ಕ್ಲಾಸಿನಲ್ಲಿ ಮೊಬೈಲ್ ಬಳಸಿದರೆ ಹೀಗೇ ಆಗೋದು..

Posted By:
Subscribe to Oneindia Kannada
   ಕ್ಲಾಸ್ ನಲ್ಲಿ ನೀವು ಮೊಬೈಲ್ ಉಪಯೋಗಿಸಿದ್ರೆ ಎಚ್ಚರ! | Oneindia Kannada

   ಕಷ್ಟಪಟ್ಟು ತರಗತಿಯಲ್ಲಿ ಪಾಠ ಮಾಡುತ್ತಿರುವ ಶಿಕ್ಷಕನಿಗೆ ವಿದ್ಯಾರ್ಥಿಗಳು ಪಾಠ ಕೇಳುವುದು ಬಿಟ್ಟು ಮೊಬೈಲ್ ನೋಡುತ್ತಾ ಕೂತರೆ ಎಷ್ಟು ಸಿಟ್ಟು ಬರಬೇಡಾ..?

   ತರಗತಿಯಲ್ಲಿ ಮೊಬೈಲ್ ಬಳಸಿದ ಆ ವಿದ್ಯಾರ್ಥಿಯನ್ನು ಶಿಕ್ಷಕ ಏನು ಮಾಡಬಹುದು, ತರಗತಿಯಿಂದ ಹೊರಗೆ ಕಳಿಸಬಹುದು, ಪ್ರಾಂಶುಪಾಲರಿಗೆ ದೂರು ನೀಡಬಹುದು, ಪೋಷಕರಿಗೆ ದೂರು ಕೊಡಬಹುದು ಆದರೆ ಇಲ್ಲೊಬ್ಬ ಶಿಕ್ಷಕ ಇವೆಲ್ಲಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಮೊಬೈಲ್‌ ಅನ್ನೇ ಒಡೆದುಹಾಕಿದ್ದಾನೆ.

   ತರಗತಿಯಲ್ಲಿ ಮೊಬೈಲ್ ಬಳಸುವ ವಿದ್ಯಾರ್ಥಿಗಳನ್ನು ಕಂಡು ರೋಸಿ ಹೋಗಿರುವ ಉಪನ್ಯಾಸಕನೊಬ್ಬ ಮೊಬೈಲ್‌ ಅನ್ನೆ ಬಿಸಾಕಿ ಒಡೆದು ಹಾಕಿದ್ದಾನೆ. ಉಪನ್ಯಾಸಕ ಮೊಬೈಲ್ ಒಡೆದು ಹಾಕಿರುವ ವಿಡಿಯೊ ವೈರಲ್‌ ಆಗಿದ್ದು, ವಿಡಿಯೋದಲ್ಲಿ ಆತನ ಸಿಟ್ಟು ನೋಡಿದರೆಯೇ ಗೊತ್ತಾಗುತ್ತದೆ ಮೊಬೈಲ್ ಹಾವಳಿಯಿಂದ ಉಪನ್ಯಾಸಕ ಎಷ್ಟು ರೋಸಿಹೋಗಿದ್ದಾನೆ ಎಂದು.

   Lecturer break student's smartphone for using it in class

   ತನ್ನ ತರಗತಿಯಲ್ಲಿ ಮೊಬೈಲ್‌ ಬಳಸಿದ ವಿದ್ಯಾರ್ಥಿಗಳ ಮೇಲೆ ರೌಡಿಯಂತೆ ಎರಗುವ ಉಪನ್ಯಾಸಕ ಮೊದಲು ಮೊಬೈಲು ಬಿಸಾಕುವಂತೆ ವಿದ್ಯಾರ್ಥಿಗೆ ಹೇಳುತ್ತಾರೆ. ಆದರೆ ವಿದ್ಯಾರ್ಥಿ ಇದಕ್ಕೆ ಆಗುವುದಿಲ್ಲ ಎಂದಾಗ ತಾನೇ ಮೊಬೈಲ್‌ ಅನ್ನು ಕಸಿದುಕೊಂಡು ನೆಲಕ್ಕೆ ಅಪ್ಪಳಿಸುವಂತೆ ಎಸೆಯುತ್ತಾರೆ.

   ತನ್ನ ದುಬಾರಿ ಮೊಬೈಲ್‌ ಫೋನ್‌ ಹಾಗೆ ನೆಲಕ್ಕೆ ಅಪ್ಪಳಿಸುವದು ಕಂಡ ವಿದ್ಯಾರ್ಥಿ ಹೌಹಾರಿಬಿಟ್ಟಿದ್ದಾನೆ ಪಾಪ. ಅಷ್ಟಕ್ಕೂ ಸಮಾಧಾನವಾಗದ ಆ ಉಪನ್ಯಾಸಕ ಮೊಬೈಲ್‌ ಬಳಸಿದ ವಿದ್ಯಾರ್ಥಿ ಹಾಗೂ ಆತನ ಸಹವರ್ತಿಯನ್ನು ಕರೆದುಕೊಂಡು ತರಗತಿಯಿಂದ ಹೊರ ನಡೆಯುತ್ತಾನೆ. ತರಗತಿಯಿಂದ ಹೊರ ನಡೆಯಬೇಕಾದರೂ ಅಪರಿಮಿತ ಸಿಟ್ಟಲ್ಲಿದ್ದ ಆ ಉಪನ್ಯಾಸಕ ಬಹುಶಃ ಆ ವಿದ್ಯಾರ್ಥಿಗಳನ್ನು ಕಾಲೇಜಿನಿಂದಲೇ ಹೊರ ಹಾಕಿಸಿದರೊ ಏನೊ..?

   ತರಗತಿಗಳಲ್ಲಿ ಮೊಬೈಲ್ ಬಳಸುವುದು ವಿದ್ಯಾರ್ಥಿಗಳಿಗೆ ನಿತ್ಯದ ಗೀಳಾಗಿ ಬಿಟ್ಟಿದೆ. ಕಷ್ಟಪಟ್ಟು ತಯಾರಾಗಿ, ಹೊಸದೊಂದು ವಿಷಯವನ್ನು ವಿದ್ಯಾರ್ಥಿಗಳಿಗೆ ಕಲಿಸಲು ಉತ್ಸಾಹದಿಂದ ಬರುವ ಶಿಕ್ಷಕರಿಗೆ ತಮ್ಮ ಶ್ರಮ ಮೊಬೈಲ್‌ನಿಂದಾಗಿ ಹೊಳೆಯಲ್ಲಿ ಹುಣಸೇ ಹಣ್ಣು ತೊಳೆದಂತಾಗುತ್ತಿರುವುದು ನೋಡಿ ಸಿಟ್ಟು ಬರುವುದು ಸಹಜವೇ ಬಿಡಿ.

   ವಿದ್ಯಾರ್ಥಿಗಳೇ ಈ ವಿಡಿಯೋ ನೋಡಿಯಾದರೂ ಬುದ್ಧಿ ಕಲಿಯಿರಿ, ಇನ್ನು ಮುಂದೆ ತರಗತಿಯಲ್ಲಿ ಮೊಬೈಲ್‌ ಅನ್ನು ಮುಟ್ಟಬೇಡಿ. ಮುಟ್ಟಿ ಮೊಬೈಲ್‌ ಕಳೆದುಕೊಳ್ಳಬೇಡಿ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   In this video a angry lecturer breaks fancy smartphone of a student for using it in classroom. In video lecturer is on full angry mood.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ