Live : ಉತ್ತರಪ್ರದೇಶ, ಬಿಹಾರದಲ್ಲಿ ಉಪ ಚುನಾವಣೆ ಮತದಾನ

ಲಕ್ನೋ, ಮಾರ್ಚ್ 11: ಇಲ್ಲಿನ ಫುಲ್ ಪುರ್ ಹಾಗೂ ಗೋರಖಪುರ್ ಉಪಚುನಾವಣೆ ನಡೆದಿದ್ದು, ಮತದಾನ ಜಾರಿಯಲ್ಲಿದೆ. ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಬಿಜೆಪಿಗೆ ಸೆಡ್ಡು ಹೊಡೆಯಲು ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜವಾದಿ ಪಕ್ಷಗಳು ಜಂಟಿಯಾಗಿ ಸಮರ ಸಾರಿವೆ. ಜತೆಗೆ ಬಿಹಾರದ ಅರಾರಿಯಾ ಕ್ಷೇತದಲ್ಲೂ ಮತದಾನ ಸಾಗಿದೆ.

ಉತ್ತರಪ್ರದೇಶದ ಮಾಜಿ ಸಿಎಂಗಳಾದ ಅಖಿಲೇಶ್ ಯಾದವ್ ಹಾಗೂ ಮಾಯಾವತಿ ಇಬ್ಬರು ಹಾಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ನಡೆಸಿರುವ ಮೊದಲ ಯುದ್ಧ ಇದಾಗಿದೆ. ಮಾರ್ಚ್ 14ರಂದು ಎರಡು ಕ್ಷೇತ್ರಗಳ ಫಲಿತಾಂಶ ಹೊರ ಬರಲಿದೆ.

ಗೋರಖಪುರ್ ನಲ್ಲಿ ಬಿಜೆಪಿಯಿಂದ ಉಪೇಂದ್ರ ಶುಕ್ಲಾ, ಕಾಂಗ್ರೆಸ್ಸಿನಿಂದ ಸುರ್ಹಿತಾ ಚಟರ್ಜಿ ವಿರುದ್ಧ ನಿಷಾದ್ ಪಾರ್ಟಿಯ ಸ್ಥಾಪಕ ಸಂಜಯ್ ನಿಷಾದ್ ಅವರ ಮಗ ಪ್ರವೀಣ್ ಕುಮಾರ್ ನಿಷಾದ್ ಅವರು ಸ್ಪರ್ಧಿಸುತ್ತಿದ್ದಾರೆ. ನಿಷಾದ್ ಗೆ ಸಮಾಜವಾದಿ ಪಕ್ಷ ಬೆಂಬಲ ಸಿಗಲಿದೆ.

ಫುಲ್ ಫುರ್ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದಿಂದ ಒಬಿಸಿ ಮುಖಂಡ ನಾಗೇಂದ್ರ ಸಿಂಗ ಪಟೇಲ್ ಕಣಕ್ಕಿಳಿಯಲಿದ್ದು, ಬಿಜೆಪಿ ನಾಯಕ, ವಾರಣಾಸಿಯ ಮಾಜಿ ಮೇಯರ್, ಒಬಿಸಿ ನಾಯಕ ಕೌಶಲೇಂದ್ರ ಸಿಂಗ್ ಪಟೇಲ್ ಸ್ಪರ್ಧಿಸಿದ್ದರೆ, ಕಾಂಗೆಸ್ಸಿನಿಂದ ಮನೀಶ್ ಮಿಶ್ರಾ ಕಣದಲ್ಲಿದ್ದಾರೆ.

UP Bihar bypolls 2018 LIVE: BJP will win both seats in Gorakhpur, Phulpur, says Yogi

Mar 11, 2018, 9:53 am IST

ಅರಾರಿಯಾ: ಬಿಹಾರದ ಬಿಜೆಪಿ ರಾಜ್ಯಾಧ್ಯಕ್ಷ ನಿತ್ಯಾನಂದ್ ರಾಯ್ ವಿರುದ್ಧ ದೂರು ದಾಖಲು. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ. ಆರ್ ಜೆ ಡಿ ಅಭ್ಯರ್ಥಿ ಸರ್ಫರಾಜ್ ಅಲಂ, ಅರಾರಿಯಾದಲ್ಲಿ ಗೆದ್ದರೆ ಈ ಕ್ಷೇತ್ರ ಐಎಸ್ಐಗಳ ಅಡ್ಡಾ ಆಗಲಿದೆ ಎಂದಿದ್ದ ನಿತ್ಯಾನಂದ್.
Mar 11, 2018, 9:53 am IST

ಪ್ರಧಾನಿ ಮೋದಿ ಅವರ ಉತ್ತಮ ಅಭಿವೃದ್ಧಿ ಪರ ಯೋಜನೆಗಳು, ರಾಜ್ಯಸರ್ಕಾರದ ಆಡಳಿತದ ನೆರವಿನಿಂದ ಗೋರಖ್ ಪುರ್ ಹಾಗೂ ಪುಲ್ ಪುರ್ ಎರಡೂ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲಿದೆ. 2019ರ ಚುನಾವಣೆಗೆ ಇದು ದಿಕ್ಸೂಚಿಯಾಗಲಿದೆ : ಆದಿತ್ಯನಾಥ್
Mar 11, 2018, 9:53 am IST

ಋಣಾತ್ಮಕ ಚಿಂತನೆಯುಳ್ಳ, ಅಭಿವೃದ್ಧಿ ಮಾಡದ ಕಾಂಗ್ರೆಸ್ ಪಕ್ಷವನ್ನು ಜನತೆ ಮೂಲೆಗುಂಪಾಗಿಸುತ್ತಾರೆ: ಮತದಾನದ ಬಳಿಕ ಯುಪಿ ಸಿಎಂ ಆದಿತ್ಯನಾಥ್ ಹೇಳಿಕೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+