Lok Sabha Election Survey: ದಕ್ಷಿಣ ಭಾರತದ 130 ಕ್ಷೇತ್ರಗಳಲ್ಲಿ ಕಾಂಗ್ರೆಸ್, ಬಿಜೆಪಿ ಗೆಲ್ಲೋದು ಎಷ್ಟೆಷ್ಟು?
ನವದೆಹಲಿ, ಮಾರ್ಚ್ 05: ಪುದುಚೇರಿ ಸೇರಿದಂತೆ ದಕ್ಷಿಣ ರಾಜ್ಯಗಳಲ್ಲಿ ಒಟ್ಟು 130 ಲೋಕಸಭಾ ಸ್ಥಾನಗಳಲ್ಲಿ ವಿರೋಧ ಪಕ್ಷ ಐ.ಎನ್.ಡಿ.ಐ.ಎ. ಬ್ಲಾಕ್ 60 ಸ್ಥಾನಗಳನ್ನು ಗೆಲ್ಲಬಹುದು ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ 38 ಸ್ಥಾನಗಳನ್ನು ಗೆಲ್ಲಬಹುದು ಎಂದು ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆ ಬಹಿರಂಗಪಡಿಸಿದೆ.
ವೈಎಸ್ಆರ್ ಕಾಂಗ್ರೆಸ್, ಟಿಡಿಪಿ, ಎಐಎಡಿಎಂಕೆ, ಬಿಆರ್ಎಸ್, ಎಐಎಂಐಎಂ ಸೇರಿದಂತೆ ಇತರ ಪಕ್ಷಗಳು ಉಳಿದ 32 ಸ್ಥಾನಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ. ಈ ಸಮೀಕ್ಷೆಯ ವಿವರಗಳನ್ನು ಮಾರ್ಚ್ 4 ರಂದು ಇಂಡಿಯಾ ಟಿವಿಯಲ್ಲಿ ಪ್ರಸಾರ ಮಾಡಲಾಗಿದೆ. ದಕ್ಷಿಣ ಭಾರತದ ಯಾವ ಕ್ಷೇತ್ರದಲ್ಲಿ ಯಾಔ ಯಾವ ಪಕ್ಷಗಳು ಎಷ್ಟು ಸ್ಥಾನ ಗೆಲ್ಲಬಹುದು ಎಂದು ಇಲ್ಲಿ ವಿವರಿಸಲಾಗಿದೆ.

ತಮಿಳುನಾಡು ಲೋಕಸಭಾ ಚುನಾವಣೆ
ಡಿಎಂಕೆ ಆಡಳಿತವಿರುವ ತಮಿಳುನಾಡಿನಲ್ಲಿ ಐಎನ್‌ಡಿಐಎ ಬಣ 30, ಎನ್‌ಡಿಎ 5 ಮತ್ತು ಎಐಎಡಿಎಂಕೆ ಒಟ್ಟು 39 ಸ್ಥಾನಗಳಲ್ಲಿ 4 ಸ್ಥಾನಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ.
ಪಕ್ಷವಾರು ಮಾಹಿತಿ ನೋಡಿದರೆ, ಡಿಎಂಕೆ 20 ಸ್ಥಾನಗಳನ್ನು ಗೆಲ್ಲಬಹುದು, ಎಐಎಡಿಎಂಕೆ ಮತ್ತು ಬಿಜೆಪಿ ತಲಾ ನಾಲ್ಕು ಸ್ಥಾನಗಳನ್ನು ಗೆಲ್ಲಬಹುದು, ಕಾಂಗ್ರೆಸ್ ಆರು ಸ್ಥಾನಗಳನ್ನು ಗೆಲ್ಲಬಹುದು, ಪಿಎಂಕೆ ಒಂದು ಸ್ಥಾನವನ್ನು ಮತ್ತು ಇತರರು ನಾಲ್ಕು ಸ್ಥಾನಗಳನ್ನು ಗೆಲ್ಲಬಹುದು.
ಪುದುಚೇರಿ ಲೋಕಸಭಾ ಚುನಾವಣೆ
ಅಖಿಲ ಭಾರತ ಎನ್‌ಆರ್ ಕಾಂಗ್ರೆಸ್ ಬೆಂಬಲದೊಂದಿಗೆ ಪುದುಚೇರಿಯ ಏಕೈಕ ಲೋಕಸಭಾ ಕ್ಷೇತ್ರ ಬಿಜೆಪಿ ಪಾಲಾಗಬಹುದು ಎಂದು ಸಮೀಕ್ಷೆ ಹೇಳಿದೆ.

ತಮಿಳುನಾಡು ಲೋಕಸಭಾ ಚುನಾವಣೆ
ತಮಿಳುನಾಡಿನಲ್ಲಿ ಇಂಡಿಯಾ ಮೈತ್ರಿಕೂಟ ಡಿಎಂಕೆ, ಕಾಂಗ್ರೆಸ್, ಸಿಪಿಐ, ಸಿಪಿಐಎಂ, ವಿಸಿಕೆ, ಐಯುಎಂಎಲ್ ಮತ್ತು ಇತರ ಸಣ್ಣ ಪಕ್ಷಗಳನ್ನು ಒಳಗೊಂಡಿದೆ. ಎನ್‌ಡಿಎ ಬಿಜೆಪಿ, ಪಿಎಂಕೆ ಮತ್ತು ಇತರ ಸಣ್ಣ ಪಕ್ಷಗಳನ್ನು ಒಳಗೊಂಡಿದೆ. ಬಿಜೆಪಿ ತಮಿಳುನಾಡಿನಲ್ಲಿ ಸ್ವತಂತ್ರವಾಗಿ ಐದು ಸಂಸದೀಯ ಸ್ಥಾನಗಳಲ್ಲಿ ಗೆಲುವು ಸಾಧಿಸುವ ನಿರೀಕ್ಷೆಯಿದೆ
ಚೆನ್ನೈ ಒಟ್ಟು 6 (ಐ.ಎನ್.ಡಿ.ಐ.ಎ 5, ಎಐಎಡಿಎಂಕೆ 1), ಉತ್ತರ ತಮಿಳುನಾಡು ಒಟ್ಟು 7 (ಐಎನ್ ಡಿಐಎ 6, ಎನ್ ಡಿಎ 1), ಪಶ್ಚಿಮ ತಮಿಳುನಾಡು ಒಟ್ಟು 9 (ಐಎನ್ ಡಿಐಎ 6, ಎನ್ ಡಿಎ 2, ಎಐಎಡಿಎಂಕೆ 1), ದಕ್ಷಿಣ ತಮಿಳುನಾಡು ಒಟ್ಟು 10 (ಐಎನ್ ಡಿಐಎ 7, ಎನ್ ಡಿಎ 2, ಎಐಎಡಿಎಂಕೆ 1), ಕಾವೇರಿ ಡೆಲ್ಟಾ ಒಟ್ಟು 7 (ಐಎನ್‌ಡಿಐಎ 6, ಎಐಎಡಿಎಂಕೆ 1).
ಕರ್ನಾಟಕ ಲೋಕಸಭಾ ಚುನಾವಣೆ
ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿ ಬಿಜೆಪಿ 22, ಮೈತ್ರಿ ಪಾಲುದಾರ ಜಾತ್ಯಾತೀತ ಜನತಾದಳ 2 ಮತ್ತು ಕಾಂಗ್ರೆಸ್ ಒಟ್ಟು 28 ಸ್ಥಾನಗಳಲ್ಲಿ 4 ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ.
ಉತ್ತರ ಕರ್ನಾಟಕ ಒಟ್ಟು 11 (ಎನ್‌ಡಿಎ 9, ಕಾಂಗ್ರೆಸ್ 2), ಕರಾವಳಿ ಕರ್ನಾಟಕ ಒಟ್ಟು 3 (ಎನ್‌ಡಿಎ 3), ದಕ್ಷಿಣ ಕರ್ನಾಟಕ ಒಟ್ಟು 9 (ಎನ್‌ಡಿಎ 8, ಕಾಂಗ್ರೆಸ್ 1), ಬೆಂಗಳೂರು ಒಟ್ಟು 5 (ಎನ್‌ಡಿಎ 4, ಕಾಂಗ್ರೆಸ್ 1).
ಆಂಧ್ರಪ್ರದೇಶ ಲೋಕಸಭಾ ಚುನಾವಣೆ
ವೈಎಸ್‌ಆರ್ ಕಾಂಗ್ರೆಸ್ ಆಡಳಿತದ ಆಂಧ್ರಪ್ರದೇಶದಲ್ಲಿ ಆಡಳಿತ ಪಕ್ಷ ವೈಎಸ್‌ಆರ್‌ಸಿಪಿ 15 ಸ್ಥಾನಗಳನ್ನು ಮತ್ತು ತೆಲುಗು ದೇಶಂ ಪಕ್ಷವು ಒಟ್ಟು 25 ಸ್ಥಾನಗಳಲ್ಲಿ 10 ಸ್ಥಾನಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ.
ಕೆಳ ಆಂಧ್ರ ಒಟ್ಟು 8 (ಟಿಡಿಪಿ 4, ವೈಎಸ್‌ಆರ್‌ಸಿಪಿ 4), ರಾಯಲಸೀಮಾ ಒಟ್ಟು 7 (ವೈಎಸ್‌ಆರ್‌ಸಿಪಿ 5, ಟಿಡಿಪಿ 2). ಮೇಲಿನ ಆಂಧ್ರ ಒಟ್ಟು 10 (ವೈಎಸ್‌ಆರ್‌ಸಿಪಿ 6, ಟಿಡಿಪಿ 4).
ತೆಲಂಗಾಣ ಲೋಕಸಭಾ ಚುನಾವಣೆ
ಕಾಂಗ್ರೆಸ್ ಆಡಳಿತವಿರುವ ತೆಲಂಗಾಣದಲ್ಲಿ ಕಾಂಗ್ರೆಸ್ ಒಂಬತ್ತು ಸ್ಥಾನಗಳನ್ನು ಗೆಲ್ಲಬಹುದು, ಬಿಜೆಪಿ ಐದು ಸ್ಥಾನಗಳನ್ನು ಗೆಲ್ಲಬಹುದು, ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಕೇವಲ ಎರಡು ಸ್ಥಾನಗಳನ್ನು ಗೆಲ್ಲಬಹುದು ಮತ್ತು ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಕೇವಲ ಒಂದು ಸ್ಥಾನವನ್ನು ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ.
ಗ್ರೇಟರ್ ಹೈದರಾಬಾದ್ ಒಟ್ಟು 4 (ಬಿಜೆಪಿ 1, ಬಿಆರ್‌ಎಸ್ 1, ಕಾಂಗ್ರೆಸ್ 1, ಎಐಎಂಐಎಂ 1), ಲೋವರ್ ತೆಲಂಗಾಣ ಒಟ್ಟು 6 (ಕಾಂಗ್ರೆಸ್ 4, ಬಿಜೆಪಿ 1, ಬಿಆರ್‌ಎಸ್ 1), ಮೇಲ್ ತೆಲಂಗಾಣ ಒಟ್ಟು 7 (ಕಾಂಗ್ರೆಸ್ 4, ಬಿಜೆಪಿ 3)
ಕೇರಳ ಲೋಕಸಭಾ ಚುನಾವಣೆ
ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ ಆಡಳಿತವಿರುವ ಕೇರಳದ ಒಟ್ಟು 20 ಸ್ಥಾನಗಳಲ್ಲಿ I.N.D.I.A ಬ್ಲಾಕ್ 17 ಸ್ಥಾನಗಳನ್ನು ಗೆಲ್ಲಬಹುದು ಮತ್ತು ಬಿಜೆಪಿ ಉಳಿದ ಮೂರು ಸ್ಥಾನಗಳನ್ನು ಗೆಲ್ಲಬಹುದು. ಕಾಂಗ್ರೆಸ್ ನೇತೃತ್ವದ ಯುಡಿಎಫ್ 11 ಸ್ಥಾನಗಳನ್ನು ಮತ್ತು ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್ ಆರು ಸ್ಥಾನಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ.
ಎಲ್ಡಿಎಫ್ ಸಿಪಿಐ-ಎಂ, ಸಿಪಿಐ ಮತ್ತು ಇತರ ಸಣ್ಣ ಪಕ್ಷಗಳನ್ನು ಒಳಗೊಂಡಿದೆ. ಯುಡಿಎಫ್ ಕಾಂಗ್ರೆಸ್, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಮತ್ತು ಇತರ ಪಕ್ಷಗಳನ್ನು ಒಳಗೊಂಡಿದೆ. ಎನ್‌ಡಿಎ ಬಿಜೆಪಿ ಮತ್ತು ಇತರ ಸಣ್ಣ ಪಕ್ಷಗಳನ್ನು ಒಳಗೊಂಡಿದೆ.
ಮಲಬಾರ್ ಪ್ರದೇಶ ಒಟ್ಟು 7 (ಯುಡಿಎಫ್ 5, ಎಲ್ ಡಿಎಫ್ 2), ಕೊಚ್ಚಿನ್ ಪ್ರದೇಶ ಒಟ್ಟು 6 (ಎಲ್ ಡಿಎಫ್ 3, ಯುಡಿಎಫ್ 3), ತಿರುವಾಂಕೂರು ಪ್ರದೇಶ ಒಟ್ಟು 7 (ಎನ್ ಡಿಎ 3, ಯುಡಿಎಫ್ 3, ಎಲ್ ಡಿಎಫ್ 1).
ಫೆಬ್ರವರಿ 5 ಮತ್ತು 23 ರ ನಡುವೆ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಕರ್ನಾಟಕ ಮತ್ತು ಪುದುಚೇರಿಯ ಎಲ್ಲಾ 130 ಲೋಕಸಭಾ ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆಸಲಾಗಿದೆ.












Click it and Unblock the Notifications