ಚಿತ್ರಗಳಲ್ಲಿ: ಹೇಮಾಮಾಲಿನಿ ಇದ್ದ ವೇದಿಕೆ ಕುಸಿದ ಕ್ಷಣ
ಬೆಂಗಳೂರು, ಏ.20: ಲೋಕಸಭೆ ಚುನಾವಣೆಗಾಗಿ ವಿವಿಧ ಪಕ್ಷಗಳು ರಂಗು ರಂಗಿನ ಪ್ರಚಾರ ಕಾರ್ಯದಲ್ಲಿ ನಿರತವಾಗಿವೆ. ಕರ್ನಾಟಕ ಸೇರಿ 121 ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ಯಶಸ್ವಿಯಾಗಿದೆ. ಒಟ್ಟು 9 ಹಂತದ ಚುನಾವಣಾ ಪ್ರಕ್ರಿಯೆ ಇತರೆ ರಾಜ್ಯಗಳಲ್ಲಿ ಜಾರಿಯಲ್ಲಿದೆ. ಬಿಜೆಪಿ ತನ್ನ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ವಿರುದ್ಧ ವಾರಣಾಸಿಯಲ್ಲಿ ಎಎಪಿ ಅಭ್ಯರ್ಥಿ ಅರವಿಂದ್ ಕೇಜ್ರಿವಾಲ್ ಬಿರುಸಿನ ಪ್ರಚಾರ ನಡೆಸಿದ್ದಾರೆ.
ಭಾರತೀಯ ಜನತಾ ಪಕ್ಷದ ಮಥುರಾ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮತ್ತು ಬಾಲಿವುಡ್ ನಟಿ ಹೇಮಾಮಾಲಿನಿ ಅವರು ಚುನಾವಣಾ ಪ್ರಚಾರ ಸಭೆಯಲ್ಲಿ ಭಾಷಣ ಮಾಡುತ್ತಿದ್ದಾಗ ವೇದಿಕೆಯ ಒಂದು ಭಾಗ ಕುಸಿದ ಘಟನೆ ಜರುಗಿದೆ.
ಹೇಮಾ ಅವರು ರೀಫೈನರಿ ನಗರದಲ್ಲಿ ನಡೆದ ಈ ಘಟನೆಯಲ್ಲಿ ಗಾಯಗೊಳ್ಳದೆ ಪಾರಾಗಿದ್ದಾರೆ. ಪ್ರತ್ಯಕ್ಷ ದರ್ಶಿಗಳ ಪ್ರಕಾರ ನಿಗದಿತ ಸಭೆಗೆ ಹೇಮಾ ಅವರು ತಡವಾಗಿ ಆಗಮಿಸಿದರು. ಆ ವೇಳೆಗೆ ಅಪಾರ ಪ್ರಮಾಣದ ಜನರು ತಮ್ಮ ನೆಚ್ಚಿನ ನಟಿಯ ದರ್ಶನಕ್ಕಾಗಿ ಸಾಲುಗಟ್ಟಿ ನಿಂತಿದ್ದರು. ನೋಡನೋಡುತ್ತಿದ್ದಂತೆ ನೆರೆದಿದ್ದ ಜನರ ಗುಂಪು ಹೆಚ್ಚಾಗುತ್ತಲೇ ಇತ್ತು. ಇನ್ನಷ್ಟು ವಿವರ ಮುಂದೆ ಓದಿ...
ವಾರಣಾಸಿ, ಮಧ್ಯಪ್ರದೇಶ, ರಾಜಸ್ಥಾನ, ಜಾರ್ಖಂಡ್, ತಮಿಳುನಾಡು ಸೇರಿದಂತೆ ದೇಶದ ವಿವಿಧೆಡೆ ವಿವಿಧ ರೀತಿಯಲ್ಲಿ ನಡೆದಿರುವ ಚುನಾವಣಾ ಪ್ರಚಾರದ ಚಿತ್ರಗಳನ್ನು ಇಲ್ಲಿ ತಪ್ಪದೆ ನೋಡಿ..

ಮಥುರಾದಲ್ಲಿ ಹೇಮಮಾಲಿನಿ ಪ್ರಚಾರ
ಹೇಮಾ ಅವರು ಆಗಮಿಸಿ ಭಾಷಣ ಆರಂಭಿಸುತ್ತಿದ್ದಂತೆಯೇ ಅನೇಕ ಅಭಿಮಾನಿಗಳು ಹೇಮಾ ಅವರನ್ನು ಸಮೀಪದಿಂದ ನೋಡಲು ವೇದಿಕೆಯತ್ತ ನುಗ್ಗಿದಾಗ ಉಂಟಾದ ನೂಕು ನುಗ್ಗಲಿನಿಂದಾಗಿ ವೇದಿಕೆಯ ಒಂದು ಭಾಗ ಕುಸಿಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಹೀಗಿದ್ದರೂ ವಿಚಲಿತರಾಗದ ಹೇಮಾಮಾಲಿನಿ ಭಾಷಣ ಪೂರೈಸಿಯೇ ವೇದಿಕೆಯಿಂದ ನಿರ್ಗಮಿಸಿದರು ಎಂದು ಪೊಲೀಸರು ವಿವರಿಸಿದ್ದಾರೆ.

ಹೇಮಮಾಲಿನಿ ಪರ ಪುತ್ರಿಯರ ಪ್ರಚಾರ
ಮಥುರಾದಲ್ಲಿ ಬಿಜೆಪಿ ಅಭ್ಯರ್ಥಿ ಹೇಮಮಾಲಿನಿ ಪರ ಪುತ್ರಿಯರಾದ ಅಹನಾ, ಈಶಾ ಡಿಯೋಲ್ ಅವರು ತಮ್ಮ ಪತಿಗಳ ಜತೆ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡರು.

ವೈಎಸ್ಸಾರ್ ಪಕ್ಷದ ಪ್ರಚಾರ ಕಾರ್ಯದಲ್ಲಿ ಜಗನ್
ವೈಎಸ್ಸಾರ್ ಪಕ್ಷದ ಪ್ರಚಾರ ಕಾರ್ಯದಲ್ಲಿ ಜಗನ್ ನಿರತರಾಗಿದ್ದು, ಆಂಧ್ರಪ್ರದೇಶದಲ್ಲಿ ವಿಧಾನಸಭೆ ಹಾಗೂ ಲೋಕಸಭೆ ಎರಡರಲ್ಲೂ ಜಯಭೇರಿ ಬಾರಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಸ್ಸಾಂನಲ್ಲಿ ಮೋದಿ ಧೋಲ್ ಬಾಜಾ
ಅಸ್ಸಾಂನಲ್ಲಿ ನಡೆದ ಚುನಾವಣಾ ಪ್ರಚಾರ ಕಾರ್ಯದ ಸಂದರ್ಭದಲ್ಲಿ ಅಸ್ಸಾಮಿ ಧೋಲ್ ಬಾರಿಸಿ ನರೇಂದ್ರ ಮೋದಿ

ತಮಿಳುನಾಡಿನಲ್ಲಿ ರಾಜನಾಥ್ ಸಿಂಗ್ ಪ್ರಚಾರ
ತಮಿಳುನಾಡಿನಲ್ಲಿ ರಾಜನಾಥ್ ಸಿಂಗ್ ಪ್ರಚಾರ ಕಾರ್ಯಕ್ಕೆ ಹೆಚ್ಚಿನ ಮಟ್ಟದ ಪ್ರತಿಕ್ರಿಯೆ ವ್ಯಕ್ತವಾಗುತ್ತಿಲ್ಲ ಎಂಬ ಸುದ್ದಿಯಿದ್ದರೂ ಬಿಜೆಪಿ ಅಧ್ಯಕ್ಷ ಎನ್ ಡಿಎ ಮಿತ್ರಪಕ್ಷಗಳ ಪರ ಭರ್ಜರಿಯಾಗಿ ಪ್ರಚಾರ ನಡೆಸಿದ್ದಾರೆ

ಸ್ಟಾರ್ ನಟಿ ಸ್ಟಾರ್ ಅಮ್ಮ ಜತೆ ದೀದಿ
ಬೆಂಗಾಳಿ ನಟಿ ಮೂನ್ ಮೂನ್ ಸೇನ್ ಅವರು ಪುತ್ರಿಯರ ಜತೆ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಪರ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ.

ನನ್ನ ಟೋಪಿ ಎಗರಿಸಿದ್ದು ಯಾರು
ಇಂದೋರ್ ನಲ್ಲಿ ಸುದ್ದಿಗೋಷ್ಥಿ ನಡೆಸಿದ್ದ ಎಎಪಿ ಮುಖಂಡ ಪ್ರಶಾಂತ್ ಭೂಷಣ್ ಅವರ ಟೋಪಿಯನ್ನು ವ್ಯಕ್ತಿಯೊಬ್ಬ ಎತ್ತಿದ ಘಟನೆ ನಡೆದಿದೆ.

ಆಖಿಲೇಶ್ ಯಾದವ್ ಸರಣಿ ಸಮಾವೇಶ
ಉತ್ತರಪ್ರದೇಶ ಸಿಎಂ ಆಖಿಲೇಶ್ ಯಾದವ್ ಅವರು ಸರಣಿ ಸಮಾವೇಶಗಳನ್ನು ಹಮ್ಮಿಕೊಂಡಿದ್ದು, ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

ಅಮೇಥಿಯಲ್ಲಿ ಕುಮಾರ್ ವಿಶ್ವಾಸ್ ಗೆ ಬಲ
ಅಮೇಥಿ: ಪ್ರಿಯಾಂಕಾ ಗಾಂಧಿ ಹಾಗೂ ರಾಬರ್ಟ್ ವಧ್ರಾ ವಿರುದ್ಧ ಕೊಲೆ ಬೆದರಿಕೆ ಆರೋಪ ಹೊರೆಸಿರುವ ಎಎಪಿ ಅಭ್ಯರ್ಥಿ ಕುಮಾರ್ ವಿಶ್ವಾಸ್ ಪರ ಅರವಿಂದ್ ಕೇಜ್ರಿವಾಲ್ ಅವರು ಪ್ರಚಾರ ನಡೆಸಿದ್ದಾರೆ.

ಪ್ರಚಾರ ಕಾರ್ಯ ಮೊಟಕುಗೊಳಿಸಿದ ಸೋನಿಯಾ
ಅನಾರೋಗ್ಯದ ಕಾರಣ ಭಾನುವಾರ ಮಹಾರಾಷ್ಟ್ರದಲ್ಲಿ ಆಯೋಜನೆಗೊಂಡಿದ್ದ ಚುನಾವಣಾ ಪ್ರಚಾರ ಕಾರ್ಯವನ್ನು ಮೊಟಕುಗೊಳಿಸಿದ ಸೋನಿಯಾ ಗಾಂಧಿ ಅವರು ದೆಹಲಿಗೆ ತೆರಳಿದರು.

ಮಥುರಾದಲ್ಲಿ ಮತ್ತೊಬ್ಬ ಮೋದಿ ಪ್ರತ್ಯಕ್ಷ
ಮಥುರಾದಲ್ಲಿ ನರೇಂದ್ರ ಮೋದಿ ಅವರಂತೆ ವೇಷ ಭೂಷಣವುಳ್ಳ ವ್ಯಕ್ತಿ ಪ್ರತ್ಯಕ್ಷನಾಗಿ ಹೇಮಮಾಲಿನಿ ಅವರ ಪರ ಮತಯಾಚಿಸಿದ ಪ್ರಸಂಗ ನಡೆಯಿತು.

ಮುಂಬೈನಲ್ಲಿ ರಾಖಿ ಸಾವಂತ್ ಭರ್ಜರಿ ಪ್ರಚಾರ
ಮುಂಬೈನಲ್ಲಿ ನಟಿ ರಾಖಿ ಸಾವಂತ್ ಭರ್ಜರಿ ಪ್ರಚಾರ ನಡೆಸಿದ್ದಾರೆ.












Click it and Unblock the Notifications