Lok Sabha Election 2024: ಯುಪಿ ಹಾಲಿ ಸಂಸದರ ಸಾಧನೆಯ ಮಾಹಿತಿ ಸಂಗ್ರಹಕ್ಕೆ ಮುಂದಾದ ಎಸ್‌ಪಿ

ಲಕ್ನೋ, ಜೂನ್ 06: 2024ರ ಲೋಕಸಭಾ ಚುನಾವಣೆಗೆ ಪ್ರೋಫಾರ್ಮಾವನ್ನು ವಿತರಿಸಿರುವ ಸಮಾಜವಾದಿ ಪಕ್ಷವು (SP) ಉತ್ತರ ಪ್ರದೇಶದ ಕ್ಷೇತ್ರಗಳಲ್ಲಿ ಗೆಲುವಿಗಾಗಿ ಕಾರ್ಯತಂತ್ರ ಯೋಜನೆ ರೂಪಿಸಿದೆ. ಅದರ ಭಾಗವಾಗಿ ಪ್ರತಿ ಕ್ಷೇತ್ರಗಳಲ್ಲಿನ ಸಂಸದರ ಕಾರ್ಯಕ್ಷಮತೆಯ ಮಾಹಿತಿ ಸಂಗ್ರಹಿಸಲು ಪ್ರಾರಂಭಿಸಿದೆ.

ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಲಕ್ನೋದಲ್ಲಿ ಕಳೆದ ವಾರ ಮಹತ್ವದ ಸಭೆ ನಡೆಸಿದ್ದಾರೆ. ಅಲ್ಲಿನ ಜಿಲ್ಲಾಧ್ಯಕ್ಷರಿಗೆ ಪ್ರೋಫಾರ್ಮಾವನ್ನು ವಿತರಿಸಿದ್ದಾರೆ. ರಾಜ್ಯದ ವಿವಿಧ ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆ, ಅಭಿವೃದ್ದಿ ಕುರಿತ ಪ್ರಶ್ನೆಗಳಿಗೆ ಉತ್ತರ ಹುಡುಕುವಂತೆ ನಾಯಕರಿಗೆ ಅವರು ಸೂಚಿಸಿದ್ದಾರೆ.

Lok Sabha Election 2024

ಲೋಕಸಭಾ ಕ್ಷೇತ್ರಗಳಲ್ಲಿನ ಹಾಲಿ ಸಂಸದರ ಕಾರ್ಯಸಾಧನೆ, ನೀಡಿದ ಪ್ರಮುಖ ಭರವಸೆಗಳ ಈಡೇರಿಕೆ, ಕ್ಷೇತ್ರದ ಮತದಾರರ ನಿರೀಕ್ಷೆಗಳು, ಬೇಡಿಕೆಗಳು ಏನು ಎಂಬುದೆಲ್ಲವನ್ನು ನಾವು ಪರಿಗಣನೆಗೆ ತೆಗೆದುಕೊಂಡು ಚುನಾವಣೆ ಎದುರಿಸಲಿದ್ದೇವೆ. ಚುನಾಯಿತರಾದ ಬಳಿಕ ಭರವಸೆ ಈಡೇರಿಕೆಗೆ ಸಿದ್ಧರಿದ್ದೇವೆ ಎಂದು ಯಾದವ್ ತಿಳಿಸಿದ್ದಾರೆ.

ಜನರ ನಿರೀಕ್ಷೆಗೆ ಅನುಗುಣವಾಗಿ ಎಸ್‌ಪಿ ಪ್ರಣಾಳಿಕೆ

ಪಕ್ಷವು ಉತ್ತರ ಪ್ರದೇಶದಿಂದ ಕೇವಲ 3 ಸಂಸದರನ್ನು ಹೊಂದಿದೆ. 2019ರ ಲೋಕಸಭಾ ಚುನಾವಣೆಯಲ್ಲಿ 80 ಕ್ಷೇತ್ರಗಳ ಉತ್ತರ ಪ್ರದೇಶದ ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ 62 ಸೀಟು ಬಾಚಿಕೊಂಡಿತು. ಅದರ ಮಿತ್ರ ಪಕ್ಷವಾದ ಅಪ್ನಾ ದಳ (ಎಸ್) ಎರಡು ಸ್ಥಾನ ಗೆದ್ದಿದೆ. ಈ ಬಾರಿ ಸಮಾಜವಾದಿ ಪಕ್ಷ ಗೆಲುವಿನ ನಗೆ ಬೀರ ಸನ್ನದ್ಧವಾಗುತ್ತಿದೆ. ಸಾರ್ವಜನಿಕರ ನಿರೀಕ್ಷೆಗೆ ಅನುಗುಣವಾಗಿ ಪ್ರಣಾಳಿಕೆ ರೂಪಿಸಲಿದ್ದೇವೆ ಎಂದು ಅವರು ಹೇಳಿದರು.

ಪಕ್ಷದ ವಕ್ತಾರ ರಾಜೇಂದ್ರ ಚೌಧರಿ ಅವರು, ಜಿಲ್ಲಾ ಅಧ್ಯಕ್ಷರಿಂದ ಸಂಗ್ರಹಿಸಲಾದ ಮಾಹಿತಿ ಆಧರಿಸಿದ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಸಹ ರಾಜ್ಯದಲ್ಲಿ ಸಂಸದರು ಜನರ ನಿರೀಕ್ಷೆ ಪೂರೈಸಲು ವಿಫಲರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Lok Sabha Election 2024

ಗೆದ್ದ ಸ್ಥಾನಗಳ ಮೇಲೆ ಎಸ್‌ಪಿ ಕಣ್ಣು

2019ರ ಚುನಾವಣೆಯಲ್ಲಿ ಎಸ್‌ಪಿ ಬಿಎಸ್‌ಪಿ ಮತ್ತು ರಾಷ್ಟ್ರೀಯ ಲೋಕದಳ (RJD) ಜೊತೆ ಮೈತ್ರಿ ಮಾಡಿಕೊಂಡು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿತ್ತು. ಬಿಎಸ್‌ಪಿ 10 ಸ್ಥಾನಗಳನ್ನು ಗೆದ್ದರೆ, ಎಸ್‌ಪಿ ಐದು ಮತ್ತು ಆರ್‌ಎಲ್‌ಡಿ ಒಂದು ಸೀಟು ಸಹ ಗೆಲ್ಲಲಿಲ್ಲ.

ಮೂಲಗಳ ಪ್ರಕಾರ, ಸಮಾಜವಾದಿ ಪಕ್ಷವು ಬಿಜೆಪಿ, ಅಪ್ನಾ ದಳ (ಎಸ್) ಮತ್ತು ಬಿಎಸ್‌ಪಿ ಕಳೆದ ಬಾರಿ ಗೆದ್ದ ಸ್ಥಾನಗಳ ಮೇಲೆ ಕಣ್ಣಿಟ್ಟಿದೆ. ಕಾರ್ಯಕರ್ತರು ವಿವರಗಳನ್ನು ಸಂಗ್ರಹಿಸಲು ಮುಂದಾದ ಕ್ಷೇತ್ರಗಳಲ್ಲಿ ರಾಯ್ ಬರೇಲಿಯು ಹೌದು. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಗಳಿಸಿದ್ದಾರೆ. ಅದನ್ನು ಕಸಿದುಕೊಳ್ಳಲು ಎಸ್‌ಪಿ ಪ್ಲಾನ್ ಮಾಡಿದೆ.

ಉತ್ತರ ಪ್ರದೇಶದ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಮ್ಮ ಪಕ್ಷ ಸಿದ್ಧತೆ ನಡೆಸಿದೆ. ಕಳೆದ ವಾರದ ಜಿಲ್ಲಾಧ್ಯಕ್ಷರೊಂದಿಗಿನ ಜಂಟಿ ಸಭೆಯ ನಂತರ ಅಖಿಲೇಶ್ ಜಿಲ್ಲಾ ಘಟಕಗಳೊಂದಿಗೆ ಪ್ರತ್ಯೇಕ ಸಭೆಗಳನ್ನು ಪ್ರಾರಂಭಿಸಿದ್ದಾರೆ. ಜಿಲ್ಲಾಧ್ಯಕ್ಷರಿಂದ ಸಂಗ್ರವಾದಹ ಮಾಹಿತಿಯ ವಿಶ್ಲೇಷಣೆ ಆರಂಭವಾಗಿದೆ ಎಂದು ಚೌಧರಿ ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+