ಎಲ್ಕೆ ಅಡ್ವಾಣಿ ವೆಬ್ ಸೈಟಿಗೆ ಅತಿಕ್ರಮಿಗಳ ಪ್ರವೇಶ

Posted By:
Subscribe to Oneindia Kannada

ನವದೆಹಲಿ, ಏ.21: ಬಿಜೆಪಿ ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ ಅವರ ಅಧಿಕೃತ ವೆಬ್ ಸೈಟ್ ಗೆ ಕನ್ನ ಹಾಕಲಾಗಿದೆ. ಎಲ್ ಕೆ ಅಡ್ವಾಣಿ ವೆಬ್ ಸೈಟ್ ಹ್ಯಾಕ್ ಮಾಡಿರುವುದು ಪಾಕಿಸ್ತಾನಿ ಮೂಲದ ಅತಿಕ್ರಮಿಗಳು, ಇದು ಕಾಶ್ಮೀರ ಪ್ರತ್ಯೇಕತಾವಾದಿಗಳ ಕೃತ್ಯ ಎಂದು ತಿಳಿದು ಬಂದಿದೆ.

ವೆಬ್ ಸೈಟಿಗೆ ಕನ್ನ ಹಾಕಿರುವ ವ್ಯಕಿ ತನ್ನನ್ನು ಮಹಮ್ಮದ್ ಬಿಲಾಲ್ ಎಂದು ಗುರುತಿಸಿಕೊಂಡಿದ್ದು, 'ಪಾಕಿಸ್ತಾನ್ ಜಿಂದಾಬಾದ್' ಎಂದು ಸಂದೇಶ ಹಾಕಿದ್ದಾರೆ. ಕಾಶ್ಮೀರದಲ್ಲಿ ಗುಂಡಿನ ಸದ್ದು ನಿಲ್ಲಲ್ಲಿ, ಕಾಶ್ಮೀರ ಸ್ವಾತಂತ್ರ್ಯ ರಾಷ್ಟ್ರವಾಗಲಿ ಎಂಬ ಸಂದೇಶವೂ ಇದೆ.

ಜಮ್ಮು ಮತ್ತು ಕಾಶ್ಮೀರ ಪ್ರತ್ಯೇಕತಾವಾದಿ ಗುಂಪಿನ ನಾಯಕ ಸೈಯದ್ ಅಲಿ ಗೀಲಾನಿ ಅವರ ಜತೆ ಮಾತುಕತೆ ನಡೆಸಲು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ತಮ್ಮ ಪ್ರತಿನಿಧಿಗಳನ್ನು ಕಳುಹಿಸಿದ ಸುದ್ದಿ ಬಂದಿರುವ ಬೆನ್ನಲ್ಲೇ ಎಲ್ ಕೆ ಅಡ್ವಾಣಿ ಅವರ ವೆಬ್ ಸೈಟ್ ಹ್ಯಾಕ್ ಆಗಿರುವುದು ಕುತೂಹಲಕಾರಿಯಾಗಿದೆ.

L.K. Advani’s official website hacked

ಇದಕ್ಕೆ ಪೂರಕವಾಗಿ ಹ್ಯಾಕರ್ ಮಹಮ್ಮದ್ ಬಿಲಾಲ್ ಇನ್ನೊಂದು ಸಂದೇಶ ಹಾಕಿದ್ದು "Good Morning Narendra Modi" ಎಂಬ ಒಕ್ಕಣೆಯೊಂದಿಗೆ ಸಂದೇಶ ಆರಂಭಗೊಂಡು ಕಾಶ್ಮೀರ ಸಮಸ್ಯೆಗಳ ಬಗ್ಗೆ ಸಂದೇಶ ಹಾಕಲಾಗಿದೆ.

ಈ ನಡುವೆ ತಮಿಳುನಾಡಿನ ವೆಲ್ಲೂರಿನಲ್ಲಿರುವ ಎಲ್ ಕೆ ಅಡ್ವಾಣಿ ಅವರಿಗೆ ತಮ್ಮ ವೆಬ್ ಸೈಟ್ lkadvani.in ಹ್ಯಾಕ್ ಆಗಿರುವುದು ತುಂಬಾ ತಡವಾಗಿ ಗೊತ್ತಾಗಿದೆಯಂತೆ. ಅಡ್ವಾಣಿ ಸಹಚರರು, ವೆಬ್ ಅಡ್ಮಿನ್ ಗಳಿಗೂ ಹ್ಯಾಕ್ ಆಗಿರುವ ಸುದ್ದಿ ತಕ್ಷಣಕ್ಕೆ ತಿಳಿಯದೇ ಹೋಗಿದ್ದು, ಈಗ ವೆಬ್ ಸೈಟ್ ಪುನರ್ ನಿರ್ಮಾಣ ಕಾರ್ಯ ಚಾಲ್ತಿಯಲ್ಲಿದೆ.

ಕಳೆದ ವರ್ಷ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರ ಪ್ರಮುಖ ರಾಜಕೀಯ ಪಕ್ಷ ಎಐಎಡಿಎಂಕೆ ವೆಬ್ ತಾಣ ಇನ್ನೂ ಅತಿಕ್ರಮಿಗಳ ವಶಕ್ಕೆ ಸೇರಿತ್ತು. ಇಲ್ಲಿ ತನಕ ಕಳೆದ ಎರಡು ವರ್ಷಗಳಲ್ಲಿ ಆಂಧ್ರಪ್ರದೇಶ, ಮಧ್ಯಪ್ರದೇಶ, ಗುಜರಾತ್, ಕೇರಳ, ಒಡಿಸ್ಸಾ, ಉತ್ತರಪ್ರದೇಶ, ಸಿಕ್ಕಿಂ, ಮಹಾರಾಷ್ಟ್ರ, ತಮಿಳುನಾಡು,ರಾಜಸ್ಥಾನ ಹಾಗೂ ಮಣಿಪುರ ರಾಜ್ಯಗಳ ಸರ್ಕಾರಿ ವೆಬ್ ತಾಣಗಳು ದಾಳಿಗೆ ಒಳಗಾಗಿದೆ. ಆದರೆ, ಕರ್ನಾಟಕ ಸರ್ಕಾರಿ ವೆಬ್ ತಾಣಗಳು ಹ್ಯಾಕರ್ ಗಳಿಂದ ಸದ್ಯಕ್ಕೆ ಬಚಾವಾಗಿದೆ (ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The official website of veteran BJP leader L.K. Advani was hacked today allegedly by Pakistani hackers who posted messages of “free-Kashmir” on the portal.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ