ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ಮೋದಿಗೆ ಲಾಲೂ ಒಡ್ದಿದ ಅಪರೂಪದ ಚಾಲೆಂಜ್

|
Google Oneindia Kannada News

ಪಾಟ್ನಾ, ಅ 27: ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ಆರ್ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್, ಪ್ರಧಾನಿ ನರೇಂದ್ರ ಮೋದಿಗೆ ಅಪರೂಪದ ಚಾಲೆಂಜ್ ಒಂದನ್ನು ಒಡ್ಡಿದ್ದಾರೆ.

ಮೂರನೇ ಹಂತದ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೇ, ಮೂರು ಪ್ರಮುಖ ಪಕ್ಷಗಳ ಆರೋಪ, ಪ್ರತ್ಯಾರೋಪ, ಟೀಕಾ ಪ್ರಹಾರ ತೀವ್ರ ಸ್ವರೂಪ ಪಡೆಯುತ್ತಿದೆ.

ಅದರಂತೇ, ನನ್ನ ಜೊತೆ ಇಂಗ್ಲಿಷ್ ನಲ್ಲಿ ಚರ್ಚೆಗ ಬನ್ನಿ ನೋಡೋಣ. ದೇಶದ ಜ್ವಲಂತ ಸಮಸ್ಯೆಯ ಬಗ್ಗೆ ಬನ್ನಿ ಇಂಗ್ಲಿಷ್ ನಲ್ಲಿ ಚರ್ಚಿಸೋಣ ಎಂದು ಪ್ರಧಾನಿಗೆ ಲಾಲೂ ಪ್ರಸಾದ್ ಯಾದವ್ ಚಾಲೆಂಜ್ ಎಸೆದಿದ್ದಾರೆ. (ನಿತೀಶ್, ಲಾಲೂ ಜೋಡಿಯನ್ನು ಬೆಂಡೆತ್ತಿದ ಮೋದಿ)

ಇಂಗ್ಲಿಷ್ ನಲ್ಲಿ ಚರ್ಚೆ ಅಸಾಧ್ಯವೆಂದಾದರೆ ಹಿಂದಿಯಲ್ಲಾದರೂ ಚರ್ಚೆಗೆ ಬನ್ನಿ ಎಂದು ಮೋದಿಗೆ ಚಾಲೆಂಜ್ ಮಾಡುತ್ತಿದ್ದೇನೆ. ಆದರೆ, ಮೋದಿ ಚರ್ಚೆಗೆ ಬರಲು ಹಿಂದೇಟು ಹಾಕುವ ಸಾಧ್ಯತೆಯಿದೆ ಎನ್ನುವ ಭಯ ನನ್ನನ್ನು ಕಾಡುತ್ತಿದೆ ಎಂದು ಲಾಲೂ ಪ್ರಸಾದ್ ಯಾದವ್ ಟ್ವೀಟ್ ಮಾಡಿದ್ದಾರೆ.

ಮಾಧ್ಯಮಗಳಿಗೆ ತಾನು ಹಿಂದೆ ರೈಲ್ವೆ ಸಚಿವನಾಗಿದ್ದ ಸಂದರ್ಭದಲ್ಲಿ ಮತ್ತು ಇದಾದ ನಂತರ ಕೆಲವು ಸಂದರ್ಭದಲ್ಲಿ ನೀಡಿದ್ದ ಇಂಗ್ಲಿಷ್ ಚರ್ಚೆಯ ಕ್ಲಿಪ್ ಅನ್ನು ಒಟ್ಟುಮಾಡಿಸಿದ ವಿಡಿಯೋವನ್ನು ಕೂಡಾ ಲಾಲೂ ಬಿಡುಗಡೆ ಮಾಡಿದ್ದಾರೆ. ಮುಂದೆ ಓದಿ..

ಇಂಗ್ಲಿಷ್ ನಲ್ಲಿ ಚರ್ಚೆ

ನಿತೀಶ್ ಕುಮಾರ್ ಮಂತ್ರವಾದಿಯನ್ನು ಭೇಟಿ ಮಾಡಿದ ವಿಡಿಯೋ ವೈರಲ್ ಆಗುತ್ತಿದ್ದಂತೇ, ಲಾಲೂ ಮೋದಿಗೆ ಇಂಗ್ಲಿಷ್ ನಲ್ಲಿ ಚರ್ಚೆಗೆ ಬನ್ನಿ ಎನ್ನುವ ಮಿಮಿಕ್ರಿ ಮಿಶ್ರಿತ ವಿಡಿಯೋ ಬಿಡುಗಡೆ ಮಾಡಿ, ಲಾಲೂ ಟ್ವೀಟ್ ಮಾಡಿದ್ದಾರೆ.

ಮೋದಿಗೆ ತಿರುಗೇಟು

ಮೋದಿಗೆ ತಿರುಗೇಟು

ಬಿಹಾರ್ ಷರೀಫ್ ನಲ್ಲಿ ಭಾನುವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಲಾಲೂ ಪ್ರಸಾದ್ ಯಾದವ್ ಮಕ್ಕಳಿಗೆ 1,25,000 ಕೋಟಿ ರೂಪಾಯಿ ಬರೆಯೋದು ಹೇಗೆ ಎನ್ನುವುದು ತಿಳಿದಿದೆಯಾ ಎಂದು ಮೋದಿ ಲೇವಡಿ ಮಾಡಿದ್ದರು. ಇದಾದ ಕೆಲವೇ ಗಂಟೆಯಲ್ಲಿ ಲಾಲೂ ಇಂಗ್ಲಿಷ್ ನಲ್ಲಿ ಚರ್ಚೆಗೆ ಬನ್ನಿ ಎಂದು ಮೋದಿಗೆ ಪಂಥಾಹ್ವಾನ ನೀಡಿದ್ದಾರೆ.

ಮಿಮಿಕ್ರಿ ಮಿಶ್ರಿತ ವಿಡಿಯೋ

ಮಿಮಿಕ್ರಿ ಮಿಶ್ರಿತ ವಿಡಿಯೋ

ಮೋದಿಗೆ ಇಂಗ್ಲಿಷ್ ನಲ್ಲಿ ಚರ್ಚೆಗೆ ಬನ್ನಿ ಎನ್ನುವ ಮಿಮಿಕ್ರಿ ಮಿಶ್ರಿತ ವಿಡಿಯೋವನ್ನು ಲಾಲೂ ಬಿಡುಗಡೆ ಮಾಡಿದ್ದಾರೆ. ಬಿಹಾರ ಅಸೆಂಬ್ಲಿಗೆ ಚುನಾವಣೆಯ ದಿನಾಂಕ ಘೋಷಣೆಯಾದ ಸಂದರ್ಭದಲ್ಲೂ ಮೋದಿಯ ಅಚ್ಚೇದಿನ್ ಬಗ್ಗೆ ಮೋದಿ ಶೈಲಿಯಲ್ಲೇ ಲಾಲೂ ಮಿಮಿಕ್ರಿ ಮಾಡಿದ್ದನ್ನು ಸ್ಮರಿಸಿಕೊಳ್ಳಬಹುದು.

ಲಾಲೂ ವೈರಸ್

ಲಾಲೂ ವೈರಸ್

ನಿತೀಶ್ ಕುಮಾರ್ ಜನತೆಗೆ ಕಂಪ್ಯೂಟರ್ ನೀಡುತ್ತೇನೆ ಎಂದು ವಚನ ನೀಡಿದ್ದರು. ಆದರೆ ಬಿಹಾರದಲ್ಲಿ ವಿದ್ಯುತ್ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಇದರ ಜೊತೆ ಲಾಲೂ ಎನ್ನುವ 'ವೈರಸ್' ಕಂಪ್ಯೂಟರ್ ಗೆ ತೊಂದರೆ ಕೊಡಬಹುದು ಎಂದು ಮೋದಿ ಅಣಕವಾಡಿದ್ದರು.

ಲಾಲೂ ದೊಡ್ಡ ಮಾಂತ್ರಿಕ

ಲಾಲೂ ದೊಡ್ಡ ಮಾಂತ್ರಿಕ

ಲಾಲೂ ಪ್ರಸಾದ್ ಯಾದವ್ ದೊಡ್ಡ ಮಾಂತ್ರಿಕ, ಅವರ ಪಕ್ಷ ಆರ್ಜೆಡಿಯನ್ನು 'ರಾಷ್ಟ್ರೀಯ ಜಾಡೂ ತೋನಾ ಪಾರ್ಟಿ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಪ್ರಧಾನಿ ಮೋದಿ ಕೂಡಾ ಇಂಗ್ಲಿಷ್ ಗಿಂತ ಹಿಂದಿಯಲ್ಲಿ ಭಾಷಣ ಮಾಡುವುದಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದೂ ಅಷ್ಟೇ ಸಹಜ.

ಪ್ರಧಾನಿ ಮೋದಿಗೆ ಲಾಲೂ ಒಡ್ದಿದ ಅಪರೂಪದ ಚಾಲೆಂಜ್

ಹಿಂದೆ ರೈಲ್ವೆ ಸಚಿವನಾಗಿದ್ದ ಸಂದರ್ಭದಲ್ಲಿ ಮತ್ತು ಇದಾದ ನಂತರ ಕೆಲವು ಸಂದರ್ಭದಲ್ಲಿ ಲಾಲೂ ನೀಡಿದ್ದ ಇಂಗ್ಲಿಷ್ ಸಂದರ್ಶನದ ಕ್ಲಿಪ್ಪಿಂಗ್ ವಿಡಿಯೋ

English summary
RJD chief Lalu Prasad Yadav has piled gimmickry by openly challenged Prime Minister Narendra Modi to a debate in English on "burning issues".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X