ದೇವರನಾಡಲ್ಲಿ ಮೊಟ್ಟ ಮೊದಲ ಬಾರಿಗೆ ಅರಳಿದ ಕಮಲ-ಐತಿಹಾಸಿಕ ಸಾಧನೆ
ದೇಶದಲ್ಲಿ ಒಟ್ಟು 7 ಹಂತಗಳಲ್ಲಿ ಲೋಕಸಭಾ ಚುನಾವಣೆತ ಮತದಾನ ನಡೆದಿದ್ದು, ಜೂನ್ 01ಕ್ಕೆ ಎಲ್ಲಾ ಹಂತಗಳಲ್ಲಿಯೂ ಮತದಾನ ಮುಕ್ತಯವಾಗಿತ್ತು. ಇನ್ನು ಇಂದು (ಜೂನ್ 04) ಫಲಿತಾಂಶ ಹೊರಬಿದ್ದಿದ್ದು, ಇದೇ ಮೊಟ್ಟ ಮೊದಲ ಬಾರಿಗೆ ದೇವರನಾಡುವ ಅಂತಲೇ ಪ್ರಖ್ಯಾತಿ ಆಗಿರುವ ಕೇರಳದಲ್ಲಿ ಕಮಲ ಅರಳುವ ಮೂಲಕ ಐತಿಹಾಸಿಕ ಸಾಧನೆಯಾಗಿದೆ. ಮಾಹಿತಿ ಇಲ್ಲಿದೆ ತಿಳಿಯಿರಿ.
2024ರ ಲೋಕಸಭಾ ಚುನಾವಣೆಯ ಮತದಾನ ಏಪ್ರಿಲ್ 19ರಿಂದ ಜೂನ್ 1ರವರೆಗೆ ಏಳು ಹಂತಗಳಲ್ಲಿ ನಡೆದಿದ್ದು, ಮೊದಲ ಆರು ಹಂತದ ಮತದಾನ ಏಪ್ರಿಲ್ 19, ಏಪ್ರಿಲ್ 26, ಮೇ 7, ಮೇ 13, ಮೇ 20 ಮತ್ತು ಮೇ 25ರಂದು ನಡೆಯಿತು. ಇನ್ನು ಕೊನೆಯದಾಗಿ 7ನೇ ಹಂತದ ಮತದಾನ ಜೂನ್ 01 ಮುಕ್ತಾಯವಾಗಿದ್ದು, ಇಂದು (ಜೂನ್ 04) ಫಲಿತಾಂಶ ಪ್ರಕಟಕವಾಗಿದೆ.

ಇನ್ನು ಕೊನೆಗೂ ದೇವರನಾಡು ಕೇರಳದಲ್ಲಿ ಮೊಟ್ಟ ಮೊದಲ ಬಾರಿಗೆ ಕಮಲ ಅರಳುವ ಮೂಲಕ ಬಿಜೆಪಿ ಖಾತೆ ತೆರೆದಿದ್ದು, ಕನಸು ನನಸಾದಂತಾಗಿದೆ. ತ್ರಿಶೂರ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುರೇಶ್ ಗೋಪಿ ಎಂಬುವರು ಭರ್ಜರಿ ಗೆಲುವು ಸಾಧಿಸಿ ಗಮನ ಸೆಳೆದಿದ್ದಾರೆ.
ಕೇರಳದಲ್ಲಿ ಬಿಜೆಪಿ ಮೊದಲ ಬಾರಿ ಖಾತೆ ತೆರೆದಿದ್ದು, ತ್ರಿಶ್ಯೂರ್‌ನಲ್ಲಿ ನಟ, ಬಿಜೆಪಿ ಅಭ್ಯರ್ಥಿ ಸುರೇಶ್ ಗೋಪಿ ವಿಜಯ ಮಾಲೆಯನ್ನು ಹಾಕಿಕೊಂಡಿದ್ದಾರೆ. ಸುರೇಶ್ ಗೋಪಿ ಅವರು ಕಾಂಗ್ರೆಸ್‌ನ ಕೆ.ಮುರಳೀಧರನ್ ಮತ್ತು ಸಿಪಿಐಯ ವಿ.ಎಸ್.ಸುನೀಲ್ ಕುಮಾರ್ ಅವರನ್ನು ಮಣಿಸಿ ಐತಿಹಾಸಿಕ ಗೆಲುವು ಸಾಧಿಸುವ ಮೂಲಕ ಗಮನ ಸೆಳೆದಿದ್ದಾರೆ.
ಸುರೇಶ್ ಗೋಪಿ ಬರೋಬ್ಬರಿ 74,686 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದು, ಇದು ಕೇರಳದಲ್ಲಿ ಬಿಜೆಪಿಯ ಮೊಟ್ಟ ಮೊದಲ ಗೆಲುವು ಆಗಿದೆ.












Click it and Unblock the Notifications