ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಆದಿತ್ಯನಾಥ್ ಪ್ರಮಾಣ ವಚನ ಸ್ವೀಕಾರ

Subscribe to Oneindia Kannada

ಬೆಂಗಳೂರು, ಮಾರ್ಚ್ 19: ಉತ್ತರ ಪ್ರದೇಶದ 21ನೇ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಪ್ರಮಾಣವಚನ ಸ್ವೀಕರಿಸಿದ್ದಾರೆ.

22 ಜನ ಸಂಪುಟ (ಕ್ಯಾಬಿನೆಟ್) ದರ್ಜೆ, 24 ಜನ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿ ಒಟ್ಟು 47 ಜನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ನೂತನ ಸಚಿವರಿಗೆ ರಾಜ್ಯಪಾಲ ರಾಮ ನಾಯಕ್ ಪ್ರತಿಜ್ಞಾ ವಿಧಿ ಬೋಧಿಸಿದರು.

ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ವರಿಷ್ಠ ಲಾಲ್ ಕೃಷ್ಣ ಅಡ್ವಾಣಿ, ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ, ಕೇಂದ್ರ ಸಚಿವರುಗಳು, ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳು ಮುಖ್ಯಮಂತ್ರಿಗಳು ಸೇರಿ ಅಪಾರ ಜನಸಮುದಾಯ ಸಾಕ್ಷಿಯಾಯಿತು.

3.50: ಪ್ರಮಾಣ ವಚನ ಸ್ವೀಕಾರ ಸಮಾರಂಭ ಮುಕ್ತಾಯ. 22 ಜನ ಸಂಪುಟ (ಕ್ಯಾಬಿನೆಟ್) ದರ್ಜೆ, 24 ಜನ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿ ಒಟ್ಟು 47 ಸಚಿವರು ಪದಗ್ರಹಣ.

Live: Yogi Adityanath Swearing as Uttar Pradesh CM

3.45: ಮಾಜಿ ಕ್ರಿಕೆಟಿಗ ಮಿಹ್ಸಿನ್ ರಾಜ ರಾಜ್ಯ ಸಚಿವರಾಗಿ ಪ್ರಮಾಣ ವಚ ಸ್ವೀಕಾರ

3.30: ಸ್ವತಂತ್ರ ಖಾತೆ ರಾಜ್ಯ ಸಚಿವರಾಗಿ ಅನಿಲ್ ರಾಜ ಭರ್, ಸ್ವಾತಿ ಸಿಂಗ್ ಪದಗ್ರಹಣ

3.15: ಸ್ವತಂತ್ರ ಖಾತೆ ರಾಜ್ಯ ಸಚಿವರಾಗಿ ಅನುಪಮಾ ಜೈಸ್ವಾಲ್, ಸುರೇಶ್ ರಾಣಾ, ಉಪೇಂದ್ರ ತಿವಾರಿ, ಮಹೇಂದ್ರ ಸಿಂಗ್, ಸ್ವತಂತ್ರ ದೇವ್ ಸಿಂಗ್, ಭೂಪೇಂದ್ರ ಸಿಂಗ್ ಚೌಧರಿ, ಧರಂ ಸಿಂಗ್ ಸೈನಿ ಹಾಗೂ ಕ್ಯಾಬಿನೆಟ್ ಸಚಿವರಾಗಿ ನಂದ ಗೋಪಾಲ್ ಗುಪ್ತ ಪ್ರಮಾಣ ವಚನ ಸ್ವೀಕಾರ

3.00: ರಾಜೇಂದ್ರ ಪ್ರತಾಪ್ ಸಿಂಗ್, ಶ್ರೀಕಾಂತ್ ನಾಥ್ ಸಿಂಗ್, ಮುಕುಟ್ ಬಿಹಾರಿ ವರ್ಮಾ, ಅಶುತೋಷ್ ಟಂಡನ್ ರಿಂದ ಉತ್ತರ ಪ್ರದೇಶದ ಕ್ಯಾಬಿನೆಟ್ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ.

2. 45: ರಮಾಪತಿ ಶಾಸ್ತ್ರಿ, ಜಯ ಪ್ರತಾಪ್ ಸಿಂಗ್, ಓಂ ಪ್ರಕಾಶ್ ರಾಜ್ ಭರ್, ಸತ್ಯದೇವ ಪಚೋರಿ, ಬೃಜೇಶ್ ಪಾಠಕ್, ಲಕ್ಚ್ಮೀನಾರಾಯಣ ಚೌಧರಿ, ಚೇತನ್ ಚೌಹಾಣ್, ಶ್ರೀಕಾಂತ್ ಶರ್ಮಾ,

2.40: ಸಚಿವರಾಗಿ ರಾಜೇಶ್ ಅಗರ್ವಾಲ್, ಶ್ರೀಮತಿ ರೀಟಾ ಬಹುಗುಣ ಜೋಶಿ, ಧಾರಾ ಸಿಂಹ್ ಚೌಹಾಣ್, ಧರಮ್ ಪಾಲ್ ಸಿಂಗ್, ಎಸ್.ಪಿ ಸಿಂಗ್ ಬಧೇಲ್ ರಿಂದ ಪ್ರಮಾಣ ವಚನ ಸ್ವೀಕಾರ.

Live: Yogi Adityanath Swearing as Uttar Pradesh CM

2.29: ಈಶ್ವರನ ಹೆಸರಿನಲ್ಲಿ ಕ್ಯಾಬಿನೆಟ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಸ್ವಾಮಿ ಪ್ರಸಾಸ್ ಮೌರ್ಯ, ಸತೀಶ್ ಸುಹಾನಾ

2.27: ಸುರೇಶ್ ಖನ್ನಾರಿಂದ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ

2.25: ಸಚಿವರಾಗಿ ಸೂರ್ಯ ಪ್ರತಾಪ್ ಶಾಹಿ ಪ್ರಮಾಣ ವಚನ ಸ್ವೀಕಾರ

2.23: ಉಪ ಮುಖ್ಯಮಂತ್ರಿಗಳಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದ ಡಾ ದಿನೇಶ್ ಶರ್ಮಾ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಕೇಶವ್ ಪ್ರಸಾದ್ ಮೌರ್ಯ.

2.17: ಯೋಗಿ ಆದಿತ್ಯನಾಥ್ ಪ್ರಮಾಣ ವಚನ ಸ್ವೀಕಾರ. ಈಶ್ವರನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಆದಿತ್ಯನಾಥ್. ರಾಜ್ಯಪಾಲ ರಾಮನಾಯಕ್ ರಿಂದ ಪ್ರತಿಜ್ಞಾವಿಧಿ ಬೋಧನೆ.

2.16: ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮನ.

2.15: ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಹಿರಿಯ ಮುಖಂಡ ಎಲ್.ಕೆ ಅಡ್ವಾಣಿ, ಬಿಜೆಪಿ ಆಡಳಿತ ಇರುವ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು, ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸೇರಿದಂತೆ ಅನೇಕ ನಾಯಕರು ಭಾಗಿ. ಲಕ್ನೋದ ಕಾನ್ಶೀರಾಂ ಸ್ಮೃತಿ ಭವನದಲ್ಲಿ ಈ ಪ್ರತಿಜ್ಞಾವಿಧಿ ಕಾರ್ಯಕ್ರಮ ನಡೆಯುತ್ತಿದೆ.

2.10: ಪ್ರಮಾನ ವಚನ ಸಮಾರಂಭಕ್ಕೆ ಕ್ಷಣಗಣನೆ. ಯೋಗಿ ಆದಿತ್ಯನಾಥ್ ಜತೆ 43 ಸಚಿವರಿಂದ ಪ್ರಮಾಣ ವಚನ ಸ್ವೀಕಾರ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Uttar Pradesh chief minister Yogi Adityanath swearing ceremony Live. Here are the live updates.
Please Wait while comments are loading...