Narendra Modi: ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಮಪತ್ರ ಸಲ್ಲಿಕೆ

ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಮಂಗಳವಾರ ನಾಮ ಪತ್ರ ಸಲ್ಲಿಸಿದ್ದಾರೆ.

ನಾಮಪತ್ರ ಸಲ್ಲಿಸುವ ವೇಳೆ ಅಯೋಧ್ಯೆಯಲ್ಲಿ ಭಗವಾನ್ ರಾಮನ ಪ್ರಾಣ-ಪ್ರತಿಷ್ಠೆಗೆ 'ಮುಹೂರ್ತ'ವನ್ನು ನಿರ್ಧರಿಸಿದ ಪಂಡಿತ್ ಗಣೇಶ್ವರ ಶಾಸ್ತ್ರಿ ಜೊತೆಗೆ ನಾಲ್ವರು ಹಾಜರಿದ್ದರು. ಇನ್ನು ಬೈಜನಾಥ್ ಪಟೇಲ್ ಸಮುದಾಯದ ಆರ್‌ಎಸ್‌ಎಸ್ ಸ್ವಯಂಸೇವಕ, ಒಬಿಸಿ ಸಮುದಾಯದ ಲಾಲ್‌ಚಂದ್ ಕುಶ್ವಾಹಾ ಮತ್ತು ದಲಿತ ಸಮುದಾಯದ ಸಂಜಯ್ ಸೋಂಕರ್ ಸಹ ಇದೇ ವೇಳೆ ಮೋದಿ ಜೊತೆಗೆ ಉಪಸ್ಥಿತರಿದ್ದರು.

Lok Sabha Election BJP MP candidate Narendra Modi Files His Nomination From Varanasi

ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ ವೇಳೆ ಕೇಂದ್ರ ಸಚಿವ ಅಮಿತ್ ಶಾ, ರಾಜನಾಥ್‌ ಸಿಂಗ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಿಪಿ ನಡ್ಡಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಜನ ಸೇನಾ ಪಾರ್ಟಿ ಅಧ್ಯಕ್ಷ ಪವನ್‌ ಕಲ್ಯಾಣ್‌, ಮಹರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಹಾಗೂ ಎನ್‌ಡಿಎ ಪಕ್ಷದ ಹಿರಿಯ ಮುಖಂಡರು ಹಾಜರಿದ್ದರು.

ವಾರಣಾಸಿಯಿಂದ ನಾಮ ಪತ್ರ ಸಲ್ಲಿಕೆ

ಪ್ರಧಾನಿ ನರೇಂದ್ರ ಮೋದಿ ಸತತ ಮೂರನೇ ಬಾರಿಗೆ ಇದೇ ಕ್ಷೇತ್ರದಿಂದ ಲೋಕಸಭಾ ಪ್ರವೇಶಿಸುವ ಆಸೆಯನ್ನು ಹೊಂದಿದ್ದಾರೆ. ಇದಕ್ಕೂ ಮೊದಲು 2014 ಹಾಗೂ 2019ರಲ್ಲೂ ಇದೇ ಲೋಕಸಭಾ ಕ್ಷೇತ್ರದಿಂದ ಮೋದಿ ಲೋಕಸಭೆಗೆ ಆಯ್ಕೆ ಆಗಿದ್ದರು. ಈ ಬಾರಿ ಮೂರನೇ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಮೋದಿ ನಾಮಪತ್ರ ಸಲ್ಲಿಸಿದ್ದಾರೆ.

Lok Sabha Election BJP MP candidate Narendra Modi Files His Nomination From Varanasi

ಪೂಜೆ ನೆರವೇರಿಸಿದ ಪ್ರಧಾನಿ

ನಾಮಪತ್ರ ಸಲ್ಲಿಸುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಬನಾರಸ್‌ನ ದಶಾಶ್ವಮೇಧ ಘಾಟ್‌ನಲ್ಲಿ ಗಂಗಾ ಮಾತೆಗೆ ಪೂಜೆ ಮಾಡಿದರು. ಬೆಳಿಗ್ಗೆ 11.40ರ ಶುಭ ಮುಹೂರ್ತದಲ್ಲಿ ನಾಮಪತ್ರ ಸಲ್ಲಿಸಿದರು.

ಮೂರನೇ ಬಾರಿ ಪ್ರಧಾನಿ

ಪ್ರಧಾನಿ ನರೇಂದ್ರ ಮೋದಿಯವರ ನಾಮನಿರ್ದೇಶನದ ಶುಭ ಸಂದರ್ಭದಲ್ಲಿ ನಾವು ಇಲ್ಲಿಗೆ ಬಂದಿರುವುದು ನಮ್ಮ ಅದೃಷ್ಟ ಎಂದು ಹಿಂದೂಸ್ತಾನಿ ಅವಾಮ್ ಮೋರ್ಚಾ (ಎಚ್‌ಎಎಂ) ನಾಯಕ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಹೇಳಿದ್ದಾರೆ. ಈ ಬಾರಿ ಎನ್‌ಡಿಎ 400 ದಾಟುವ ಗುರಿಯನ್ನು ಸಾಧಿಸುತ್ತದೆ. ಮತ್ತೆ ಮೂರನೇ ಬಾರಿಗೆ ಪ್ರಧಾನಿಯಾಗಲಿ ಎಂದು ನಾವು ದೇವರನ್ನು ಪ್ರಾರ್ಥಿಸುತ್ತೇವೆ ಎಂದು ತಿಳಿಸಿದ್ದಾರೆ.

ರೋಡ್‌ ಶೋ

ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಸುಮಾರು ಆರು ಕಿಲೋ ಮೀಟರ್‌ ರೋಡ್‌ ಶೋ ನಡೆಸಿದರು. ಈ ವೇಳೆ ರಸ್ತೆಯ ಇಕ್ಕೆಲುಗಳಲ್ಲಿ ಅಪಾರ ಜನಸಂಖ್ಯೆಯ ಜನಸ್ಥೋಮ ಜನರನ್ನು ಅಭಿನಂದಿಸಿತು. ವಾರಣಾಸಿ ನಗರ ನವ ವಧುವಣ ಗಿತ್ತಿಯಂತೆ ಶೃಂಗಾರ ಗೊಂಡಿತ್ತು. ನಗರದಲ್ಲಿ ಕೇಸರಿ ಬಾವುಟಗಳು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಭಾವ ಚಿತ್ರಗಳು ಅಲಲ್ಲಿ ರಾರಾಜಿಸುತ್ತಿದ್ದವು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆಧಿತ್ಯ ನಾಥ್‌ ಸಾಥ್ ನೀಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+