ಅರ್ಧಕ್ಕಿಂತಲೂ ಹೆಚ್ಚು ಸಕ್ರಿಯ ಕೊರೊನಾ ಕೇಸ್ ಇರುವ ದೇಶದ 10 ನಗರಗಳು

ನವದೆಹಲಿ, ಜುಲೈ 18: ಕೊರೊನಾವೈರಸ್ ಸೋಂಕಿತರ ಸಂಖ್ಯೆ ದೇಶದಲ್ಲಿ ಒಂದು ಮಿಲಿಯನ್ (ಹತ್ತು ಲಕ್ಷ) ದಾಟಿದೆ. ಇದರ ಜೊತೆಗೆ ಶೇ. 60ಕ್ಕಿಂತಲೂ ಹೆಚ್ಚು ಸೋಂಕಿತರು ಗುಣಮುಖರಾಗುತ್ತಿರುವುದು ಸಮಾಧಾನಕರ ವಿಚಾರವಾಗಿದೆ.

ದೇಶದಲ್ಲಿನ ಒಟ್ಟಾರೆ ಸಕ್ರಿಯ ಪ್ರಕರಣಗಳನ್ನು ಅವಲೋಕಿಸಿದಾಗ, ಹತ್ತು ನಗರಗಳಲ್ಲಿನ ಸೋಂಕಿತರ ಸಂಖ್ಯೆ ಅರ್ಧಕ್ಕಿಂತ ಹೆಚ್ಚು. ಅದರಲ್ಲಿ, ಮಹಾರಾಷ್ಟ್ರದ ಮೂರು ನಗರಗಳು ಈ ಪಟ್ಟಿಯಲ್ಲಿದೆ.

ಹೊಸ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಬಿಡುಗಡೆಯಾಗುತ್ತಿರುವವರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗುತ್ತಿರುವುದು ನಿಟ್ಟುಸಿರು ಬಿಡುವಂತಹ ವಿಚಾರವಾಗಿದೆ. ಗ್ರಾಮೀಣ ಭಾಗಕ್ಕೆ ಹೋಲಿಸಿದರೆ, ನಗರ ಭಾಗದಲ್ಲೇ ಸೋಂಕಿತರ ಪ್ರಮಾಣ ಹೆಚ್ಚು.

ದೇಶದ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ, ಪ್ರಮುಖ ಹತ್ತು ನಗರಗಳ ಪಾಲು ಶೇ. 52.7. ದೇಶದ ಅರ್ಧಕ್ಕಿಂತಲೂ ಹೆಚ್ಚು 'ಸಕ್ರಿಯ' ಕೊರೊನಾ ಕೇಸ್ ಇರುವ ಹತ್ತು ನಗರಗಳ ಪಟ್ಟಿ (ದೆಹಲಿ, ಬೆಂಗಳೂರು ಹೊರತು ಪಡಿಸಿ, ಮಿಕ್ಕ ನಗರದ್ದು ಎರಡು ದಿನದ ಹಿಂದಿನ ಅಂಕಿಅಂಶ) ಹೀಗಿದೆ:

ದೆಹಲಿ ಮತ್ತು ಮುಂಬೈ

ದೆಹಲಿ ಮತ್ತು ಮುಂಬೈ

ದೆಹಲಿ
ಸಕ್ರಿಯ ಪ್ರಕರಣ: 118,645
ಗುಣಮುಖರಾದವರು : 17,807

ಮುಂಬೈ
ಸಕ್ರಿಯ ಪ್ರಕರಣ: 96,474
ಗುಣಮುಖರಾದವರು : 22,888

ಚೆನ್ನೈ ಮತ್ತು ಥಾಣೆ

ಚೆನ್ನೈ ಮತ್ತು ಥಾಣೆ

ಚೆನ್ನೈ
ಸಕ್ರಿಯ ಪ್ರಕರಣ: 80,961
ಗುಣಮುಖರಾದವರು : 15,610

ಥಾಣೆ
ಸಕ್ರಿಯ ಪ್ರಕರಣ: 67,360
ಗುಣಮುಖರಾದವರು : 34,721

ಪುಣೆ ಮತ್ತು ಬೆಂಗಳೂರು

ಪುಣೆ ಮತ್ತು ಬೆಂಗಳೂರು

ಪುಣೆ
ಸಕ್ರಿಯ ಪ್ರಕರಣ: 44,202
ಗುಣಮುಖರಾದವರು : 25,510

ಬೆಂಗಳೂರು
ಸಕ್ರಿಯ ಪ್ರಕರಣ: 33,205
ಗುಣಮುಖರಾದವರು : 20,757

ಹೈದರಾಬಾದ್ ಮತ್ತು ಅಹಮದಾಬಾದ್

ಹೈದರಾಬಾದ್ ಮತ್ತು ಅಹಮದಾಬಾದ್

ಹೈದರಾಬಾದ್
ಸಕ್ರಿಯ ಪ್ರಕರಣ: 29,111
ಗುಣಮುಖರಾದವರು : 28,783

ಅಹಮದಾಬಾದ್
ಸಕ್ರಿಯ ಪ್ರಕರಣ: 23,599
ಗುಣಮುಖರಾದವರು : 3,633

ಕೋಲ್ಕತ್ತಾ, ಗುವಹಾಟಿ

ಕೋಲ್ಕತ್ತಾ, ಗುವಹಾಟಿ

ಕೋಲ್ಕತ್ತಾ
ಸಕ್ರಿಯ ಪ್ರಕರಣ: 10,975
ಗುಣಮುಖರಾದವರು : 4,304

ಗುವಹಾಟಿ
ಸಕ್ರಿಯ ಪ್ರಕರಣ: 8,832
ಗುಣಮುಖರಾದವರು : 4,220


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+