ಗೂಗಲ್ ಮ್ಯಾಪ್ಸ್‌ಗೆ ಸೆಡ್ಡು ಹೊಡೆದ ಬೆಂಗಳೂರಿನ 'ಲ್ಯಾಟ್‌ಲಾಂಗ್': ಭಾರತದ ವಿಳಾಸ ಪತ್ತೆ ಹೆಚ್ಚುವಲ್ಲಿ 4 ಪಟ್ಟು ಹೆಚ್ಚು ನಿಖರ
ಭಾರತದ ಸ್ವದೇಶಿ ತಂತ್ರಜ್ಞಾನವಾದ ಜಿಯೋಸ್ಪೇಷಿಯಲ್ ಪರಿಸರ ವ್ಯವಸ್ಥೆಗೆ ಸಾಕಷ್ಟು ಉತ್ತೇಜನ ನೀಡುವ ಸಲುವಾಗಿ ಬೆಂಗಳೂರು ಮೂಲದ ನಕ್ಷೆಗಳ ವೇದಿಕೆ ಲ್ಯಾಟ್ಲಾಂಗ್, ಗೃಹ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಪ್ರಗತಿ ಸಾಧಿಸಲಾಗಿದೆ. ದೇಶದಲ್ಲಿ ವಿಳಾಸಗಳಿಗೆ ಮ್ಯಾಪಿಂಗ್ ಮಾಡುವಲ್ಲಿ ಜಿಯೋಕೋಡಿಂಗ್ ಎಪಿಐ ತಾನು Google Maps ಗಿಂತ ನಾಲ್ಕು ಪಟ್ಟು ಹೆಚ್ಚು ನಿಖರವಾಗಿರುವುದಾಗಿ ಘೋಷಿಸಿದೆ.
ಭಾರತದಲ್ಲಿ ವಿಳಾಸಗಳಿಗಾಗಿ ಲ್ಯಾಟ್ಲಾಂಗ್‌ನ ಎಪಿಐ ಈಗಾಗಲೇ Google Maps ಗಿಂತ ದುಪಟ್ಟು ನಿಖರವಾಗಿತ್ತು ಎಂದು 2023ರಲ್ಲೇ ಪರಿಶೀಲಿಸಿದ್ದ ಐಐಟಿ ಕಾನ್ಪುರದ ನ್ಯಾಷನಲ್ ಸೆಂಟರ್ ಫಾರ್ ಜಿಯೋಡೆಸಿ ಕಂಡು ಹಿಡಿದಿತ್ತು. ಅಲ್ಲಿಂದ ಮೂರು ವರ್ಷಗಳಲ್ಲಿ ಕಂಪನಿಯ ಮ್ಯಾಪಿಂಗ್ ನಿಖರತೆ ಪ್ರಮಾಣ ಮತ್ತಷ್ಟು ಹೆಚ್ಚಾಗಿದೆ. ನಗರಗಳ ಒಳಗೆ ಹಾಗೂ ಹೊರಗೆ ಎಪಿಐ ಮ್ಯಾಪ್ ನಿಖರ ಮಾಹಿತಿ ನೀಡುತ್ತಿದೆ. ಬೆಂಗಳೂರಿನ ಕಂಪನಿ ಲ್ಯಾಟ್ಲಾಂಗ್ ತನ್ನ ಜಿಯೋಕೋಡಿಂಗ್ ಎಪಿಐ ಭಾರತದಲ್ಲಿ ಗೂಗಲ್ ನಕ್ಷೆಗಳಿಗಿಂತ ನಾಲ್ಕು ಪಟ್ಟು ಹೆಚ್ಚು ನಿಖರವಾಗಿದೆ ಎಂದು ಹೇಳಿದೆ.

ಜಿಯೋಕೋಡಿಂಗ್ ನಿಖರತೆ ಏಕೆ ಮುಖ್ಯವಾಗಿದೆ?
ವಿಳಾಸಗಳನ್ನು ಭೌಗೋಳಿಕ ನಿರ್ದೇಶಾಂಕಗಳಾಗಿ ಪರಿವರ್ತಿಸುವ ಜಿಯೋಕೋಡಿಂಗ್, ವಿತರಣೆಗಳು ಮತ್ತು ತುರ್ತು ಪ್ರತಿಕ್ರಿಯೆಯಿಂದ ಹಿಡಿದು ಚುನಾವಣೆಗಳು ಮತ್ತು ಇ-ಕಾಮರ್ಸ್ ವರೆಗೆ ನೀಡುವ ಸೇವೆಗಳು ನಿರ್ಣಾಯಕವಾಗಿದೆ. ಜಿಯೋಕೋಡಿಂಗ್ ವಿಳಾಸಗಳು ರಸ್ತೆ ಸಂಖ್ಯೆಗೆ ಬದಲಾಗಿ ಹೆಗ್ಗುರುತನ್ನು ಅವಲಂಬಿಸಿದೆ. ದೇಶದಲ್ಲಿ ಸ್ಥಿರವಾದ ನಿಖರತೆಯನ್ನು ಸಾಧಿಸುವುದು ಒಂದು ಸವಾಲಾಗಿತ್ತು. ದೀರ್ಘಾವಧಿಯ ಖಗೋಳ ಮಾಪನದಿಂದ ಸ್ಫೂರ್ತಿ ಪಡೆದು, ನಿಖರತೆಯ ಬಗೆಗಿನ ಹೊಸ ವಿಧಾನ ಅಳವಡಿಸಿಕೊಳ್ಳುವ ಮರು ಚಿಂತನೆ ಮಾಡಿದೆ ಎಂದು ಕಂಪನಿ ಹೇಳಿದೆ.
ಹೊಸ ಮಾನದಂಡ
ಕೇವಲ ನಗರ ಮಾತ್ರವಲ್ಲದೇ ಲ್ಯಾಟ್ಲಾಂಗ್‌ನ ಕಂಪನಿಯು ಎಪಿಐ ವ್ಯವಸ್ಥೆಯು ಗ್ರಾಮೀಣ ವಿಳಾಸಗಳನ್ನು ಒಳಗೊಳ್ಳಬೇಕೆಂದು ಹೆಚ್ಚಿನ ಗಮನ ಹರಿಸಲಾಗುತ್ತಿದೆ. ದೊಡ್ಡ ಮತ್ತು ಹೆಚ್ಚು ವೈವಿಧ್ಯಮಯ ಡೇಟಾಸೆಟ್‌ನಲ್ಲಿ ಪರೀಕ್ಷಿಸಲಾಗುತ್ತಿದೆ. ಲ್ಯಾಟ್ಲಾಂಗ್‌ನ ಸರಾಸರಿ ಜಿಯೋಕೋಡಿಂಗ್ ದೋಷವು 297 ಮೀಟರ್‌ಗಳಾಗಿವೆ. ಅದನ್ನು ಗೂಗಲ್ ನಕ್ಷೆಗೆ ಹೋಲಿಸಿದರೆ 1,280 ಮೀಟರ್‌ಗಳಷ್ಟಿದೆ. 2023ರ ಡೇಟಾಸೆಟ್‌ನಲ್ಲಿ ಲ್ಯಾಟ್ಲಾಂಗ್ ಸರಾಸರಿ 231 ಮೀಟರ್ ದೋಷ ದಾಖಲಿಸಿದರೆ, ಗೂಗಲ್ ನಕ್ಷೆಗಳಲ್ಲಿ 1,067 ಮೀಟರ್ ತೋರಿಸಿದೆ. ಈ ಮೂಲಕ ಗೂಗಲ್ ಗಿಂತ ಎಪಿಐ ಹೆಚ್ಚು ನಿಖರ ಎಂಬುದಕ್ಕೆ ಸಾಕ್ಷ್ಯ ಸಿಕ್ಕಂತಾಗಿದೆ. ಬಹುತೇಕ ಸ್ಥಳ ನಿಖರತೆಯ ಪ್ರಮುಖ ಮಿತಿಯಾದ ಶೇಕಡ 58 ರಷ್ಟು ಪರೀಕ್ಷಾ ವಿಳಾಸಗಳನ್ನು 100 ಮೀಟರ್‌ಗಳ ಒಳಗೆ ಪರಿಹರಿಸಲಾಗಿದೆ ಎಂದು ಲ್ಯಾಟ್ಲಾಂಗ್ ಹೇಳಿದರು.
ಬದಲಾವಣೆ ಆಗಿದ್ದೇನು?
ಲ್ಯಾಟ್ಲಾಂಗ್ ಕಂಪನಿಯ ಎಂಜಿನಿಯರಿಂಗ್ ತಂಡವು ವ್ಯವಸ್ಥೆಯ ಪ್ರಮುಖ ಭಾಗಗಳನ್ನು ಪುನರ್ ನಿರ್ಮಿಸಿದೆ. ಈ ಮೂಲಕ ಹಳೆಯ ಮಾದರಿಗಳು ಕೆಲವು ವಿಳಾಸಗಳನ್ನು ಮರು ಹೊಂದಿಸಲು ಆರಂಭಿಸಿದೆ. ಅದರಲ್ಲಿ ಮೂರಿವೆ, ಮೊದಲನೆಯದಾಗಿ, ಕಂಪನಿಯು ವಿಳಾಸ ಪಾರ್ಸಿಂಗ್ ಮತ್ತು ಟೋಕನೈಸೇಶನ್ ವಿಧಾನವನ್ನು ಪರಿಷ್ಕರಿಸಿದೆ. ಸರಪಳಿಗಳ ಮೂಲಕ ಗರಿಷ್ಠ ಪ್ರದೇಶ ಹೊಂದಾಣಿಕೆಗಳ ಮೇಲೆ ಕೇಂದ್ರೀಕರಿಸುವ ವಿಧಾನಕ್ಕೆ ಬದಲಾಗಿದೆ. ಅಪೂರ್ಣ ಅಥವಾ ಸಡಿಲವಾಗಿ ರಚನಾತ್ಮಕ ವಿಳಾಸಗಳನ್ನು ಉತ್ತಮವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ.
ಎರಡನೆಯದಾಗಿ, ವಿಳಾಸ ಹುಡುಕುವಾಗ ಅಸ್ಪಷ್ಟ ವಿಳಾಸ ಗಡಿಗಳ ನಿರ್ವಹಣೆ, ಪತ್ತೆಗಾಗಿ ಅಲ್ಗಾರಿದಮ್ ಅನ್ನು ಮರು ವಿನ್ಯಾಸಗೊಳಿಸುತ್ತದೆ. ಹಲವಾರು ಸಂದರ್ಭಗಳಲ್ಲಿ ನೈಜ ಸ್ಥಳವು ಅಧಿಕೃತ ಮಿತಿಗಳಿಂದ ಹೊರಗಿದ್ದರೂ ಸಹ, ಭಾರತೀಯ ವಿಳಾಸಗಳು ಅಂಚೆ ಸ್ಪಷ್ಟತೆಗಾಗಿ ಪ್ರಸಿದ್ಧ ಸ್ಥಳಗಳು ಅಥವಾ ನಗರಗಳ ಮಾಹಿತಿ ನೀಡುತ್ತದೆ. ಅವುಗಳ ಬಗ್ಗೆ ನಿಖರ ಅಂಶಗಳನ್ನು ಗುರುತಿಸುತ್ತದೆ. ಲ್ಯಾಟ್ಲಾಂಗ್‌ನ ಈ ವ್ಯವಸ್ಥೆಯು ಈ ಅಸ್ಪಷ್ಟತೆಯನ್ನೂ ಸಹ ಸ್ಪಷ್ಟವಾಗಿ ತೋರಿಸುತ್ತದೆ. ಪೆರಿ ಅರ್ಬನ್ ಮತ್ತು ವೇಗವಾಗಿ ಬೆಳೆಯುತ್ತಿರುವ ಪ್ರದೇಶಗಳಲ್ಲಿ ಇದರ ಬಳಿಕೆ ಉತ್ತಮ ಫಲಿತಾಂಶ ಒದಗಿಸುತ್ತದೆ ಎಂದು ಕಂಪನಿ ಮುಖ್ಯಸ್ಥರು ತಿಳಿಸಿದ್ದಾರೆ.
ಮೂರನೆಯದ್ದು, ಕಂಪನಿಯು ತನ್ನ ಮಾಹಿತಿಯನ್ನು ವ್ಯಾಪಕವಾಗಿ ವಿಸ್ತರಿಸಿದೆ. ಲ್ಯಾಟ್ಲಾಂಗ್ ತನ್ನ ಆಸಕ್ತಿಯ ಅಂಶಗಳ ಡೇಟಾಬೇಸ್ ಅನ್ನು ದ್ವಿಗುಣಗೊಳಿಸಿದೆ. ದೇಶದ ಸುಮಾರು 6.6 ಲಕ್ಷ ಹಳ್ಳಿಗಳನ್ನು ಮತ್ತು ಸಾವಿರಾರು ನಗರ ಸ್ಥಳೀಯ ಸಂಸ್ಥೆಗಳನ್ನು ಒಳಗೊಂಡ ಸೂಕ್ಷ್ಮ ಭೌಗೋಳಿಕ ಮಾಹಿತಿಯನ್ನು ಒಳಗೊಂಡಿದೆ. ಹೀಗಾಗಿ ಮಹಾನಗರವೇ ಆಗಲಿ, ಹಳ್ಳಿ, ಪಟ್ಟಣಗಳೇ ಆಗಲಿ ಆ ಸ್ಥಳಗಳ ನಿಖರ ಮಾಹಿತಿಯನ್ನು ಜಿಯೋಕೋಡಿಂಗ್ ಒದಗಿಸುತ್ತದೆ.
ಒಂದು ವಿಭಿನ್ನ ವಿಧಾನ
ಲ್ಯಾಟ್ಲಾಂಗ್‌ನ ಜಿಯೋಕೋಡಿಂಗ್ ಅನ್ನು ಪ್ರಾದೇಶಿಕ ಹೊಂದಾಣಿಕೆಯ ಸಮಸ್ಯೆಯನ್ನು ಪರಿಗಣಿಸುತ್ತದೆ. ವಿಳಾಸದಲ್ಲಿನ ಪದಗಳನ್ನು ಮರು ಹೊಂದಿಸುವುದರಿಂದ ಅಂತಿಮ ಸ್ಥಳ ಔಟ್‌ಪುಟ್ ಬದಲಾಗಬಾರದು ಎಂಬುದು ಕಂಪನಿಯ ವಾದವಾಗಿದೆ. ಹುಡುಕಾಟ ಆರಂಭವದ ಬಳಿಕ ವ್ಯವಸ್ಥೆಗಳಲ್ಲಿ ಹೆಚ್ಚಾಗಿ ಇಂತಿಷ್ಟು ಮಿತಿ ಕಂಡು ಬರುತ್ತದೆ. ಹೀಗಾಗಿ ಔಟ್‌ಪುಟ್ ಬದಲಾಗದಂತೆ ಎಚ್ಚರಿಕೆ ವಹಿಸಿದೆ.
ಲ್ಯಾಟ್ಲಾಂಗ್‌ನ ಅತಿದೊಡ್ಡ ಉದ್ಯಮ ಬಳಕೆದಾರರಲ್ಲಿ ಒಂದಾಗಿದೆ. ಇದರ ಪ್ರಚಾರ ಸಂವಹನಕ್ಕಾಗಿ ಎಪಿಐ ಹೈಪರ್ ಲೋಕಲ್ ಟಾರ್ಗೆಟಿಂಗ್ ಅನ್ನು ಆಕ್ಟಿವ್ ಮಾಡಿದ್ದೇವೆ ಎಂದು ವರಾಹೆ ಅನಾಲಿಟಿಕ್ಸ್‌ನ ಹಿರಿಯ ಉಪಾಧ್ಯಕ್ಷ ಶ್ರೇಯಸ್ ಭಾರದ್ವಾಜ್ ಹೇಳಿದರು. ಪ್ರಮಾಣದ ಆಧಾರದಲ್ಲಿ ಲ್ಯಾಟ್ಲಾಂಗ್ ಪ್ರಗತಿಯು ಗಣನೀಯವಾಗಿ ಹೆಚ್ಚಾಗಿದೆ. ಕಂಪನಿಯು ದಕ್ಷಿಣ ಬೆಂಗಳೂರಿನಲ್ಲಿ ನೆಲೆಸಿರುವ 30 ಸದಸ್ಯರ ತಂಡದೊಂದಿಗೆ ಕಾರ್ಯ ನಿರ್ವಹಿಸುತ್ತದೆ, ಇದು ಹೆಚ್ಚು ಸಂಪನ್ಮೂಲಗಳನ್ನು ಹೊಂದಿರುವ ಜಾಗತಿಕ ವೇದಿಕೆಗಳಿಗೆ ಪೈಪೋಟಿ ನೀಡಬಲ್ಲ ಸಾಮರ್ಥ್ಯ ಹೊಂದಿದೆ.
ಕಂಪನಿಯು ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿನ ತನ್ನ ಹೂಡಿಕೆಯು ವೆಚ್ಚ-ಪರಿಣಾಮಕಾರಿ ಪರಿಹಾರಗಳ ಜೊತೆಗೆ ನಿಖರತೆಯನ್ನು ಸುಧಾರಿಸುವ ಕೆಲಸ ಮುಂದುವರಿಸಲಿದೆ ಎಂದು ಲ್ಯಾಟ್ಲಾಂಗ್ ಸಂಸ್ಥೆ ಹೇಳಿಕೊಂಡಿದೆ.
-
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
Piped Gas: ಬೆಂಗಳೂರಿಗರಿಗೆ ತಲುಪದ ಪೈಪ್ಡ್ ಗ್ಯಾಸ್: ಮಹತ್ವಾಕಾಂಕ್ಷಿ ಯೋಜನೆಗೆ ವಿಘ್ನಗಳ ಸರಮಾಲೆ -
Gold Rate Today: ಬಂಗಾರ ಪ್ರಿಯರಿಗೆ ಸಿಹಿಸುದ್ದಿ: ಇಂದೂ ಇಳಿಕೆ ಕಂಡ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರಗಳು ಹೀಗಿವೆ -
ಎಲೆಕ್ಷನ್ ಇವತ್ತೇ ನಡೆದರೆ ತಮಿಳುನಾಡು, ಕೇರಳಂ, ಪಶ್ಚಿಮ ಬಂಗಾಳದಲ್ಲಿ ಯಾರಿಗೆ ಗೆಲುವು? ಸಮೀಕ್ಷೆ ನೀಡಿದ ಮಾಹಿತಿ ಇಲ್ಲಿದೆ -
ಟೀಂ ಇಂಡಿಯಾ ಕ್ರಿಕೆಟರ್ ಕುಲದೀಪ್ ಯಾದವ್ ಕೈಹಿಡಿದ ವಂಶಿಕಾ ಚಡ್ಡಾ ಯಾರು? -
Bengaluru: 1 ತಿಂಗಳು ಬದುಕೋಕೆ ಇಷ್ಟೊಂದು ಖರ್ಚಾಗುತ್ತಾ? ಯುವತಿಯ ಪೋಸ್ಟ್ ಕಂಡು ಬೆಚ್ಚಿಬಿದ್ದ ನೆಟ್ಟಿಗರು -
Amala Paul: ಡೇಟಿಂಗ್ನಲ್ಲೇ ಗರ್ಭಿಣಿಯಾದೆ, ಆತುರದಲ್ಲಿ ಎರಡನೇ ಮದುವೆ ಆಯ್ತು: ಹೆಬ್ಬುಲಿ ನಟಿ ಅಮಲಾ ಪೌಲ್ -
Oscars 2026: ಮೈಕಲ್ ಜೋರ್ಡಾನ್ ಅತ್ಯುತ್ತಮ ನಟ, ಜೆಸ್ಸಿ ಬಕ್ಲಿ ಅತ್ಯುತ್ತಮ ನಟಿ: ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ












Click it and Unblock the Notifications