Lok Sabha Election Exit Poll Results Live: ದೇಶದಲ್ಲಿ ಮತ್ತೆ ಮೋದಿ ಮೋಡಿ: ತಲೆಕೆಳಗಾಯ್ತಾ ಇಂಡಿಯಾ ಮೈತ್ರಿಕೂಟದ ಲೆಕ್ಕಾಚಾರ?

ಬೆಂಗಳೂರು, ಜೂನ್‌ 01: ದೇಶದ ಅತಿದೊಡ್ಡ ಪ್ರಜಾಪ್ರಭುತ್ವದ ಹಬ್ಬ ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಇಂದು ಅಂತ್ಯವಾಗಿದೆ. ದೇಶದಾದ್ಯಂತ ಏಳು ಹಂತಗಳನ್ನು ನಡೆದ ಲೋಕಸಭಾ ಚುನಾವಣೆಯ 2024ರ ಮತದಾನ ಅಂತ್ಯಗೊಂಡಿದೆ. ಇದೀಗ ಇಡೀ ದೇಶದ ಚಿತ್ತ ಫಲಿತಾಂಶದ ಮೇಲಿದ್ದು, ದೇಶದ ಅಧಿಕಾರದ ಚುಕ್ಕಾಣಿ ಹಿಡಿಯುವವರು ಯಾರು ಎನ್ನುವ ಕುತೂಹಲ ಹೆಚ್ಚಾಗಿದೆ.

ದೇಶದಲ್ಲಿ ಐದು ವರ್ಷಗಳ ಬಳಿಕ ಲೋಕಸಭಾ ಚುನಾವಣೆ ನಡೆದಿದ್ದು, ಅಧಿಕಾರ ಉಳಿಸಿಕೊಂಡು ಮತ್ತೆ ಅಧಿಕಾರ ಪಡೆಯಲು ಎನ್‌ಡಿಎ ಹೋರಾಟ ನಡೆಸಿದ್ದರೆ, ಶತಾಯಗತಾಯ ಈ ಬಾರಿ ಬಹುಮತ ಸಾಧಿಸಬೇಕು ಎಂದು ಐಎನ್‌ಡಿಐಎ ಒಕ್ಕೂಟ ಶತ ಪ್ರಯತ್ನ ನಡೆಸಿದೆ. ರಾಜಕೀಯ ನಾಯಕರ ಹೋರಾಟ ಏನೇ ಇರಲಿ ಕೊನೆಗೆ ಮತದಾರರ ನಿರ್ಣಯವೇ ಅಂತಿಮ.

Lok Sabha Election 2024 Exit Poll Results LIVE News Updates And Highlights In Kannada

7 ಹಂತದಲ್ಲಿ ನಡೆದ ಲೋಕಸಭೆ ಚುನಾವಣೆ ಫಲಿತಾಂಶ ಜೂನ್‌ 4ರ ಮಂಗಳವಾರ ಪ್ರಕಟವಾಗಲಿದೆ. ಶನಿವಾರ ಅಂತಿಮ ಹಂತದ ಮತದಾನ ಮುಗಿದ ಬಳಿಕ ವಿವಿಧ ರಾಷ್ಟ್ರೀಯ ವಾಹಿನಿಗಳು ನಡೆಸಿದ ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗುತ್ತಿದೆ. ಯಾವ ಪಕ್ಷ ಅಧಿಕಾರಕ್ಕೆ ಬರಬಹುದು?. ವಿವಿಧ ಚುನಾವಣೋತ್ತರ ಸಮೀಕ್ಷೆಯು ಇನ್ನೇನು ಕೆಲವೇ ಕ್ಷಣಗಳಲ್ಲಿ ಹೊರಬೀಳಲಿದ್ದು, ಈ ಬಗ್ಗೆ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.

Jun 03, 2024, 6:33 pm IST

ಎಕ್ಸಿಟ್ ಪೋಲ್‌ ಸಮೀಕ್ಷೆಗಳನ್ನು ಬಿಜೆಪಿ ಬಿಟ್ಟು ಇತರ ಎಲ್ಲಾ ಪಕ್ಷಗಳು ತಿರಸ್ಕರಿಸಿವೆ. ಹಾಗೆಯೇ ಕಾಂಗ್ರೆಸ್ ನಾಯಕ ಮತ್ತು ಸಂಸದ ರಾಹುಲ್ ಗಾಂಧಿ ಕೂಡ ಈ ಎಕ್ಸಟ್ ಪೋಲ್‌ಗಳನ್ನು "ಮೋದಿ ಮಾಧ್ಯಮ ಸಮೀಕ್ಷೆ" ಎಂದು ಕರೆದಿದ್ದಾರೆ. ಜೊತೆಗೆ ಇಂಡಿಯಾ ಬ್ಲಾಕ್ 295 ಲೋಕಸಭಾ ಸ್ಥಾನಗಳನ್ನು ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Jun 03, 2024, 6:13 pm IST

ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಸಜ್ಜಾಗುತ್ತಿದ್ದಂತೆ ಬಿಜೆಪಿ ಪಕ್ಷದ ಸಾಧನೆ ಮತ್ತು ಮತ ಎಣಿಕೆಗೆ ಸಿದ್ಧತೆ ಕುರಿತು ಚರ್ಚೆ ನಡೆಸಿದರು. ಬಿಜೆಪಿ ಮುಖ್ಯಸ್ಥ ಜೆ ಪಿ ನಡ್ಡಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ರಾಜಕೀಯ ಪರಿಸ್ಥಿತಿಯ ಬಗ್ಗೆ ಅವಲೋಕಿಸಲಾಗಿದೆ.
Jun 03, 2024, 5:45 pm IST

ಮತದಾನದಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಭಾರತ

ಲೋಕಸಭಾ ಚುನಾವಣೆ 2024ರ ಮತದಾನದಲ್ಲಿ ಭಾರತ ವಿಶ್ವ ದಾಖಲೆ ನಿರ್ಮಾಣ ಮಾಡಿದೆ. ದೇಶದಲ್ಲಿ ಒಟ್ಟು 64.2 ಕೋಟಿ ಮತದಾರರು ಮತ ಚಲಾಯಿಸಿದ್ದಾರೆ. ವಿಶ್ವದ ಯಾವುದೇ ದೇಶದಲ್ಲೂ ಇಷ್ಟೊಂದು ಮತದಾನ ಆಗಿಲ್ಲ ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.
Jun 03, 2024, 4:23 pm IST

ಸಮೀಕ್ಷೆಗಳು ಸುಳ್ಳಾಗಲಿವೆ: ಡಿ.ಕೆ.ಶಿವಕುಮಾರ್

ಕಳೆದ ವರ್ಷ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಚುನಾವಣೋತ್ತರ ಸಮೀಕ್ಷೆಗಳು ಸುಳ್ಳಾದಂತೆ, ಈ ಬಾರಿಯೂ ಸಮೀಕ್ಷೆಗಳು ಸುಳ್ಳಾಗಲಿವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದರು. ಈ ಕುರಿತು ಭಾನುವಾರ ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳ ಜೊತೆಗೆ ಮಾತನಾಡಿ, ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಭವಿಷ್ಯ ನುಡಿದಿದ್ದ ಸಮೀಕ್ಷೆ ಸುಳ್ಳಾಯಿತು. ಆ ಚುನಾವಣೆಯಲ್ಲಿ ನನ್ನ ಭವಿಷ್ಯವೇ ನಿಜವಾಗಿತ್ತು ಎಂದು ಹೇಳಿದರು.
Jun 03, 2024, 12:38 pm IST

ಮೋದಿ ಜೀ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ: ವಿಜಯೇಂದ್ರ

ಮತಗಟ್ಟೆ ಸಮೀಕ್ಷೆ ನಡೆಸಿದ ಎಲ್ಲಾ ಏಜೆನ್ಸಿಗಳಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರು ತ್ರಿವಿಕ್ರಮ ಸಾಧನೆಗೈಯುವುದು ಖಾತ್ರಿಯಾಗಿದೆ, ಎನ್.ಡಿ.ಎ ಮೈತ್ರಿಕೂಟ ಹ್ಯಾಟ್ರಿಕ್ ಗೆಲುವಿನೊಂದಿಗೆ ಮತ್ತೊಮ್ಮೆ ಮೋದಿ ಜೀ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ ಎನ್ನುವ ಸಮೀಕ್ಷಾ ವರದಿ ಬಹಿರಂಗವಾಗಿರುವುದು ಭಾರತವನ್ನು ಗೆಲ್ಲಿಸುವ ಸಂಕಲ್ಪ ತೊಟ್ಟಿದ್ದ ಮತದಾರ ಬಂಧುಗಳ ರಾಷ್ಟ್ರ ವಿಜಯವನ್ನು ಸಂಕೇತಿಸಿದೆ ಎಂದು ವಿಜಯೇಂದ್ರ ಹೇಳಿದರು.
Jun 03, 2024, 11:48 am IST

ಚುನಾವಣೋತ್ತರ ಸಮೀಕ್ಷೆ ತಿರಸ್ಕರಿಸಿದ ಇಂಡಿಯಾ ಒಕ್ಕೂಟ

2024ರ ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಭಾರೀ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದ ಚುನಾವಣೋತ್ತರ ಸಮೀಕ್ಷೆಗಳು ತಿಳಿಸಿದ್ದು, ಇಂಡಿಯಾ ಒಕ್ಕೂಟದ ಪಕ್ಷಗಳಾದ ಕಾಂಗ್ರೆಸ್‌, ಆಪ್‌ ಮತ್ತು ಸಮಾಜವಾದಿ ಪಕ್ಷಗಳು ಇದನ್ನು ತಿರಸ್ಕರಿಸಿವೆ.
Jun 01, 2024, 10:30 pm IST

ಟುಡೇಸ್ ಚಾಣಕ್ಯ ಸಮೀಕ್ಷೆ ಪ್ರಕಾರ ಎನ್‌ಡಿಎ 400 ± 15 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಹೇಳಿದೆ. ಇಂಡಿಯಾ ಒಕ್ಕೂಟ 107 ± 11 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದಿದೆ. ಇತರರು 36 ± 9 ಸ್ಥಾನಗಳನ್ನು ಪಡೆಯಬಹುದು ಎಂದು ಹೇಳಿದೆ.
Jun 01, 2024, 10:20 pm IST

ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಅಂತಿಮ ಫಲಿತಾಂಶದ ಪ್ರಕಾರ ಎನ್‌ಡಿಎ ಮೈತ್ರಿಕೂಟ 361-401, ಇಂಡಿಯಾ ಮೈತ್ರಿಕೂಟ 131-166, ಇತರರು 08-20 ಸೀಟುಗಳಲ್ಲಿ ಗೆಲುವು ಸಾಧಿಸಲಿದೆ.
Jun 01, 2024, 10:14 pm IST

ಪೋಲ್‌ ಆಫ್ ಪೋಲ್‌ಗಳ ಪ್ರಕಾರ ಈ ಬಾರಿ ಎನ್‌ಡಿಎ 350ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಸತತ ಮೂರನೇ ಬಾರಿ ಅಧಿಕಾರಕ್ಕೇರಲು ಸಜ್ಜಾಗಿದೆ. ಇಂಡಿಯಾ ಒಕ್ಕೂಟ 200ಕ್ಕಿಂತ ಕಡಿಮೆ ಸ್ಥಾನಗಳನ್ನು ಪಡೆಯಲಿದೆ ಎಂದು ಭವಿಷ್ಯ ನುಡಿದಿದೆ.
Jun 01, 2024, 9:04 pm IST

ಎನ್‌ಡಿಟಿವಿ ಪೋಲ್‌ ಆಫ್ ಪೋಲ್ ಪ್ರಕಾರ ಈ ಬಾರಿ ಎನ್‌ಡಿಎ ಸ್ಪಷ್ಟ ಬಹುಮತ ಪಡೆದು ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಎನ್‌ಡಿಎ 361 ಸ್ಥಾನಗಳನ್ನು ಪಡೆದರೆ, ಕಾಂಗ್ರೆಸ್ 145 ಸ್ಥಾನ ಮತ್ತು ಇತರರು 37 ಸ್ಥಾನಗಳನ್ನು ಪಡೆಯಲಿದ್ದಾರೆ.
Jun 01, 2024, 8:45 pm IST

ಚುನಾವಣೋತ್ತರ ಸಮೀಕ್ಷೆ: ಎನ್​​ಡಿಎ ಒಕ್ಕೂಟಕ್ಕೆ ಮೇಲುಗೈ

ಚುನಾವಣೋತ್ತರ ಸಮೀಕ್ಷೆ: ಎನ್​​ಡಿಎ ಒಕ್ಕೂಟಕ್ಕೆ ಮೇಲುಗೈ
ಲೋಕಸಭೆ ಚುನಾವಣೆಯ 2024ರ ಚುನಾವಣೋತ್ತರ ಸಮೀಕ್ಷೆಗಳು ಬಹಿರಂಗವಾಗಿದ್ದು, ಬಹುತೇಕ ಎಲ್ಲ ಸಮೀಕ್ಷೆಗಳೂ ಕರ್ನಾಟಕದಲ್ಲಿ ಬಿಜೆಪಿ ಹಾಗೂ ದೇಶದಲ್ಲಿ ಎನ್​​ಡಿಎ ಒಕ್ಕೂಟ ಹೆಚ್ಚಿನ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದಿವೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್​​ಡಿಎ ಒಕ್ಕೂಟ ಗೆಲುವು ಸಾಧಿಸಿ ದೇಶದಲ್ಲಿ ಮತ್ತೆ ಅಧಿಕಾರ ನಡೆಸಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ತಿಳಿಸಿವೆ.
Jun 01, 2024, 8:37 pm IST

ಜನ್‌ ಕಿ ಬಾತ್‌ನಲ್ಲಿ ಎನ್‌ಡಿಎಗೆ ಭರ್ಜರಿ ಗೆಲುವು

2024ರ ಲೋಕಸಭಾ ಚುನಾವಣೆಯ ಜನ್ ಕಿ ಬಾತ್ ಚುನಾವಣೋತ್ತರ ಸಮೀಕ್ಷೆ ಪ್ರಕಾರ ಎನ್‌ಡಿಎ 377, ಐಎನ್‌ಡಿಐಎ 151 ಸೀಟುಗಳನ್ನು ಪಡೆಯಲಿವೆ. ಉಳಿದ 15 ಸೀಟುಗಳು ಇತರೆ ಪಕ್ಷಗಳ ಪಾಲಾಗಲಿದೆ ಎಂದು ವರದಿ ಮಾಡಿದೆ.
Jun 01, 2024, 8:25 pm IST

ದೆಹಲಿಯಲ್ಲಿ ಬಿಜೆಪಿ ಕೈ ತಪ್ಪಿದ ಒಂದು ಸ್ಥಾನ

ಚಾಣಕ್ಯ ಎಕ್ಸಿಟ್ ಪೋಲ್ ಪ್ರಕಾರ ದೆಹಲಿಯ ಏಳರಲ್ಲಿ 6 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ಮೈತ್ರಿಗೆ ಒಂದು ಸ್ಥಾನ ಸಿಗಬಹುದು. ಕಳೆದ ಎರಡು ಚುನಾವಣೆಗಳಲ್ಲಿ ಬಿಜೆಪಿ ದೆಹಲಿಯ ಎಲ್ಲಾ ಏಳು ಲೋಕಸಭಾ ಸ್ಥಾನಗಳನ್ನು ಗೆದ್ದಿದ್ದು, ಆದರೆ ಈ ಬಾರಿ ಅದು ಒಂದು ಸ್ಥಾನವನ್ನು ಕಳೆದುಕೊಳ್ಳಬಹುದು ಎಂದು ಅಂದಾಜಿಸಲಾಗಿದೆ.
Jun 01, 2024, 8:08 pm IST

ಟುಡೇಸ್ ಚಾಣಕ್ಯ ಚುನಾವಣೋತ್ತರ ಸಮೀಕ್ಷೆ

ಟುಡೇಸ್ ಚಾಣಕ್ಯ ಚುನಾವಣೋತ್ತರ ಸಮೀಕ್ಷೆ
ಟುಡೇಸ್ ಚಾಣಕ್ಯ ಚುನಾವಣೋತ್ತರ ಸಮೀಕ್ಷೆ ವರದಿ ಕರ್ನಾಟಕ ಕಾಂಗ್ರೆಸ್‌ಗೆ ಆಘಾತ ನೀಡಿದ್ದು, ರಾಜ್ಯದಲ್ಲಿ 24ಕ್ಕೂ ಹೆಚ್ಚು ಸ್ಥಾನಗಳಲ್ಲಿ ಎನ್‌ಡಿಎ ಗೆಲುವು ಸಾಧಿಸಲಿದ್ದು, ಕಾಂಗ್ರೆಸ್ 4ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ ಎಂದು ಹೇಳಿದೆ
Jun 01, 2024, 8:00 pm IST

ರಿಪಬ್ಲಿಕ್ P-MARQ ಎಕ್ಸಿಟ್ ಪೋಲ್

ರಿಪಬ್ಲಿಕ್ ಟಿವಿಯು P-MARQ ಜೊತೆ ನಡೆಸಿದ ಎಕ್ಸಿಟ್ ಪೋಲ್ 2024 ಪ್ರಕಾರ, ಕರ್ನಾಟಕದಲ್ಲಿ ಎನ್‌ಡಿಎ ಒಕ್ಕೂಟಕ್ಕೆ 22 ಸ್ಥಾನ ಸಿಕ್ಕರೆ, ಇಂಡಿಯಾ ಮೈತ್ರಿಕೂಟಕ್ಕೆ 06 ಸೀಟುಗಳಿಗೆ ಸಿಗಲಿದೆ. ಇಲ್ಲಿ ಸಹ ಇತರ ಪಕ್ಷಗಳಿಗೆ ಯಾವುದೇ ಸ್ಥಾನ ಸಿಕ್ಕಿಲ್ಲ ಎಂದು ಸಮೀಕ್ಷೆಯ ಅಂಶಗಳು ಮಾಹಿತಿ ನೀಡಿವೆ.
Jun 01, 2024, 7:46 pm IST

ಕರ್ನಾಟಕ: ಪಬ್ಲಿಕ್ ಟಿವಿ-ಮ್ಯಾಟ್ರಿಜ್ ಎಕ್ಸಿಟ್ ಪೋಲ್

ಪಬ್ಲಿಕ್ ಟಿವಿ ಮತ್ತು ಮ್ಯಾಟ್ರಿಜ್ ಎಕ್ಸಿಟ್ ಪೋಲ್ 2024 ಪ್ರಕಾರ, ಕರ್ನಾಟಕದ ಒಟ್ಟು 28 ಸ್ಥಾನಗಳಲ್ಲಿ ಎನ್‌ಡಿಎ 21 ಸ್ಥಾನಗಳನ್ನು ಪಡೆಯಲಿದೆ. ಇಂಡಿಯಾ ಮೈತ್ರಿಕೂಟ 07 ಸ್ಥಾನಗಳನ್ನು ಪಡೆಯಲಿದೆ. ಇತರ ಪಕ್ಷಗಳಿಗೆ ಯಾವೊಂದು ಸ್ಥಾನ ಇಲ್ಲ ಎಂದು ಸಮೀಕ್ಷೆ ಮಾಹಿತಿ ನೀಡಿದೆ.
Jun 01, 2024, 7:42 pm IST

ನ್ಯೂಸ್18 ಪೋಲ್ ಹಬ್: ಫಲಿಸಿದ ಬಿಜೆಪಿ ತಂತ್ರ

ನ್ಯೂಸ್18 ಪೋಲ್ ಹಬ್: ಫಲಿಸಿದ ಬಿಜೆಪಿ ತಂತ್ರ
ಈ ಬಾರಿ ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ಗೆಲ್ಲಲು ಭರ್ಜರಿ ರಣತಂತ್ರ ರೂಪಿಸಿದ್ದ ಬಿಜೆಪಿ ವರಿಷ್ಠರು, ಇದಕ್ಕಾಗಿ ಬೇಕಿದ್ದ ಎಲ್ಲಾ ರೀತಿಯ ತಯಾರಿಗಳನ್ನು ಕೂಡ ನಡೆಸಿದ್ರು. ಬಿಜೆಪಿ ಹೈಕಮಾಂಡ್ ಮತ್ತು ಬಿ.ವೈ. ವಿಜಯೇಂದ್ರ ಅವರ ತಂತ್ರಗಾರಿಕೆ ಈಗ ಫಲ ನೀಡಿ ಬಿಜೆಪಿ ಪಕ್ಷದ ಪ್ರಚಂಡ ಗೆಲುವು ಪಕ್ಕಾ ಆಗಿದೆ. ಕರ್ನಾಟಕದಲ್ಲಿ ಬಿಜೆಪಿ & ಜೆಡಿಎಸ್ 23 ರಿಂದ 26 ಸ್ಥಾನ ಗೆಲ್ಲಬಹುದು ಎನ್ನಲಾಗಿದ್ದು, ಅದೇ ರೀತಿ ಕಾಂಗ್ರೆಸ್ ಕರ್ನಾಟಕದಲ್ಲಿ 3 ರಿಂದ 7 ಸ್ಥಾನ ಗೆಲ್ಲಬಹುದು ಎನ್ನುತ್ತಿದೆ ‘ನ್ಯೂಸ್18 ಪೋಲ್ ಹಬ್’ ಸಮೀಕ್ಷೆ.
Jun 01, 2024, 7:38 pm IST

ಎಬಿಪಿ ಸಿ-ವೋಟರ್ ಎಕ್ಸಿಟ್ ಪೋಲ್ ಫಲಿತಾಂಶ

ಎಬಿಪಿ ಸಿ-ವೋಟರ್ ಎಕ್ಸಿಟ್ ಪೋಲ್ ಫಲಿತಾಂಶ
ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ 3 ರಿಂದ 5 ಸ್ಥಾನಗಳನ್ನು, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ ಎನ್‌ಡಿಎ 23 ರಿಂದ 25 ಸ್ಥಾನಗಳನ್ನು ಪಡೆದುಕೊಳ್ಳಬಹುದು. ಕಾಂಗ್ರೆಸ್ 41.8% ಮತ ಹಂಚಿಕೆಯನ್ನು ಬಿಜೆಪಿ 54.2% ಮತಗಳನ್ನು ಪಡೆಯಬಹುದು ಎಂದು ಎಬಿಪಿ ಸಿ-ವೋಟರ್ ಎಕ್ಸಿಟ್ ಪೋಲ್‌ನಲ್ಲಿ ಅಂದಾಜಿಸಲಾಗಿದೆ.
Jun 01, 2024, 7:36 pm IST

ಉತ್ತರ ಭಾರತದಲ್ಲಿ ಬಿಜೆಪಿ ಕ್ಲೀನ್‌ ಸ್ವೀಪ್

ಟಿವಿ9 ಸಮೀಕ್ಷೆಯ ಪ್ರಕಾರ ಗುಜರಾತ್, ಮಧ್ಯಪ್ರದೇಶ, ಛತ್ತೀಸ್‌ಗಢ, ಉತ್ತರಾಖಂಡ, ಹಾಗೂ ದೆಹಲಿಯಲ್ಲಿ ಬಿಜೆಪಿ ಕ್ಲೀನ್‌ ಸ್ವೀಪ್ ಮಾಡುವ ಸಾಧ್ಯತೆ ಇದೆ.
Jun 01, 2024, 7:29 pm IST

ನ್ಯೂಸ್‌ಎಕ್ಸ್‌ ಚುನಾವಣೋತ್ತರ ಸಮೀಕ್ಷೆ

ನ್ಯೂಸ್‌ಎಕ್ಸ್‌ ಚುನಾವಣೋತ್ತರ ಸಮೀಕ್ಷೆ
2024ರ ಲೋಕಸಭಾ ಚುನಾವಣೆಯ ನ್ಯೂಸ್‌ಎಕ್ಸ್‌ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಎನ್‌ಡಿಎಗೆ 371 ಸ್ಥಾನಗಳಲ್ಲಿ, ಇಂಡಿಯಾ ಮೈತ್ರಿಕೂಟ 125 ಸ್ಥಾನಗಳಲ್ಲಿ ಹಾಗೂ ಇತರೆ ಪಕ್ಷಗಳು 47 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ವರದಿ ನೀಡಿದೆ.
Jun 01, 2024, 7:24 pm IST

ಟಿವಿ 9 ಚುನಾವಣೋತ್ತರ ಸಮೀಕ್ಷೆ: ರಾಜಸ್ಥಾನ, ಆಂಧ್ರಪ್ರದೇಶದಲ್ಲಿ ಎನ್‌ಡಿಎಗೆ ಮೇಲುಗೈ

ಟಿವಿ 9 ಚುನಾವಣೋತ್ತರ ಸಮೀಕ್ಷೆ: ರಾಜಸ್ಥಾನ, ಆಂಧ್ರಪ್ರದೇಶದಲ್ಲಿ ಎನ್‌ಡಿಎಗೆ ಮೇಲುಗೈ
ಟಿವಿ 9 2024ರ ಲೋಕಸಭಾ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ರಾಜಸ್ಥಾನದಲ್ಲಿ ಎನ್‌ಡಿಎ 19 ಕ್ಷೇತ್ರಗಳಲ್ಲಿ, ಇಂಡಿಯಾ ಮೈತ್ರಿಕೂಟ 05 ಕ್ಷೇತ್ರಗಳಲ್ಲಿ ಹಾಗೂ ಇತರರೆ ಪಕ್ಷಗಳು 01 ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದೆ ಎಂದು ವರದಿ ನೀಡಿದೆ. ಹಾಗೂ ಆಂಧ್ರಪ್ರದೇಶದಲ್ಲಿ ಎನ್‌ಡಿಎ 12 ಹಾಗೂ ವೈಎಸ್‌ಆರ್‌ಸಿಪಿ 13 ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದೆ ಎಂದು ಟಿವಿ 9 ಚುನಾವಣೋತ್ತರ ಸಮೀಕ್ಷೆ ವರದಿ ನೀಡಿದೆ.
Jun 01, 2024, 7:12 pm IST

ಟಿವಿ 9 ಚುನಾವಣೋತ್ತರ ಸಮೀಕ್ಷೆ: ದೆಹಲಿ, ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಮೇಲುಗೈ

ಟಿವಿ 9 ಚುನಾವಣೋತ್ತರ ಸಮೀಕ್ಷೆ: ದೆಹಲಿ, ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಮೇಲುಗೈ
ದೆಹಲಿಯಲ್ಲಿ ಬಿಜೆಪಿ 07 ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದೆ. ಹಾಗೂ ಮಧ್ಯಪ್ರದೇಶದಲ್ಲಿ ಬಿಜೆಪಿ 29 ಕ್ಷೇತ್ರಗಳಲ್ಲಿ 29 ಕ್ಷೇತ್ರದಲ್ಲಿಯೂ ಗೆಲುವು ಸಾಧಿಸಲಿದೆ ಎಂದು ಟಿವಿ 9 ಲೋಕಸಭಾ ಚುನಾವಣೆಯ ಚುನಾವಣೋತ್ತರ ಸಮೀಕ್ಷೆಯಲ್ಲಿ ತಿಳಿಸಿದೆ.
Jun 01, 2024, 7:03 pm IST

ರಿಪಬ್ಲಿಕ್ ಟಿವಿ ಚುನಾವಣೋತ್ತರ ಸಮೀಕ್ಷೆ: ಎನ್‌ಡಿಎ ಒಕ್ಕೂಟದತ್ತ ಜನರ ಒಲವು

ರಿಪಬ್ಲಿಕ್ ಟಿವಿಯ P-MARQ ಜೊತೆ ನಡೆಸಿದ ಎಕ್ಸಿಟ್ ಪೋಲ್ 2024 ಪ್ರಕಾರ, ದೇಶದಲ್ಲಿ ಎನ್‌ಡಿಎ ಪಕ್ಷ 359 ಸ್ಥಾನ ಗೆದ್ದರು, ಇಂಡಿಯಾ ಮೈತ್ರಿಕೂಟವು 154 ಸೀಟು ಪಡೆದುಕೊಳ್ಳುವ ಸಾಧ್ಯತೆ ಇದೆ. ಇನ್ನೂ ಇತರರೆ ಪಕ್ಷಗಳು 30 ಸೀಟುಗಳನ್ನು ಪಡೆದುಕೊಳ್ಳಲಿದೆ ಎಂದು ಸಮೀಕ್ಷೆ ಮಾಹಿತಿ ನೀಡಿದೆ.
Jun 01, 2024, 7:00 pm IST

ಪಬ್ಲಿಕ್ ಟಿವಿ ಎಕ್ಸಿಟ್ ಪೋಲ್: ಎನ್‌ಡಿಎ ಒಕ್ಕೂಟಕ್ಕೆ ಅತಿಹೆಚ್ಚು ಸ್ಥಾನ

ಪಬ್ಲಿಕ್ ಟಿವಿ ಮತ್ತು ಮ್ಯಾಟ್ರಿಜ್ ಎಕ್ಸಿಟ್ ಪೋಲ್ 2024 ಪ್ರಕಾರ, ದೇಶದ ಒಟ್ಟು ಸ್ಥಾನಗಳಲ್ಲಿ ಎನ್‌ಡಿಎ 353-368 ಸ್ಥಾನಗಳನ್ನು ಪಡೆಯಲಿದೆ. ಇಂಡಿಯಾ ಮೈತ್ರಿಕೂಟ 118-133 ಸ್ಥಾನಗಳನ್ನು ಪಡೆಯಲಿದ್ದು, ಇತರರು 43-48 ಸ್ಥಾನಗಳನ್ನು ಪಡೆಯುತ್ತಾರೆ ಎಂದು ಸಮೀಕ್ಷೆ ಮಾಹಿತಿ ನೀಡಿದೆ.
Jun 01, 2024, 6:56 pm IST

TV5 ತೆಲುಗು ಸಮೀಕ್ಷೆ: ಎನ್‌ಡಿಎಗೆ ಒಕ್ಕೂಟಕ್ಕೆ 359 ಸ್ಥಾನ

TV5 ತೆಲುಗು ಸಮೀಕ್ಷೆ: ಎನ್‌ಡಿಎಗೆ ಒಕ್ಕೂಟಕ್ಕೆ 359 ಸ್ಥಾನ
2024ರ ಲೋಕಸಭಾ ಚುನಾವಣೆಯ ಚುನಾವಣೋತ್ತರ ಸಮೀಕ್ಷೆಗಳು ಹೊರಬೀಳುತ್ತಿದ್ದು, TV5 ತೆಲುಗು ನಡೆಸಿದ ಸಮೀಕ್ಷೆ ಪ್ರಕಾರ ಎನ್‌ಡಿಎ ಒಕ್ಕೂಟ 359 ಸ್ಥಾನಗಳಲ್ಲಿ, ಇಂಡಿಯಾ ಒಕ್ಕೂಟ 154 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಇತರ ಪಕ್ಷಗಳು ಮತ್ತು ಪಕ್ಷೇತರ 30 ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ ಎಂದು ವರದಿ ನೀಡಿದೆ.
Jun 01, 2024, 6:50 pm IST

ಲೋಕ್‌ ಪೋಲ್ ಸಮೀಕ್ಷೆ: ಎನ್‌ಡಿಎಗೆ ಒಕ್ಕೂಟಕ್ಕೆ 325 ಸ್ಥಾನ

ಲೋಕ್‌ ಪೋಲ್ ಸಮೀಕ್ಷೆ: ಎನ್‌ಡಿಎಗೆ ಒಕ್ಕೂಟಕ್ಕೆ 325 ಸ್ಥಾನ
ಲೋಕ್‌ ಪೋಲ್ ಚುನಾವಣೋತ್ತರ ಸಮೀಕ್ಷೆ ವರದಿ ಪ್ರಕಾರ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ 325 ರಿಂದ 335 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು, ಇಂಡಿಯಾ ಒಕ್ಕೂಟ 155 ರಿಂದ 165 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಇತರ ಪಕ್ಷಗಳು ಮತ್ತು ಪಕ್ಷೇತರ 48-55 ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ.
Jun 01, 2024, 6:48 pm IST

India Today Axis My India ಸಮೀಕ್ಷೆ: ಕರ್ನಾಟಕದಲ್ಲಿ ಬಿಜೆಪಿಗೆ ಭರ್ಜರಿ ಜಯ

India Today Axis My India ಸಮೀಕ್ಷೆ: ಕರ್ನಾಟಕದಲ್ಲಿ ಬಿಜೆಪಿಗೆ ಭರ್ಜರಿ ಜಯ
India Today Axis My India ಚುನಾವಣೋತ್ತರ ಸಮೀಕ್ಷೆ ಪ್ರಕಾರ ಕರ್ನಾಟಕದ 28 ಸೀಟುಗಳ ಪೈಕಿ ಬಿಜೆಪಿ 20-22 ಕ್ಷೇತ್ರಗಳಲ್ಲಿ, ಜೆಡಿಎಸ್ 3 ಕ್ಷೇತ್ರಗಳಲ್ಲಿ ಹಾಗೂ ಕಾಂಗ್ರೆಸ್‌ 3-5 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ವರದಿ ನೀಡಿದೆ.
Jun 01, 2024, 6:37 pm IST

Tv 9 ಪೋಲ್‌ಸ್ಟಾರ್ಟ್‌ ಸಮೀಕ್ಷೆ: ಕರ್ನಾಟಕದಲ್ಲಿ ಬಿಜೆಪಿಗೆ 18 ಸ್ಥಾನ

2024ರ ಲೋಕಸಭಾ ಚುನಾವಣೆಯ ಚುನಾವಣೋತ್ತರ ಸಮೀಕ್ಷೆಗಳು ಹೊರಬೀಳುತ್ತಿದ್ದು, Tv 9 ಪೋಲ್‌ಸ್ಟಾರ್ಟ್‌ ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿ 18, ಜೆಡಿಎಸ್‌ 2 ಹಾಗೂ ಕಾಂಗ್ರೆಸ್‌ 8 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದೆ ಎಂದು ತಿಳಿಸಿದೆ.
Jun 01, 2024, 6:21 pm IST

ಅಂತಿಮ ಹಂತದ ಚುನಾವಣೆ: ಶೇಕಡಾ 58.34ರಷ್ಟು ಮತದಾನ

ಲೋಕಸಭಾ ಚುನಾವಣೆಯ ಅಂತಿಮ ಹಂತದಲ್ಲಿ ಶೇಕಡಾ 58.34ರಷ್ಟು ಮತದಾನವಾಗಿದೆ. ಬಿಹಾರ 48.86%, ಚಂಡೀಗಢ 62.80%, ಒಡಿಶಾ 62.46%, ಹಿಮಾಚಲ ಪ್ರದೇಶ 66.56%, ಜಾರ್ಖಂಡ್ 67.95%, ಪಂಜಾಬ್ 55.20%, ಯುಪಿಯಲ್ಲಿ ಶೇ.54ರಷ್ಟು ಮತದಾನವಾಗಿದೆ. ಹಾಗೂ ಪಶ್ಚಿಮ ಬಂಗಾಳದಲ್ಲಿ ಶೇಕಡಾ 69.89ರಷ್ಟು ಮತದಾನವಾಗಿರುವ ಬಗ್ಗೆ ವರದಿಯಾಗಿದೆ.
Jun 01, 2024, 6:09 pm IST

ಸುದೀರ್ಘ ಸಮರ ಇಂದು ಅಂತ್ಯ

2024ರ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಏಪ್ರಿಲ್ 19ರಂದು ನಡೆದಿತ್ತು. ಇದರ ನಂತರ ಏಪ್ರಿಲ್ 26, ಮೇ 7, ಮೇ 13, ಮೇ 20, ಮೇ 25ರಂದು ಹಾಗೂ ಜೂನ್ 1ರಂದು ಕ್ರಮವಾಗಿ ಉಳಿದ ಹಂತಗಳಲ್ಲಿ ಚುನಾವಣೆ ನಡೆದಿತ್ತು. ಏಳು ಹಂತಗಳ ಲೋಕಸಭೆ ಚುನಾವಣೆಯ ಸುದೀರ್ಘ ಸಮರ ಇಂದು ಅಂತ್ಯಗೊಂಡಿದೆ.
READ MORE

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+