ಬಾಲಿವುಡ್ ಸಿನಿಮಾದಲ್ಲಿ ನಟಿಸಿದ ಲಾಲು ಪ್ರಸಾದ್ ಯಾದವ್ ಪುತ್ರ

ಮುಂಬೈ, ಜೂನ್ 27: ಬಿಹಾರದ ವರ್ಣ ರಂಜಿತ ರಾಜಕಾರಣಿ ಲಾಲು ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಯಾದವ್ ಅವರೀಗ ತೆರೆಯ ಮೇಲೆ ಬಂದು ಜನರನ್ನು ರಂಜಿಸಲಿದ್ದಾರೆ. ಬಿಹಾರದ ಮಾಜಿ ಆರೋಗ್ಯ ಸಚಿವರೂ ಆಗಿರುವ 29 ವರ್ಷದ ತೇಜ್ ಪ್ರತಾಪ್ ಹಿಂದಿ ಸಿನಿಮಾದಲ್ಲಿ ನಟಿಸಿದ್ದಾರೆ.

'ರುದ್ರ: ದಿ ಅವತಾರ್' ಎಂಬ ಸಿನಿಮಾದಲ್ಲಿ ತೇಜ್ ಪ್ರತಾಪ್ ನಟಿಸಿದ್ದು, ಇದರ ಪೋಸ್ಟರ್ ಅನ್ನು ಅವರು ತಮ್ಮ ಟ್ಟಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ನೀಲಿ ವರ್ಣದ ಈ ಪೋಸ್ಟರ್ ನಲ್ಲಿ ತೇಜ್ ಪ್ರತಾಪ್ ಯಾದವ್ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಮಿಂಚುತ್ತಿದ್ದಾರೆ.

ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ ಎಂಬುದನ್ನು ಪೋಸ್ಟರ್ ಹೇಳುತ್ತಿದೆ. ಈ ಹಿಂದೆ 2016ರಲ್ಲಿ ಭೋಜ್ಪುರಿ ಸಿನಿಮಾ 'ಅಪಹರಣ್ ಉದ್ಯೋಗ್'ನಲ್ಲಿ ಅವರು ಮುಖ್ಯಮಂತ್ರಿಯ ಪಾತ್ರವನ್ನು ನಿಭಾಯಿಸಿದ್ದರು. ಇದು ಅವರ ಮೊದಲ ಹಿಂದಿ ಸಿನಿಮಾವಾಗಿದೆ.

 Lalu’s son Tej Pratap Yadav to make his debut in Bollywood

ಕಳೆದ ತಿಂಗಳಷ್ಟೇ ಆರ್.ಜೆ.ಡಿ ಯ ಜನಪ್ರತಿನಿಧಿಯೊಬ್ಬರ ಮಗಳನ್ನು ತೇಜ್ ಪ್ರತಾಪ್ ಯಾದವ್ ಮದುವೆಯಾಗಿದ್ದರು. ಅವರ ತಮ್ಮ ತೇಜಸ್ವಿ ಯಾದವ್ ಬಿಹಾರ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+