Lok Sabha Election: ಮನೆಯಲ್ಲೇ ಕುಳಿತು ಮತದಾನ ಮಾಡುವ ಅವಕಾಶ, ಯಾರಿಗೆ? ಹೇಗೆ? ಇಲ್ಲಿದೆ ವಿವರ
ನವದೆಹಲಿ, ಮಾರ್ಚ್ 16: 2024ರ ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆ ಮಾಡಲಾಗಿದೆ. ದೇಶದಲ್ಲಿ ಏಪ್ರಿಲ್ 19 ರಿಂದ ಚುನಾವಣೆ ಆರಂಭವಾಗಲಿದ್ದು, ಒಟ್ಟು ಏಳು ಹಂತದಲ್ಲಿ ಜೂನ್ 1ರವೆಗೆ ಮತದಾನ ನಡೆಯಲಿದೆ. ಜೂನ್ 4ಕ್ಕೆ ಮತ ಎಣಿಕೆ ನಡೆಯಲಿದ್ದು ಲೋಕಸಭಾ ಚುನಾವಣೆ ಫಲಿತಾಂಶ ಹೊರ ಬೀಳಲಿದೆ.
ಕೇಂದ್ರ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಇಂದು(ಮಾರ್ಚ್ 16) ಲೋಕಸಭಾ ಚುನಾವಣೆ ಕುರಿತು ಮಹತ್ವದ ಸುದ್ದಿಗೋಷ್ಠಿ ನಡೆಸಿದ್ದು, ಚುನಾವಣೆಯ ಬಗ್ಗೆ ಹಾಗೂ ಮತದಾರರ ಬಗ್ಗೆ ಮಾಹಿತಿ ನೀಡಿದ್ದಾರ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಒಟ್ಟು 97 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹತೆಯನ್ನು ಹೊಂದಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ದೇಶದಲ್ಲಿ 82 ಲಕ್ಷಕ್ಕೂ ಹೆಚ್ಚು ಮಂದಿ 85 ವರ್ಷಕ್ಕೂ ಹೆಚ್ಚು ಮೇಲ್ಪಟ್ಟ ಮತದಾರರು ಹಾಗೂ 2.18 ಲಕ್ಷ 100 ವರ್ಷ ಪೂರೈಸಿದ ಮತದಾರರು ಹಾಗೂ 89 ಲಕ್ಷ ವಿಶೇಷ ಚೇತನ ಮತದಾರರು ಇದ್ದಾರೆ. ಇವರಿಗಾಗಿ ಕೇಂದ್ರ ಚುನಾವಣಾ ಆಯೋಗ ವಿಶೇಷ ಅವಕಾಶ ನೀಡಿದ್ದು, ವಯೋವೃದ್ಧರು ಹಾಗೂ ವಿಶೇಷ ಚೇತನರು ಮತದಾನದ ಕೇಂದ್ರಗಳಿಗೆ ತೆರಳದೇ ಮನೆಯಲ್ಲೇ ಕುಳಿತು ಮತದಾನ ಮಾಡಬಹುದು ಎಂದು ಕೇಂದ್ರ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದ್ದಾರೆ.
ಈ ಮೂಲಕ ದೇಶದ ಯಾವ ಪ್ರಜೆಯೂ ಮತದಾನ ಮಾಡುವ ಹಕ್ಕಿನಿಂದ ದೂರ ಸರಿಯಬಾರದು ಎಂದು ಚುನಾವಣಾ ಆಯೋಗ ತಿಳಿಸಿದೆ. ಇನ್ನು ಬಾರಿ ಲೋಕಸಭಾ ಚುನಾವಣೆಯಲ್ಲಿ ರಿ 97 ಕೋಟಿಗೂ ಹೆಚ್ಚು ಜನ ಮತದಾನ ಮಾಡಲಿದ್ದಾರೆ. ಈ ಬಾರಿ 49.7 ಕೋಟಿ ಪುರುಷ ಮತದಾರರು, 47.1 ಕೋಟಿ ಮಹಿಳಾ ಮತದಾರರು ಇದ್ದಾರೆ. 19 ಕೋಟಿಗೂ ಹೆಚ್ಚು ಯುವ ಮತದಾರಿದ್ದಾರೆ. ವಿಶೇಷವೆಂದರೆ ಈ ಬಾರಿ 1.8 ಕೋಟಿ ಮತದಾರರು ಮೊದಲ ಬಾರಿಗೆ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.












Click it and Unblock the Notifications