Get Updates
Get notified of breaking news, exclusive insights, and must-see stories!

Republic Double Exit Poll 2024: ದೇಶದಲ್ಲಿ ಮತ್ತೆ ಅರಳಲಿದೆ 'ಕಮಲ': ವಿಪಕ್ಷಗಳ 'ಇಂಡಿಯಾ' ಮೈತ್ರಿಕೂಟಕ್ಕೆ ಗೆಲುವಿನ ನಿರಾಸೆ

ನವದೆಹಲಿ, ಜೂನ್ 01: ದೇಶದಲ್ಲಿ ಸಾರ್ವತ್ರಿಕ ಚುನಾವಣೆ 2024ಕ್ಕೆ ಇಂದಿಗೆ ಸುಸೂತ್ರವಾಗಿ ಮತದಾನ ನಡೆದಿದೆ. ಇಂದು ಏಳನೇ ಹಂತದ ಮತದಾನ ಪೂರ್ಣಗೊಂಡ ಬೆನ್ನಲ್ಲೆ ಹಲವು ಸುದ್ದಿ ಮಾಧ್ಯಮ ಸಂಸ್ಥೆ ಏಜೆನ್ಸಿಗಳು ಜೊತೆಗೂಡಿ ಚುನಾವಣೋತ್ತರ ಸಮೀಕ್ಷೆ ನಡೆಸಿವೆ. ಈ ಪೈಕಿ Republic TV-PMARQ Exit Poll ಸಮೀಕ್ಷಾ ಫಲಿತಾಂಶ ರಿಲೀಸ್ ಆಗಿದೆ.

Republic tv-PMARQ Exit Poll Result ಪ್ರಕಾರ, ದೇಶದಲ್ಲಿ ಮತದಾರ ಪ್ರಭು ಮತ್ತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ತರಲು ಬಯಸಿದ್ದಾರೆ ಎಂದು ತಿಳಿದು ಬಂದಿದೆ. ಚುನಾವಣೋತ್ತರ ಸಮೀಕ್ಷೆ ಪ್ರಕಾರ, NDA ಪಕ್ಷಕ್ಕೆ 359 ಸ್ಥಾನ ಗಳಿಸಲಿದೆ. ವಿಪಕ್ಷಗಳ ಮೈತ್ರಿಕೂಟವಾದ 'ಇಂಡಿಯಾ' ಗೆ 154 ಸೀಟುಗಳು ಧಕ್ಕುವ ಸಾಧ್ಯತೆ ಇದೆ. ಇತರೆ ಪಕ್ಷಗಳು 30 ಸೀಟುಗಳಿಗೆ ತೃಪ್ತಿಪಟ್ಟುಕೊಳ್ಳಲಿವೆ ಎಂದು ಸಮೀಕ್ಷೆ ತಿಳಿಸಿದೆ.

Lok Sabh Exit Poll Prediction 2024 Republic TV with PMARQ Exit Poll Result 2024

ಇಂಡಿಯಾ ಮೈತ್ರಿಕೂಟದಲ್ಲಿ ಕಾಂಗ್ರೆಸ್ ಪ್ರಭಲ ಪಕ್ಷವಾಗಿದೆ. ಇದೇ ಪಕ್ಷ ಎನ್‌ಡಿಗೆ ಪ್ರಮುಖ ಎದುರಾಳಿಯು ಹೌದು. ಕೇಂದ್ರದ ಅಧಿಕಾರದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಪಕ್ಷವನ್ನು ಅಧಿಕಾರದಿಂದ ದೂರ ಇಡಲು ರಣತಂತ್ರ ರೂಪಿಸಿದ್ದವು.

ಆದರೆ ಮೈತ್ರಿಕೂಟದಲ್ಲಿ ಒಳಬೇಗುದಿ, ಸಮನ್ವಯ ಕೊರತೆ ಹಲವು ರಾಜಕೀಯ ಬದಲಾವಣೆಗಳಿಂದ ಮೈತ್ರಿಕೂಟಕ್ಕೆ ಚುನಾವಣೆ ಸಮೀಪಿಸುತ್ತಿದ್ದಂತೆ ಮುಖಭಂಗವಾಯಿತು. ಇದನ್ನೆ ಅಸ್ತ್ರವಾಗಿ ಮಾಡಿಕೊಂಡ ಬಿಜೆಪಿ ಕೂಟವು ಭರ್ಜರಿ ಪ್ರಚಾರ ನಡೆಸಿತು.

ದೇಶದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಆದ ಬದಲಾವಣೆ, ಅಭಿವೃದ್ಧಿ ಹಿಂದೂತ್ವದ ಹಾದಿಯಲ್ಲೇ ಮತ್ತೆ ಹೆಚ್ಚು ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗುವ ಸಾಧ್ಯತೆ ಇದೆ. ಇದೆಲ್ಲವು ಇಂದು ಬಿಡುಗಡೆ ಆದ ರಿಪಬ್ಲಿಕ್ ಟಿವಿ PMARQ ಚುನಾಫಲಿತಾಂಶ ಸಮೀಕ್ಷೆಯ ಫಲಿತಾಂಶದಲ್ಲಿ ಎದ್ದುಕಾಣುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+