ಮೋದಿಯಿಂದ ನೇತಾಜಿ ರಹಸ್ಯ ಕಡತ ಬಿಡುಗಡೆ

Posted By:
Subscribe to Oneindia Kannada

ನವದೆಹಲಿ, ಜನವರಿ 23 : ನೇತಾಜಿ ಸುಭಾಷ್‌ಚಂದ್ರ ಬೋಸ್‌ ಅವರಿಗೆ ಸಂಬಂಧಿಸಿದ 100 ರಹಸ್ಯ ಡಿಜಿಟಲ್ ಕಡತ­ಗಳನ್ನು ಇಂದು ಬಿಡುಗಡೆ ಮಾಡಲಾಗಿದೆ. ಶನಿವಾರ ಬೋಸ್‌ ಅವರ ಜನ್ಮದಿನ. ಇಂದೇ ಪ್ರಧಾನಿ ನರೇಂದ್ರ ಮೋದಿ ಅವರು ದಾಖಲೆಗಳನ್ನು ಬಿಡುಗಡೆ ಮಾಡಿದರು.

ನೇತಾಜಿ ಅವರ ಕುರಿತ ಅನೇಕ ರಹಸ್ಯ ಕಡತಗಳು ರಾಷ್ಟ್ರೀಯ ಪತ್ರಾಗಾರದಲ್ಲಿವೆ. ನೇತಾಜಿ ಅವರ ಕಣ್ಮರೆ ರಹಸ್ಯವನ್ನು ಒಳಗೊಂಡಿರುವ ಕಡತಗಳನ್ನು ಡಿಜಿಟಲ್‌ ಸ್ವರೂಪಕ್ಕೆ ಪರಿವರ್ತಿಸಲಾಗಿದ್ದು, 100 ಕಡತಗಳನ್ನು ಪ್ರಧಾನಿ ಮೋದಿ ಇಂದು ಬಿಡುಗಡೆ ಮಾಡಿದರು. ಪ್ರತಿ ತಿಂಗಳು 25 ಕಡತಗಳನ್ನು ಸಾರ್ವಜನಿಕರಿಗಾಗಿ ಬಿಡುಗಡೆ ಮಾಡಲಾಗುತ್ತದೆ. [ನೇತಾಜಿ ಕುರಿತ 64 ರಹಸ್ಯ ದಾಖಲೆ ಬಹಿರಂಗ]

modi

ನೇತಾಜಿ ಸಂಬಂಧಿಯ ಮೊಮ್ಮಗ ಸೂರ್ಯಕುಮಾರ್‌ ಬೋಸ್‌ ಅವರು ಬರ್ಲಿನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ 1945ರ ಆಗಸ್ಟ್‌ 18ರಂದು ತೈವಾನ್‌ನಿಂದ ಬೋಸ್‌ ಅವರು ಕಣ್ಮರೆಯಾಗಿರುವುದಕ್ಕೆ ಸಂಬಂಧಿಸಿದ ಮಾಹಿತಿ ಬಹಿರಂಗ ಮಾಡಬೇಕು ಎಂದು ಒತ್ತಾಯಿಸಿದ್ದರು. ಆದ್ದರಿಂದ, ಸರ್ಕಾರ ಇಂದು ದಾಖಲೆಗಳನ್ನು ಬಿಡುಗಡೆ ಮಾಡಿದೆ.


ಈ ರಹಸ್ಯ ಮಾಹಿತಿ ಬಹಿರಂಗ ಮಾಡುವ ಕುರಿತು ಪರಿಶೀಲಿಸಲು ಕೇಂದ್ರ ಸರ್ಕಾರ ಅಂತರ್‌ ಸಚಿವಾಲಯ ಸಮಿತಿಯೊಂದನ್ನು ರಚಿಸಿಸಿತ್ತು. ಈ ಸಮಿತಿಯ ವರದಿ ಬಂದ ನಂತರ ಕಡತಗಳನ್ನು ಬಹಿರಂಗಗೊಳಿಸುವ ನಿರ್ಣಯ ಕೈಗೊಳ್ಳಲಾಗಿದೆ. ನೇತಾಜಿ ಅವರಿಗೆ ಸಬಂಧಿಸಿದ 25 ದಾಖಲೆಗಳ ಡಿಜಿಟಲ್ ಪ್ರತಿಯನ್ನು ನ್ಯಾಷನಲ್ ಆರ್ಚೀವ್ಸ್ ಆಫ್ ಇಂಡಿಯಾ (ಎನ್‌ಐಎ) ಪ್ರತಿ ತಿಂಗಳು ಸಾರ್ವಜನಿಕರಿಗಾಗಿ ಬಿಡುಗಡೆ ಮಾಡಲಿದೆ.

ಮೋದಿಯಿಂದ ಕಡತ ಬಿಡುಗಡೆ ವಿಡಿಯೋ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Prime Minister of India Narendra Modi will release digital copies of 100 declassified files related to Netaji Subhash Chandra Bose. The National Archives of India (NAI) to release digital copies of 25 declassified files on Bose in the public domain every month.
Please Wait while comments are loading...