ಲಾಕ್ ಡೌನ್; ರಾಜ್ಯಗಳಲ್ಲಿ ನಿರುದ್ಯೋಗ ಪ್ರಮಾಣ ಭಾರಿ ಏರಿಕೆ

ನವದೆಹಲಿ, ಜೂನ್ 01 : ಲಾಕ್ ಡೌನ್ ಪರಿಣಾಮ ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಹೆಚ್ಚಾಗುತ್ತಿದೆ. ತೆಲಂಗಾಣ, ಕೇರಳ ಮತ್ತು ತಮಿಳುನಾಡಿನಲ್ಲಿ ನಿರುದ್ಯೋಗದ ಪ್ರಮಾಣ ಹೆಚ್ಚಾಗಿದೆ. ದಕ್ಷಿಣ ಭಾರತದ ರಾಜ್ಯಗಳ ಅಂಕಿ ಸಂಖ್ಯೆಗಳು ಆತಂಕವನ್ನು ಮೂಡಿಸುತ್ತಿವೆ.

Recommended Video

      Train services start today , Dos and Don'ts during the journey | Railways Resumed | Oneindia Kannada

      ಭಾರತೀಯ ಆರ್ಥಿಕತೆ ನಿಗಾ ಕೇಂದ್ರ (ಸಿಎಂಐಇ) ಬಿಡುಗಡೆ ಮಾಡಿರುವ ವರದಿಯ ಪ್ರಕಾರ ಕೇರಳದಲ್ಲಿ ಶೇ 9.5 ರಷ್ಟು ಹೆಚ್ಚಾಗಿದ್ದು, ಮೇ ತಿಂಗಳಿನಲ್ಲಿ ಶೇ 26.5ರಷ್ಟಾಗಿದೆ. ಏಪ್ರಿಲ್‌ನಲ್ಲಿ ಶೇ 17 ಮತ್ತು ಮಾರ್ಚ್‌ನಲ್ಲಿ ಶೇ 9ರಷ್ಟು ಪ್ರಮಾಣವಿತ್ತು.

      ಇದುವರೆಗೂ ರಾಜ್ಯದಲ್ಲಿ ನಿರುದ್ಯೋಗದ ಪ್ರಮಾಣ ಒಂದಂಕಿಯಲ್ಲಿ ಇತ್ತು. 2019ರ ಮೇ ತಿಂಗಳಿನಲ್ಲಿ ಶೇ 6.4, 2018ರ ಸೆಪ್ಟೆಂಬರ್‌ನಲ್ಲಿ ಶೇ 4.3ರಷ್ಟಿತ್ತು. ಈ ವರ್ಷ ಲಾಕ್ ಡೌನ್ ಪರಿಣಾಮ ಅದು ಎರಡಂಕಿಗೆ ಏರಿಕೆಯಾಗಿದೆ.

      ದಕ್ಷಿಣ ಭಾರತದ ಕೆಲವು ರಾಜ್ಯಗಳಲ್ಲಿ ನಿರುದ್ಯೋಗದ ಪ್ರಮಾಣ ಭಾರಿ ಏರಿಕೆಯಾಗಿದೆ. ಮಾರ್ಚ್‌ನಲ್ಲಿ ರಾಷ್ಟ್ರದಲ್ಲಿ ನಿರುದ್ಯೋಗದ ಪ್ರಮಾಣ ಶೇ 8.8ರಷ್ಟಿತ್ತು. ಆಗ ಕೇರಳದಲ್ಲಿ ಶೇ 9 ಅಂದರೆ ರಾಷ್ಟ್ರಕ್ಕಿಂತ ಹೆಚ್ಚಿನ ಮಟ್ಟದಲ್ಲಿತ್ತು.

      ತೆಲಂಗಾಣ ರಾಜ್ಯದ ಅಂಕಿ ಅಂಶ

      ತೆಲಂಗಾಣ ರಾಜ್ಯದ ಅಂಕಿ ಅಂಶ

      ಏಪ್ರಿಲ್ ಮತ್ತು ಮೇ ತಿಂಗಳ ಅಂಕಿ ಅಂಶಗಳನ್ನು ನೋಡಿದಾಗ ತೆಲಂಗಾಣದಲ್ಲಿ ನಿರುದ್ಯೋಗದ ಪ್ರಮಾಣ ಶೇ 33ರಷ್ಟಿದೆ. ಎರಡು ತಿಂಗಳಿನಲ್ಲಿ ಶೇ 28.6ರಷ್ಟು ಏರಿಕೆಯಾಗಿದೆ. ಲಾಕ್ ಡೌನ್ ಅವಧಿಯಲ್ಲಿ ದಾಖಲಾಗಿರುವ ಹೆಚ್ಚಿನ ನಿರುದ್ಯೋಗ ಪ್ರಮಾಣ ಇದಾಗಿದೆ.

      ತಮಿಳುನಾಡು ರಾಜ್ಯ

      ತಮಿಳುನಾಡು ರಾಜ್ಯ

      ತಮಿಳುನಾಡಿನಲ್ಲಿ ಏಪ್ರಿಲ್‌ ತಿಂಗಳಿಗೆ ಹೋಲಿಕೆ ಮಾಡಿದರೆ ಮೇ ತಿಂಗಳಿನಲ್ಲಿ ನಿರುದ್ಯೋಗದ ಪ್ರಮಾಣ ಶೇ 16ರಷ್ಟು ಕಡಿಮೆಯಾಗಿದೆ. ಮೇ ತಿಂಗಳಿನಲ್ಲಿ ಶೇ 33ರಷ್ಟು ಪ್ರಮಾಣವಿದೆ. ಏಪ್ರಿಲ್‌ನಲ್ಲಿ ಶೇ 49.8ರಷ್ಟಿತ್ತು.

      ಕರ್ನಾಟಕದಲ್ಲಿ ಎಷ್ಟಿದೆ?

      ಕರ್ನಾಟಕದಲ್ಲಿ ಎಷ್ಟಿದೆ?

      ಕರ್ನಾಟಕದಲ್ಲಿ ಮೇ ತಿಂಗಳಿನಲ್ಲಿ ನಿರುದ್ಯೋಗದ ಪ್ರಮಾಣ 20.4ರಷ್ಟಿದೆ. ಏಪ್ರಿಲ್‌ನಲ್ಲಿ 29.8ರಷ್ಟಿತ್ತು. ಆಂಧ್ರಪ್ರದೇಶದಲ್ಲಿಯೂ ಮಾರ್ಚ್ ಮತ್ತು ಏಪ್ರಿಲ್‌ಗೆ ಹೋಲಿಕೆ ಮಾಡಿದರೆ ಮೇ ತಿಂಗಳಿನಲ್ಲಿ ಶೇ 5.8ರಷ್ಟು ಏರಿಕೆಯಾಗಿದೆ.

      ಭಾರತದಲ್ಲಿ ಎಷ್ಟಿದೆ?

      ಭಾರತದಲ್ಲಿ ಎಷ್ಟಿದೆ?

      ಇಡೀ ಭಾರತದಲ್ಲಿ ಮೇ 31ಕ್ಕೆ ಅನ್ವಯವಾಗುವಂತೆ ನಿರುದ್ಯೋಗದ ಪ್ರಮಾಣ ಶೇ 23.5. ಏಪ್ರಿಲ್‌ನಲ್ಲಿ 23.52, ಮಾರ್ಚ್‌ನಲ್ಲಿ 8.75. ಇಡೀ ದೇಶದಲ್ಲಿ ನಿರುದ್ಯೋಗದ ಸಂಖ್ಯೆಯಲ್ಲಿ ಜಾರ್ಖಂಡ್ (ಶೇ 59.2) ಮೊದಲ ಸ್ಥಾನದಲ್ಲಿದೆ. ಬಿಹಾರದಲ್ಲಿ ಶೇ 46.2, ದೆಹಲಿಯಲ್ಲಿ ಶೇ 44.9 ಮೇ ತಿಂಗಳಿನಲ್ಲಿ ದಾಖಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+