಷ ಸ್ಥಾನಮಾನ ನೀಡಬೇಕು ಎಂಬುದು ಅವರ ಬಹಳ ದಿನದ ಕನಸು ಮತ್ತು ಬೇಡಿಕೆ ಅದೇ ಬೇಡಿಕೆಯನ್ನು ಎನ್‌ಡಿಎ ಮುಂದೆ ಚಂದ್ರಬಾಬು ನಾಯ್ಡು ಇಟ್ಟಿದ್ದಾರೆ ಎನ್ನಲಾಗಿದೆ.
ಇತ್ತ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಹ ಬಿಗ್ ಆಫರ್ ಗೆ ಬೇಡಿಕೆ ಇಟ್ಟಿದ್ದಾರೆ. ನಾವು ಎನ್ ಡಿಎದಲ್ಲಿಯೇ ಉಳಿಯಬೇಕಾದರೇ ಕ್ಯಾಬಿನೆಟ್ ನಲ್ಲಿ ನಮ್ಮ ಪಕ್ಷದವರಿಗೂ ಪ್ರಮುಖ ಖಾತೆಗಳನ್ನ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೇ ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಆಗ್ರಹಿಸಿದ್ದಾರೆ.ಇನ್ನೂ ಇದೇ ಸಂದರ್ಭದಲ್ಲಿ ಅಮಿತ್ ಶಾ ಅವರ ಮುಂದೆ ಇಂಡಿಯಾ ಒಕ್ಕೂಟವೂ ನಮಗೆ ಉಪ ಪ್ರಧಾನಿ ಹುದ್ದೆಯ ಆಫರ್ ಕೊಟ್ಟ ಬಗ್ಗೆಯೂ ಚರ್ಚೆ ನಡೆಸಿದ್ದಾರೆ.
ಚಂದ್ರಬಾಬು ನಾಯ್ಡು ಮತ್ತು ನಿತೀಶ್ ಕುಮಾರ್ ಅವರ ಬೇಡಿಕೆಯನ್ನ ಮೋದಿ ಹಾಗೂ ಅಮಿತ್ ಶಾ ಅವರು ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಹಣಕಾಸು, ರೈಲ್ವೇ, ಕೃಷಿಯಂತಹ ಪ್ರಮುಖ ಖಾತೆಗಳನ್ನು ನಮ್ಮ ಪಕ್ಷದ ನಾಯಕರಿಗೆ ಬಿಟ್ಟುಕೊಂಡಬೇಕು ಎಂದು ಇಬ್ಬರು ನಾಯಕರು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.












Click it and Unblock the Notifications