ವಾಜಪೇಯಿ ಚಿತೆಗೆ ಅಗ್ನಿಸ್ಪರ್ಶ ಮಾಡಿದ ದತ್ತುಪುತ್ರಿ ನಮಿತಾ
ನವದೆಹಲಿ, ಆಗಸ್ಟ್ 17: ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ(25, ಡಿಸೆಂಬರ್ 1924- 16, ಆಗಸ್ಟ್ 2018) ಅವರ ಅಂತ್ಯ ಸಂಸ್ಕಾರಕ್ಕೆ ಸಕಲ ಸಿದ್ಧತೆಗಳು ನಡೆದಿವೆ. ಆಗಸ್ಟ್ 16 ರಂದು ಸಂಜೆ 5.05 ಕ್ಕೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಅಜಾತ ಶತ್ರು ಅಟಲ್ ಜೀ ಅವರ ಅಗಲಿಕೆಗೆ ಇಡೀ ದೇಶವೂ ಮರುಗಿದೆ.

ದೇಶಕಂಡ ಧೀಮಂತ ನಾಯಕರಲ್ಲೊಬ್ಬರಾದ ಅಟಲ್ ಜೀ ಅವರ ನಿಧನದ ಹಿನ್ನೆಲೆಯಲ್ಲಿ ದೇಶದ ಹಲವು ರಾಜ್ಯಗಳಲ್ಲಿ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಭಾರತ ಸರ್ಕಾರ 7 ದಿನಗಳ ಕಾಲ ಶೋಕಾಚರಣೆ ಮಾಡಲಿದೆ.
ಇಂದು ಸಂಜೆ ಸುಮಾರು 5 ಗಂಟೆಯ ಹೊತ್ತಿಗೆ ವಾಜಪೇಯಿ ಅವರ ಅಂತ್ಯ ಸಂಸ್ಕಾರ ನಡೆಯುತ್ತಿದ್ದು,, ಈಗಾಗಲೇ ದೇಶದ ಹಲವು ಗಣ್ಯರು ಅವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ವಾಜಪೇಯಿ ಅವರ ಅಂತಿಮ ಯಾತ್ರೆಯ ಕ್ಷಣ ಕ್ಷಣದ ಮಾಹಿತಿಯನ್ನು ಒನ್ ಇಂಡಿಯಾ ನೀಡಲಿದೆ.
Army Chief General Bipin Rawat, Navy Chief Admiral Sunil Lanba & Air Chief Marshal Birender Singh Dhanoa, pay last tribute to former PM #AtalBihariVajpayee at Smriti Sthal in Delhi pic.twitter.com/oDq4kzHl4V
— ANI (@ANI) August 17, 2018












Click it and Unblock the Notifications