ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಧಾರ್-ಆಸ್ತಿ ಜೋಡಣೆ ಸುದ್ದಿ ನಕಲಿ ಎಂದ ಕೇಂದ್ರ ಸರಕಾರ

By ಅನುಷಾ ರವಿ
|
Google Oneindia Kannada News

ಭೂ ದಾಖಲೆಗಳನ್ನು ಆಧಾರ್ ಗೆ ಜೋಡಣೆ ಹಾಗೂ ಡಿಜಿಟಲೈಸ್ ಮಾಡಬೇಕು ಎಂಬ ಸುದ್ದಿಯೊಂದು ವಿಪರೀತ ಚರ್ಚೆಗೆ ಬಂತು. ಅದು ಸುಳ್ಳು ಸುದ್ದಿ ಎಂದು ಸರಕಾರ ಹೇಳಿದೆ. ಭಾರತ ಸರಕಾರದ ಮುಖ್ಯ ವಕ್ತಾರ ಫ್ರಾಂಕ್ ನರೋನ್ಹಾ ಈ ಬಗ್ಗೆ ಮಾತನಾಡಿದ್ದು, ಈಗ ಹರಿದಾಡುತ್ತಿರುವ ಪತ್ರ ನಕಲಿ, ಯಾರೋ ತುಂಟತನದಿಂದ ಸೃಷ್ಟಿ ಮಾಡಿರುವುದು ಎಂದಿದ್ದಾರೆ.

ಈ ಹಿಂದೆ ಇದೇ ಪತ್ರದ ವಿಚಾರವಾಗಿ ಆದ ಸುದ್ದಿ ಕೂಡ ಇಲ್ಲಿ ಪ್ರಕಟಿಸಲಾಗಿದೆ.

******

ನವದೆಹಲಿ, ಜೂನ್ 19: ಮಾಲೀಕರ ಭೂ ದಾಖಲೆಗಳೊಂದಿಗೆ ಆಧಾರ್ ಜೋಡಣೆ ಮಾಡುವ ಚಿಂತನೆ ನಡೆಸಿದೆ ಕೇಂದ್ರ ಸರಕಾರ. 1950ರಿಂದ ಇಲ್ಲಿವರೆಗಿನ ಎಲ್ಲ ಭೂ ದಾಖಲೆಗಳನ್ನು ಮಾಲೀಕರು ಆಧಾರ್ ಜತೆಗೆ ಜೋಡಣೆ ಮಾಡಬೇಕಾಗುತ್ತದೆ.

1950ರಿಂದ ಇಲ್ಲಿವರೆಗಿನ ಎಲ್ಲ ಭೂ ದಾಖಲೆಗಳನ್ನು ಡಿಜಿಟಲೈಸ್ ಮಾಡುವಂತೆ ಎಲ್ಲ ರಾಜ್ಯಗಳಿಗೂ ಸೂಚನೆ ನೀಡಲಾಗಿದೆ. ಡಿಜಿಟಲೈಸ್ ಆದ ಭೂ ದಾಖಲೆಯ ಜತೆಗೆ ಯಾರಾದರೂ ಆಧಾರ್ ಜೋಡಣೆ ಮಾಡಲಿಲ್ಲ ಅಂದರೆ ಅಂಥವರ ವಿರುದ್ಧ ಬೇನಾಮಿ ವ್ಯವಹಾರ (ನಿಷೇಧ) ತಿದ್ದುಪಡಿ ಕಾಯ್ದೆ ಅಡಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತದೆ.

ಬ್ಯಾಂಕ್ ಖಾತೆಗಳಿಗೆ ಆಧಾರ್ ಕಡ್ಡಾಯ, ಡಿಸೆಂಬರ್ 31 ಕೊನೆಯ ದಿನಬ್ಯಾಂಕ್ ಖಾತೆಗಳಿಗೆ ಆಧಾರ್ ಕಡ್ಡಾಯ, ಡಿಸೆಂಬರ್ 31 ಕೊನೆಯ ದಿನ

Link your land records with Aadhaar, else face action under Benami Act

ಜೂನ್ ಹದಿನೈದರಂದು ಎಲ್ಲ ರಾಜ್ಯ- ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು ಹಾಗೂ ಹೆಚ್ಚುವರಿ ಕಾರ್ಯದರ್ಶಿಗಳಿಗೆ, ದೆಹಲಿಯ ಲೆಫ್ಟಿನೆಂಟ್ ಗವರ್ನರ್, ನೀತಿ ಆಯೋಗದ ಕಾರ್ಯದರ್ಶಿಗೆ ಈ ಬಗ್ಗೆ ಕೇಂದ್ರದಿಂದ ನಿರ್ದೇಶನ ಬಂದಿದೆ. ಎಲ್ಲ ಆಸ್ತ್ತಿಗಳ ಡಿಜಿಟಲೈಸ್ ಆಗುವುದರ ಜತೆಗೆ ಆಧಾರ್ ಜೋಡಣೆ ಕಡ್ಡಾಯವಾಗಿ ಆಗಿದೆಯೇ ಎಂದು ಖಾತ್ರಿ ಪಡಿಸಲು ಸೂಚನೆ ಬಂದಿದೆ.

ಆನ್ ಲೈನ್ ನಲ್ಲಿ ಪ್ಯಾನ್​ಗೆ ಆಧಾರ್ ಜೋಡಿಸುವುದು ಹೇಗೆ?ಆನ್ ಲೈನ್ ನಲ್ಲಿ ಪ್ಯಾನ್​ಗೆ ಆಧಾರ್ ಜೋಡಿಸುವುದು ಹೇಗೆ?

ಎಲ್ಲ ಭೂ ದಾಖಲೆ, ಮ್ಯುಟೇಶನ್, ಮಾರಾಟ ಹಾಗೂ ಖರೀದಿಯ ದಾಖಲೆಗಳು...ಒಟ್ಟಾರೆ 1950ರಿಂದ ಈಚೆಗೆ ಇಲ್ಲಿವರೆಗಿನ ಎಲ್ಲ ಸ್ಥಿರಾಸ್ತಿಗಳು ಅಂದರೆ ಕೃಷಿಭೂಮಿ, ಮನೆ ಇತ್ಯಾದಿ ದಾಖಲೆಗಳನ್ನು ಈ ವರ್ಷದ ಆಗಸ್ಟ್ ಹದಿನಾಲ್ಕರೊಳಗೆ ಆಧಾರ್ ಗೆ ಜೋಡಿಸುವಂತೆ ಗಡುವು ನೀಡಲಾಗಿದೆ.

ಯಾರಾದರೂ ಆಧಾರ್ ಜೋಡಣೆ ಮಾಡಲಿಲ್ಲ ಅಂದರೆ ಅಂಥವರ ವಿರುದ್ಧ ಬೇನಾಮಿ ವ್ಯವಹಾರ (ನಿಷೇಧ) ತಿದ್ದುಪಡಿ ಕಾಯ್ದೆ ಅಡಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು. ಇನ್ನು ಈ ಬಗ್ಗೆ ರಾಜ್ಯ ಸರಕಾರದಿಂದ ಸಲಹೆಗಳಿದ್ದಲ್ಲಿ ನೀಡುವಂತೆ ಕೂಡ ತಿಳಿಸಲಾಗಿದೆ.

English summary
The letter attributed to Cabinet Secretariat on digitalisation of Land records and linking the same to Aadhaar numbers going viral has been deemed fake by the government. Frank Noronha, the Principal Spokesperson of Government of India and Principal Director General of Press Information Bureau said that the letter was 'fake and mischievous'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X