Lok Sabha Election 2024: ಬಿಜೆಪಿ ಕಾರ್ಯತಂತ್ರ ರಚಿಸಲು 3 ದಿನಗಳ ಮಹತ್ವದ ಸಭೆ ನಡೆಸಲಿರುವ ಆರ್‌ಎಸ್‌ಎಸ್

ಮುಂಬೈ, ಮಾರ್ಚ್ 13: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂಸ್ಥೆ ಅಖಿಲ ಭಾರತೀಯ ಪ್ರತಿನಿಧಿ ಸಭೆ (ಎಬಿಪಿಎಸ್) ಮಾರ್ಚ್ 15 ರಿಂದ ನಾಗಪುರದಲ್ಲಿ ಮುಂಬರುವ ಲೋಕಸಭೆ ಚುನಾವಣೆಗೆ ಮುನ್ನ ಮೂರು ದಿನಗಳ ಪ್ರಮುಖ ಸಭೆಯನ್ನು ನಡೆಸಲು ಸಿದ್ಧವಾಗಿದೆ.

ಈ ಸಭೆಯಲ್ಲಿ 350ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಪಣ ತೊಟ್ಟ ಭಾರತೀಯ ಜನತಾ ಪಕ್ಷದ (ಬಿಜೆಪಿ) ಗುರಿಯನ್ನು ಸಾಧಿಸುವ ಮಾರ್ಗಸೂಚಿಯನ್ನು ಆರ್‌ಎಸ್‌ಎಸ್‌ ನಾಯಕರು ಚರ್ಚಿಸಲಿದ್ದಾರೆ. ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆಯ ಅನುಷ್ಠಾನ, ಮಣಿಪುರ ಸಂಘರ್ಷ, ರೈತರ ಪ್ರತಿಭಟನೆಗಳ ಬಗ್ಗೆಯೂ ಚರ್ಚೆ ನಡೆಸಲಾಗುತ್ತದೆ.

Lok Sabha election 2024 RSS to hold key 3 day meeting in Nagpur

ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಪ್ರಧಾನ ಕಾರ್ಯದರ್ಶಿ ಸುನಿಲ್ ಬನ್ಸಾಲ್ ಮತ್ತು ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿಎಲ್ ಸಂತೋಷ್ ಸೇರಿದಂತೆ ಬಿಜೆಪಿಯ ಹಿರಿಯ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಜೊತೆಗೆ 2025 ರಲ್ಲಿ ತನ್ನ ಶತಮಾನೋತ್ಸವ ವರ್ಷವನ್ನು ಆಚರಿಸಲಿರುವ ಸಂಘಟನೆಯ ಬಗ್ಗೆಯೂ ಚರ್ಚೆ ನಡೆಯಲಿದೆ.

ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ 350 ಸೀಟುಗಳು ಮತ್ತು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟಕ್ಕೆ (ಎನ್‌ಡಿಎ) 400 ಸ್ಥಾನಗಳನ್ನು ಗಳಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಸಾಧಿಸಲು ಈ ಸಭೆಯು ಕಾರ್ಯತಂತ್ರಗಳನ್ನು ರೂಪಿಸುವ ನಿರೀಕ್ಷೆಯಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ಬಿಜೆಪಿಯೊಳಗಿನ ಪ್ರಮುಖ ಚುನಾವಣಾ ತಂತ್ರಜ್ಞ ಸಂತೋಷ್ ಅವರು ಪಕ್ಷದ ಚುನಾವಣಾ ಕಾರ್ಯತಂತ್ರವನ್ನು ಪ್ರಸ್ತುತಪಡಿಸುತ್ತಾರೆ. ಜೊತೆಗೆ ಆರ್‌ಎಸ್‌ಎಸ್ ನಾಯಕತ್ವದಿಂದ ಸಲಹೆ ಪಡೆಯಲಿದ್ದಾರೆ ಎಂದು ವರದಿಯಾಗಿದೆ.

ಸಭೆಯಲ್ಲಿ ಆರ್‌ಎಸ್‌ಎಸ್ ಮತ್ತು ಬಿಜೆಪಿ ಸೇರಿದಂತೆ ಅದರ ಅಂಗಸಂಸ್ಥೆಗಳ ಸುಮಾರು 1,550 ಉನ್ನತ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ಮುಖಂಡರಾದ ಮೋಹನ್ ಭಾಗವತ್ ಮತ್ತು ದತ್ತಾತ್ರೇಯ ಹೊಸಬಾಳೆ ಅವರು ಸಂಘ ಪರಿವಾರದ ಹಿರಿಯ ಸದಸ್ಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

Lok Sabha election 2024 RSS to hold key 3 day meeting in Nagpur

ಚುನಾವಣೆಯಲ್ಲಿ ಬಿಜೆಪಿಗೆ ಲಾಭವಾಗುವಂತೆ ಅಯೋಧ್ಯೆಯಲ್ಲಿ ರಾಮಮಂದಿರದ ಐತಿಹಾಸಿಕ ಶಂಕುಸ್ಥಾಪನೆಯನ್ನು ಸದುಪಯೋಗಪಡಿಸಿಕೊಳ್ಳುವುದರ ಜೊತೆಗೆ ಜನಸಂಖ್ಯಾ ಸವಾಲುಗಳನ್ನು ಎದುರಿಸಲು ಜನಸಂಖ್ಯೆ ನಿಯಂತ್ರಣ ನೀತಿಯನ್ನು ರೂಪಿಸುವ ಬಗ್ಗೆಯೂ ಚರ್ಚೆಗಳು ಕೇಂದ್ರೀಕರಿಸುತ್ತವೆ.

ಇನ್ನು, ಜ್ಞಾನವ್ಯಾಪಿ ಮಸೀದಿ ಮತ್ತು ಮಥುರಾ ಈದ್ಗಾ ವಿವಾದಗಳಂತಹ ವಿವಾದಾತ್ಮಕ ವಿಷಯಗಳು ಸಭೆಯಲ್ಲಿ ಪ್ರಸ್ತಾಪವಾಗುವ ಸಾಧ್ಯತೆಯಿಲ್ಲ. ಆದರೆ, ಮಣಿಪುರದಲ್ಲಿ ಅಂತರ್-ಸಮುದಾಯ ಸಂಘರ್ಷಗಳನ್ನು ಪರಿಹರಿಸುವುದು ಮತ್ತು ತಮ್ಮ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (MSP) ಕುರಿತು ಪ್ರತಿಭಟನಾ ನಿರತ ರೈತರ ಪ್ರತಿಭಟನೆ ಬಗ್ಗೆ ಸಂಘದ ಅಂಗಸಂಸ್ಥೆಗಳು, ವಿಶೇಷವಾಗಿ ಭಾರತೀಯ ಕಿಸಾನ್ ಸಂಘ (BKS) ಸಭೆಯಲ್ಲಿ ಚರ್ಚೆ ಮಾಡಲಿದೆ. .

ನಾಗ್ಪುರದಲ್ಲಿರುವ ಸಂಘದ ಪ್ರಧಾನ ಕಚೇರಿಯಲ್ಲಿ ಪ್ರತಿ ಮೂರನೇ ವರ್ಷ ನಡೆಯುವ ಎಬಿಪಿಎಸ್ ಸಭೆಯು ಸಾಮಾಜಿಕ ಒಗ್ಗಟ್ಟು, ಪರಿಸರ ಸಮಸ್ಯೆಗಳು, ನೈರ್ಮಲ್ಯ ಮತ್ತು ನಾಗರಿಕರ ಜವಾಬ್ದಾರಿಗಳ ಕುರಿತು ಚರ್ಚೆಗಳನ್ನು ಒಳಗೊಂಡಿರುತ್ತದೆ. ಎಬಿಪಿಎಸ್ ನೂತನ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಿದ್ದು, ದತ್ತಾತ್ರೇಯ ಹೊಸಬಾಳೆ ಅವರು ಪ್ರಧಾನ ಕಾರ್ಯದರ್ಶಿಯಾಗಿ ಮುಂದುವರಿಯುವ ನಿರೀಕ್ಷೆಯಿದೆ.

ಆರ್‌ಎಸ್‌ಎಸ್ ತನ್ನ ಶತಮಾನೋತ್ಸವ ವರ್ಷವನ್ನು 2025 ರಲ್ಲಿ ಆಚರಿಸಲು ಸಜ್ಜಾಗುತ್ತಿದೆ. ದೇಶಾದ್ಯಂತ ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಮತ್ತು ಶಾಖಾಗಳ ಸಂಖ್ಯೆಯನ್ನು ಒಂದು ಲಕ್ಷಕ್ಕೆ ಹೆಚ್ಚಿಸುವ ಯೋಜನೆಯು ಸಭೆಯ ಕಾರ್ಯಸೂಚಿಯಲ್ಲಿದೆ. ಆರ್‌ಎಸ್‌ಎಸ್‌ನ 100 ವರ್ಷಗಳ ಸ್ಮರಣಾರ್ಥ ವರ್ಷವಿಡೀ ಆಚರಿಸುವ ಸಲಹೆಗಳ ಕುರಿತು ಚರ್ಚಿಸಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+