Get Updates
Get notified of breaking news, exclusive insights, and must-see stories!

ಇಂದು ಭೂಮಿ ಸಮೀಪ ಹಾದು ಹೋಗಲಿದೆ ಶತಮಾನದ ದೊಡ್ಡ 'ಕ್ಷುದ್ರಗ್ರಹ'

ಮಿಯಾಮಿ, ಸೆಪ್ಟೆಂಬರ್ 1: ಇಂದು ಭೂಮಿಯ ಸಮೀಪದಿಂದ ಶತಮಾನ ಅತ್ಯಂತ ದೊಡ್ಡ ಕ್ಷುದ್ರಗ್ರಹ ಹಾದು ಹೋಗಲಿದೆ. 70 ಲಕ್ಷ ಕಿಲೋ ಮೀಟರ್ ದೂರದಲ್ಲಿ ಈ ಕ್ಷುದ್ರಗ್ರಹ ಹಾದುಹೋಗಲಿದೆ ಎಂದು ನಾಸಾ ತಿಳಿಸಿದೆ.

ಉಪಗ್ರಹ ಹಾದು ಹೋಗುವುದರಿಂದ ಭೂಮಿಗೆ ಯಾವ ಸಮಸ್ಯೆಯೂ ಇಲ್ಲ ಎಂದೂ ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಖಚಿತಪಡಿಸಿದೆ.

 Largest asteroid in a century, to pass by Earth at a distance of 70 lakh km today

1981ರಲ್ಲಿ ಈ ಕ್ಷುದ್ರಗ್ರಹವನ್ನು ಪತ್ತೆಹಚ್ಚಲಾಗಿತ್ತು. ಇದಕ್ಕೆ ಫ್ಲೋರೆನ್ಸ್ ಎಂದು ಹೆಸರಿಡಲಾಗಿದೆ. ಈ ಕ್ಷುದ್ರ ಗ್ರಹ 4.4 ಕಿಲೋ ಮೀಟರ್ ಅಗಲವಿದೆ. ಈಜಿಪ್ಟ್ ನ 30 ಪಿರಮಿಡ್ ಗಳಷ್ಟು ತೂಕವನ್ನು ಇದು ಹೊಂದಿದೆ.

ಹಲವು ಕ್ಷುದ್ರಗ್ರಹಗಳು ಫ್ಲೋರೆನ್ಸ್ ಗಿಂತ ಭೂಮಿಗೆ ಸಮೀಪದಲ್ಲಿ ಹಾದು ಹೋಗಿವೆ. ಆದರೆ ಅವ್ಯಾವುವೂ ಫ್ಲೋರೆನ್ಸ್ ನಷ್ಟು ದೊಡ್ಡದಲ್ಲ ಎಂದು ನಾಸಾ ತಜ್ಞರು ವಿಶ್ಲೇಷಿಸಿದ್ದಾರೆ.

ಈ ಕ್ಷುದ್ರಗ್ರಹವನ್ನು ಕ್ಯಾಲಿಫೋರ್ನಿಯಾ ಮತ್ತು ಪೋರ್ಟೋರಿಕಾದಲ್ಲಿರುವ ರಾಡಾರ್ ಗಳ ಮೂಲಕ ಅಧ್ಯಯನ ನಡೆಸಲು ವಿಜ್ಞಾನಿಗಳು ಸಿದ್ದರಾಗಿದ್ದಾರೆ.

1890ರಲ್ಲಿ ಇದೇ ರೀತಿ ಭೂಮಿ ಸಮೀಪ ಫ್ಲೋರೆನ್ಸ್ ಹಾದು ಹೋಗಿತ್ತು. ಇನ್ನು 2500 ರವರೆಗೆ ಫ್ಲೋರೆನ್ಸ್ ಈ ರೀತಿ ಸಮೀಪದಲ್ಲಿ ಹಾದುಹೋಗುವುದಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+