Bihar Politics: ಬಿಜೆಪಿಗೆ ಕಳೆದ ಚುನಾವಣೆಯ ಭರ್ಜರಿ ಯಶಸ್ಸು ಈ ಬಾರಿ ಸಾಧ್ಯವಿಲ್ಲ ಬಿಡಿ!
ಪಾಟ್ನಾ, ಮಾರ್ಚ್ 19: ಬಿಹಾರ ರಾಜಕೀಯ ಯಾವಾಗ ಬದಲಾಗುತ್ತೆ ಎಂಬುದೇ ಗೊತ್ತಾಗದಂತಾಗಿದೆ. ಅದಕ್ಕೆ ಕಾರಣ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಅತಿಯಾಸೆ ಎಂದರೆ ಅದು ತಪ್ಪಲ್ಲ. ಯಾವಾಗ... ಯಾಕೆ.. ಯಾವ ಕಾರಣಕ್ಕಾಗಿ ತಮ್ಮ ಪಕ್ಷವನ್ನು ಬೇರೆ ಪಕ್ಷಗಳ ಜೊತೆಗೆ ಮೈತ್ರಿ ಮಾಡಿಕೊಳ್ಳುತ್ತಾರೆ ಎಂಬುದೆ ಅವರಿಗೆ ಗೊತ್ತಿರುವುದಿಲ್ಲ. ಅದೆ ಬುದ್ಧಿ ಈ ಬಾರಿಯ ಲೋಕಸಭಾ ಚುನಾವಣೆ ಮೇಲೆ ಗಂಭೀರ ಪ್ರಭಾವ ಬೀರಲಿದೆ.
ಎಸ್... "ನಿತೀಶ್ ಕುಮಾರ್‌ಗೆ ಎಲ್ಲಾ ಬಾಗಿಲುಗಳು ಶಾಶ್ವತವಾಗಿ ಮುಚ್ಚಲಾಗಿದೆ" ಎಂದು ಘೋಷಿಸಿದ ಅಮಿತ್ ಶಾ ಅವರು ಯು-ಟರ್ನ್ ತೆಗೆದುಕೊಂಡು ನಿತೀಶ್ ಕುಮಾರ್ ಅವರನ್ನು ಎನ್‌ಡಿಎ ತೆಕ್ಕೆಗೆ ಮರು ಸೇರ್ಪಡೆಗೊಳಿಸಿಕೊಂಡಿದ್ದಾರೆ. ಇದು ಬಿಜೆಪಿ ಮಾತ್ರವಲ್ಲ ನಿತೀಶ್ ಕುಮಾರ್ ಅವರ ಜೆಡಿಯುನಲ್ಲಿಯೂ ಅಸಮಾಧಾನಕ್ಕೆ ಕಾರಣವಾಗಿದೆ.

ಮೋದಿಯ ಮ್ಯಾಜಿಕ್ ಮತ್ತು ರಾಮಮಂದಿರ ಎಲ್ಲಾ ಪ್ರಚಾರದ ಹೊರತಾಗಿಯೂ, ಬಿಹಾರದಲ್ಲಿ ಜೆಡಿಯು, ಆರ್‌ಜೆಡಿ, ಕಾಂಗ್ರೆಸ್ ಮತ್ತು ಮೂರು ಎಡಪಕ್ಷಗಳಂತೆ ಕೇಸರಿ ಪಾಳಯಕ್ಕೆ ಭಾವನಾತ್ಮಕ ಸಮಸ್ಯೆಗಳು ಸಹಾಯ ಮಾಡುವುದಿಲ್ಲ ಎಂದು ಜನವರಿಯಲ್ಲಿ ಬಿಜೆಪಿ ನಡೆಸಿದ ಆಂತರಿಕ ಸಮೀಕ್ಷೆ ಹೇಳಿದೆ ಎಂದು ವರದಿಯಾಗಿದೆ.
ಎನ್‌ಡಿಎ ಓಟಕ್ಕೆ ಅಡೆಯಾಗುವ ಅಂಶಗಳು
ಮೊದಲನೇಯದಾಗಿ ಗಮನಿಸಬೇಕಾದ ಅಂಶವೆಂದರೇ, 2019 ರ ಸಂಸತ್ತಿನ ಚುನಾವಣೆಯಲ್ಲಿ 53% ಮತಗಳನ್ನು ಗಳಿಸಿದ ನಂತರ ಬಿಹಾರದ 40 ಲೋಕಸಭಾ ಕ್ಷೇತ್ರಗಳಲ್ಲಿ 39 ಸ್ಥಾನಗಳನ್ನು ಎನ್‌ಡಿಎ ಗೆದ್ದು ಬೀಗಿದೆ. ಆದರೆ, 2019 ರಿಂದ ಬಿಹಾರದ ರಾಜಕೀಯ ಛಿದ್ರ ಛಿದ್ರವಾಗಿದೆ. ಪ್ರಧಾನಿ ನರೇಂದ್ರ ಮೋದಿಯ ಮ್ಯಾಜಿಕ್ ಈ ಭಾಗದಲ್ಲಿ ಕಡಿಮೆಯಾಗಿಲ್ಲ ನಿಜ.
ಆದರೆ, ಅವರ ಮೈತ್ರಿ ಪಕ್ಷದ ನಾಯಕ ನಿತೀಶ್ ಕುಮಾರ್ ಅವರ ಹಲವಾರು ನಿರ್ಧಾರಗಳಿಂದ ಈ ಭಾರಿ ಸರಿಯಾಗಿಯೇ ಹೊಡೆತ ಬೀಳಲಿದೆ. ರಾಜ್ಯದಾದ್ಯಂತ ಜೆಡಿಯು ನಾಯಕ ನಿತೀಶ್ ಕುಮಾರ್ ಬಗ್ಗೆ ಉತ್ತಮ ಅಭಿಪ್ರಾಯವಿಲ್ಲ. ಅವರ ಹೆಸರಿನಲ್ಲಿ ಮತಗಳನ್ನು ಪಡೆಯುವಂತಹ ಯಾವುದೇ ಸ್ಥಿತಿಯಿಲ್ಲ.
ಎರಡನೆಯದಾಗಿ, 2024 ರಲ್ಲಿ, ರಾಮ್ ವಿಲಾಸ್ ಪಾಸ್ವಾನ್ ಅವರ ಹೆಸರಿಲ್ಲ. ಆರರಿಂದ 7% ದಲಿತರ ಮೇಲೆ ಹಿಡಿತ ಹೊಂದಿದ್ದ ರಾಮ್ ವಿಲಾಸ್ ಪಾಸ್ವಾನ್ ಈಗಿಲ್ಲ. ಅವರ ಮಗ ಚಿರಾಗ್ ರಾಮ್ ವಿಲಾಸ್‌ನಲ್ಲಿ ದೊಡ್ಡ ನಾಯಕಾಗುವ ಯಾವ ಲಕ್ಷಣಗಳು ಇಲ್ಲ. ಚಿರಾಗ್ ಪಾಸ್ವಾನ್ ಅವರ ಚಿಕ್ಕಪ್ಪ (ರಾಮ್ ವಿಲಾಸ್ ಅವರ ಕಿರಿಯ ಸಹೋದರ) ಪಶುಪತಿ ಕುಮಾರ್ ಪರಾಸ್ ಅವರು ಮೋದಿ ಸರ್ಕಾರದಲ್ಲಿ ಕೇಂದ್ರ ಸಚಿವರೂ ಅಲ್ಲ ಈ ಅಂಶಗಳು ಕೂಡ ದೊಡ್ಡ ಪರಿಣಾಮ ಬೀರಲಿವೆ.

ಮೂರನೆಯದಾಗಿ, ಮಹಾಘಟಬಂಧನ್‌ನಲ್ಲಿ ಸಿಪಿಐ-ಎಂಎಲ್, ಸಿಪಿಎಂ ಮತ್ತು ಸಿಪಿಐ ಸೇರ್ಪಡೆಯು ಆರ್‌ಜೆಡಿ-ಕಾಂಗ್ರೆಸ್ ಒಕ್ಕೂಟಕ್ಕೆ ಬಲ ನೀಡಿದೆ. 2019 ರಲ್ಲಿ ಬಿಹಾರದಲ್ಲಿ ಎಡಪಕ್ಷಗಳು ಯಾವುದೇ ಮೈತ್ರಿಕೂಟದ ಭಾಗವಾಗಿರಲಿಲ್ಲ. ಈ ಬಾರಿ ಮೈತ್ರಿಕೂಟಕ್ಕೆ ಸೇರಿಕೊಂಡಿದ್ದು ಲೆಕ್ಕಾಚಾರ ಬದಲಾಗಲಿದೆ. ಈ ಮೂರು ಪಕ್ಷಗಳು ಒಟ್ಟು 10% ಮತಗಳನ್ನು ಪಡೆದಿವೆ. ಇದು RJD-ಕಾಂಗ್ರೆಸ್ ಸಂಯೋಜಿತ ಬಲಕ್ಕೆ 31% (2019 ರ ಅಂಕಿಅಂಶಗಳ ಪ್ರಕಾರ) ಬಲ ಸೇರಿಸುತ್ತದೆ.
ನಾಲ್ಕನೆಯದು ಆಗಸ್ಟ್ 2022 ರಿಂದ ಜನವರಿ 2024 ರವರೆಗೆ ಎರಡನೇ ಬಾರಿಗೆ ಉಪ ಮುಖ್ಯಮಂತ್ರಿಯಾಗಿ ಕಳೆದ ಒಂದೂವರೆ ವರ್ಷಗಳಲ್ಲಿ ತೇಜಸ್ವಿ ಯಾದವ್ ಅವರ ಇಮೇಜ್ ಹೆಚ್ಚಾಗಿರುವುದು. ನವೆಂಬರ್ 2020 ರ ವಿಧಾನಸಭಾ ಚುನಾವಣೆಯಲ್ಲಿ ಬಿಹಾರದ ನಿರುದ್ಯೋಗಿಗಳಿಗೆ ಲಕ್ಷಗಟ್ಟಲೆ ಉದ್ಯೋಗಗಳ ಭರವಸೆ ನೀಡುವ ಮೂಲಕ ತೇಜಸ್ವಿ ಯಾದವ್, ಏಕಾಂಗಿಯಾಗಿ ಆರ್‌ಜೆಡಿಯ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮುವಂತೆ ಮಾಡಿದ್ದರು.
ತೇಜಸ್ವಿ ಯಾದವ್ ಡಿಸಿಎಂ ಆಗಿ ಅಧಿಕಾರ ವಹಿಸಿಕೊಂಡಾಗ, ಅವರು ಕೇವಲ 17 ತಿಂಗಳಲ್ಲಿ ತಮ್ಮ ಭರವಸೆಯನ್ನು ಜನರಿಗೆ ಅಪಾಯಿಂಟ್ಮೆಂಟ್ ನೀಡುವ ಮೂಲಕ ಈಡೇರಿಸಿದ್ದರು. ಆ ಮೂಲಕ ಯುವಕರನ್ನು ತಮ್ಮತ್ತ ಸೆಳೆದಿದ್ದರು. ಸದ್ಯದ ಚುನಾವಣೆಯಲ್ಲಿ ತೇಜಸ್ವಿ ಯಾದವ್ ಅವರು 17 ವರ್ಷಗಳ ನಿತೀಶ್ ಆಳ್ವಿಕೆ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ.












Click it and Unblock the Notifications