Lok Poll Exit Poll Result 2024: ಇಂಡಿಯಾ ಒಕ್ಕೂಟಕ್ಕೆ ಆಘಾತ ನೀಡಿದ ಲೋಕ್‌ಪೋಲ್ ಚುನಾವಣೋತ್ತರ ಸಮೀಕ್ಷೆ
ಲೋಕಸಭಾ ಚುನಾವಣೆ 2024ರ ಏಳನೇ ಹಂತದ ಮತದಾನ ಮುಕ್ತಾಯವಾಗಿದ್ದು, ಎಲ್ಲಾ ಹಂತಗಳ ಮತದಾನ ಮುಕ್ತಾಯವಾಗಿದೆ. ಇನ್ನೇನಿದ್ದರೂ ಮತ ಎಣಿಕೆ ಮಾತ್ರ ಬಾಕಿ ಉಳಿದಿದ್ದು, ಫಲಿತಾಂಶಕ್ಕಾಗಿ ಇನ್ನೂ ನಾಲ್ಕು ದಿನ ಕಾಯಬೇಕಾಗಿದೆ.
ಜೂನ್ 4ರಂದು ಮತ ಎಣಿಕೆ ನಡೆಯಲಿದ್ದು, ದೇಶದ ಮತದಾರರ ತೀರ್ಪು ಏನೆಂದು ಜಗಜ್ಜಾಹೀರಾಗಲಿದೆ. ಇದಕ್ಕೂ ಮುನ್ನ ಚುನಾವಣೋತ್ತರ ಸಮೀಕ್ಷೆಗಳು ಬಹುತೇಕ ಫಲಿತಾಂಶದ ಬಗ್ಗೆ ಸ್ಪಷ್ಟನೆ ನೀಡಲಿವೆ.

ಲೋಕ್‌ಪೋಲ್ ಸಮೀಕ್ಷೆಯಲ್ಲಿ 'ಇಂಡಿಯಾ' ಒಕ್ಕೂಟಕ್ಕೆ ಆಘಾತಕಾರಿ ಅಂಕಿ ಸಂಖ್ಯೆಗಳನ್ನು ನೀಡಲಾಗಿದೆ. ಲೋಕ್ ಪೋಲ್ ಚುನಾವಣೋತ್ತರ ಸಮೀಕ್ಷೆ ವರದಿ ಪ್ರಕಾರ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ 325 ರಿಂದ 335 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು, ಇಂಡಿಯಾ ಒಕ್ಕೂಟ 155 ರಿಂದ 165 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಹೇಳಿದೆ. ಇತರ ಪಕ್ಷಗಳು ಮತ್ತು ಪಕ್ಷೇತರ 48-55 ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ ಎಂದು ಹೇಳಿದೆ.
Final numbers of Lok poll for #KarnatakaElection2023 pic.twitter.com/XHps5z9zoJ
— Lok Poll (@LokPoll) May 6, 2023












Click it and Unblock the Notifications