Anmol Bishnoi: ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಟೋಯ್ ಸಹೋದರನ ಬಂಧನ: ಕಾರಣವೇನು?

ನವದೆಹಲಿ, ನವೆಂಬರ್ 18: ಬಾಲಿವುಡ್ ನಟ ಸಲ್ಮಾನ್‌ ಖಾನ್‌ಗೆ ಜೀವ ಬೆದರಿಕೆ ಒಡ್ಡಿರುವ, ಕೆಲವು ಹತ್ಯೆ ಪ್ರಕರಣಗಳ ಜವಾಬ್ದಾರಿ ಹೊತ್ತ ಲಾರೆನ್ಸ್ ಬಿಷ್ಣೋಯ್ ಸಿಂಡಿಕೇಟ್ ಮಾಡಿಕೊಂಡಿರುವ ಕುಖ್ಯಾತ ಗ್ಯಾಂಗ್‌ಸ್ಟರ್. ಈ ಖೈದಿಯ ಸಹೋದರ ಅನ್ಮೋಲ್ ಬಿಷ್ಣೋಯ್ ಅವರನ್ನು ಸೋಮವಾರ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಬಂಧಿಸಲಾಗಿದೆ ಎಂದು ತಿಳಿಸಲಾಗಿದೆ.

ಎನ್‌ಡಿಟಿವಿ ಮಾಡಿರುವ ವರದಿ ಪ್ರಕಾರ, ಪಂಜಾಬಿ ಗಾಯಕ ಸಿಂಧು ಮೂಸೆವಾಲಾ ಅವರನ್ನು ಮುಗಿಸಿದ್ದ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ತಿಂಗಳ ಹಿಂದಷ್ಟೇ ಮಹಾರಾಷ್ಟ್ರ ರಾಜ್ಯದಲ್ಲಿ ಮಾಜಿ ಸಚಿವ ಬಾಬಾ ಸಿದ್ದಿಕ್ ಅವರನ್ನು ಹತ್ಯೆಗೈದಿತ್ತು. ಇದರ ಹೊಣೆ ಹೊತ್ತಿಲ್ಲ ಕುಖ್ಯಾತ ಗ್ಯಾಂಗಸ್ಟರ್ ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಬಿಷ್ಣೋಯ್ ಅವರನ್ನು ಬಂಧಿಸಲಾಗಿದೆ.

Lawrence Bishnoi Brother Anmol Bishnoi Detained in US Know reason

ಮುಂಬೈ ನಲ್ಲಿರುವ ನಟ ಸಲ್ಮಾನ್ ಖಾನ್ ಅವರ ಮನೆ ಮೇಲೆ ಗುಂಡಿನ ದಾಳಿ ನಡೆಸಿದ್ದು ತಮ್ಮ ಗ್ಯಾಂಗ್ ಎಂದು ಹೇಳಿಕೊಂಡಿದ್ದ ಬಿಷ್ಣೋಯ್ ಗ್ಯಾಂಗ್ ಜೀವ ಬೆದರಿಕೆ ಒಡ್ಡಿತ್ತು. ಇದೀಗ ಅವರ ಸಹೋದರನನ್ನು ಪೊಲೀಸರು ವಿದೇಶದಲ್ಲಿ ಬಂಧಿಸಿದ್ದಾರೆಂದು ತಿಳಿದು ಬಂದಿದೆ.

ರೆಡ್ ಕಾರ್ನರ್ ನೋಟಿಸ್ ಜಾರಿ

ಸೋಮವಾರ ಬೆಳಗ್ಗೆ ಅನ್ಮೋಲ್ ಬಿಷ್ಣೋಯ್ ಅವರನ್ನು ಯುಎಸ್‌ನಲ್ಲಿ ಬಂಧಿಸಲಾಗಿದೆ. ನವೆಂಬರ್ ತಿಂಗಳ ಪೂರ್ವದಲ್ಲಿ ಮುಂಬೈ ಪೊಲೀಸರು ಅನ್ಮೋಲ್ ಯುಎಸ್‌ನಿಂದ ಮರಳಿ ಕರೆತರಲು ಸಿದ್ಧತೆ ನಡೆಸಿದೆ. ಈ ಹಸ್ತಾಂತರ ಪ್ರಕ್ರಿಯೆಗೆ ಅಗತ್ಯ ಅನುಮತಿ ಪಡೆದುಕೊಂಡಿದೆ. ಅನ್ಮೋಲ್ ಬಂಧನಕ್ಕೆ ಮಹಾರಾಷ್ಟ್ರದ ವಿಶೇಷ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಸಹ ಹೊರಡಿಸಿತ್ತು.

ವಿದೇಶದಲ್ಲಿದ್ದ ಕಾರಣ ಜಾಗತಿಕ ಕಾನೂನು ಜಾರಿ ಸಂಸ್ಥೆ ವತಿಯಿಂದ ಆತನ ವಿರುದ್ಧ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿತ್ತು. ಅದರಂತೆ ಎಲ್ಲ ಸೂಕ್ತ ನಿಯಮಗಳ ಪಾಲನೆ ಜೊತೆಗೆ ಅತ್ಯವಶ್ಯವಾಗಿ ಬೇಕಾಗಿದ್ದ ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್‌ ನನ್ನು ವಶಕ್ಕೆ ಪಡೆಯಲಾಗಿದೆ. ಭಾರತಕ್ಕೆ ಕರೆತರುವ ಕೆಲಸಗಳು ನಡೆಯಲಿವೆ.

ಈ ಅನ್ಮೋಲ್ ಬಿಷ್ಣೋಯ್ ಪಂಜಾಬ್‌ನ ಫಾಜಿಲ್ಕಾ ಮೂಲದವರಾಗಿದ್ದು, ನಕಲಿ ಪಾಸ್‌ಪೋರ್ಟ್‌ನಲ್ಲಿ ಸಹಾಯದಿಂದ ಭಾರತ ಬಿಟ್ಟು ಪರಾರಿಯಾಗಿದ್ದರು. ಈ ಹಿಂದೆ ಕೆಲವು ದಿವಸಗಳ ಕಾಲ ಕೆನಡಾ ದೇಶದಲ್ಲಿದ್ದ. ನಂತರ ರಾಷ್ಟ್ರೀಯ ತನಿಖಾ ಸಂಸ್ಥೆ - ಭಾರತದ ಭಯೋತ್ಪಾದನಾ ವಿರೋಧಿ ಘಟಕ ದಾಖಲಿಸಿದ ಎರಡು ಪ್ರಕರಣಗಳಲ್ಲಿ ಈತ ಬೇಕಾಗಿದ್ದಾನೆ.

ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಈತನನ್ನು ಮೋಸ್ಟ್ ವಾಂಟೆಡ್ ಪಟ್ಟಿಗೆ ಸೇರಿಸಿದೆ. ಸ್ವದೇಶದಿಂದ ವಿದೇಶಕ್ಕೆ ಪಲಾಯಮ ಮಾಡಿದ್ದ ಈತನನ್ನು ಹಿಡಿದು ಕೊಟ್ಟವರಿಗೆ ರೂಪಾಯಿ 10 ಲಕ್ಷ ಬಹುಮಾನ ನೀಡುವುದಾಗಿ ತಿಳಿಸಿದ್ದ. 2022ರಲ್ಲಿ ಸಿದ್ದು ಮೂಸೆವಾಲ ಹತ್ಯೆ ನಂತರ ಬಿಷ್ಣೋಯ್ ಗ್ಯಾಂಗ್ ಹೆಸರು ಹೆಚ್ಚು ಚಾಲ್ತಿಗೆ ಬಂದಿದೆ. ಅದಾದ ಬಳಿಕ ಇತ್ತೀಚೆಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ, ಜೀವ ಬೆದರಿಕೆ, ಬಾಬಾ ಸಿದ್ದಿಕಿ ಹತ್ಯೆಯಿಂದ ಮತ್ತಷ್ಟು ಮುನ್ನೆಲೆಗೆ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+