ಜೆಪಿ ಹೆಸರಿನ ಯೋಜನೆಯಲ್ಲಿ ಲಾಲೂಗೆ ತಿಂಗಳಿಗೆ 10 ಸಾವಿರ ಪಿಂಚಣಿ

Posted By:
Subscribe to Oneindia Kannada

ಪಾಟ್ನಾ, ಜನವರಿ 11: ರಾಷ್ಟ್ರೀಯ ಜನತಾ ದಳದ ಅಧ್ಯಕ್ಷ ಲಾಲೂ ಪ್ರಸಾದ್ ಯಾದವ್ ಗೆ ಜೆಪಿ ಸೇನಾನಿ ಸಮ್ಮಾನ್ ಪಿಂಚಣಿ 10 ಸಾವಿರ ರುಪಾಯಿ ದೊರೆಯಲಿದೆ. ಅದನ್ನು ಪಡೆಯಲು ಅವರು ಅರ್ಹರು ಎಂದು ಘೋಷಣೆ ಮಾಡಲಾಗಿದೆ. ಲಾಲೂ ಅರ್ಜಿಯನ್ನು ಮನ್ಯ ಮಾಡಲಾಗಿದ್ದು, ಜೆಪಿ ಸೇನಾನಿ ಸಮ್ಮಾನ್ ಪಿಂಚಣಿ ಯೋಜನೆ ಅಡಿ ತಿಂಗಳಿಗೆ ಹತ್ತು ಸಾವಿರ ದೊರೆಯಲಿದೆ.

ಈ ವಿಚಾರವನ್ನು ಬಿಹಾರ ರಾಜ್ಯದ ಗೃಹ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಜಯಪ್ರಕಾಶ್ ನಾರಾಯಣ್ (ಜೆಪಿ) 1974ರಲ್ಲಿ ಸಂಪೂರ್ಣ ಕ್ರಾಂತಿ ಘೋಷಣೆ ಮಾಡಿದಾಗ ಲಾಲೂ ವಿದ್ಯಾರ್ಥಿ ನಾಯಕರಾಗಿದ್ದರು. ಆ ಹೋರಾಟದಲ್ಲಿ ಪಾಲ್ಗೊಂಡು ಜೈಲು ಕೂಡ ಸೇರಿದ್ದರು. 2015ರಲ್ಲಿ ತಿದ್ದುಪಡಿಯಾಗಿ ಜಾರಿಗೆ ತಂದ ಜೆಪಿ ಸೇನಾನಿ ಸಮ್ಮಾನ್ ಪಿಂಚಣಿ ಯೋಜನೆ ಅಡಿ ಲಾಲೂ ಅರ್ಹರಾಗಿದ್ದಾರೆ.

Lalu Prasad to get 10,000 monthly JP Senani Samman Pension

ಈ ಯೋಜನೆ ಪ್ರಕಾರ, ಆ ಹೋರಾಟದಲ್ಲಿ ಭಾಗವಹಿಸಿ ಒಂದರಿಂದ ಆರು ತಿಂಗಳು ಜೈಲಿನಲ್ಲಿ ಇದ್ದವರಿಗೆ ಐದು ಸಾವಿರ ಹಾಗೂ ಆರು ತಿಂಗಳು ಮೇಲ್ಪಟ್ಟು ಜೈಲು ವಾಸ ಅನುಭವಿಸಿದವರಿಗೆ ಹತ್ತು ಸಾವಿರ ಪ್ರತಿ ತಿಂಗಳು ಪಿಂಚಣಿ ದೊರೆಯುತ್ತದೆ. ಲಾಲೂ ಅವರು ಆರು ತಿಂಗಳಿಗಿಂತ ಹೆಚ್ಚಿನ ಜೈಲುವಾಸ ಅನುಭವಿಸಿದ್ದರಿಂದ ಅವರಿಗೆ ಹತ್ತು ಸಾವಿರ ಪಿಂಚಣಿ ದೊರೆಯಲಿದೆ.

ಜೆಪಿ ಅನುಯಾಯಿಯಾಗಿದ್ದ ನಿತೀಶ್ ಕುಮಾರ್, ತಾವು ಮುಖ್ಯಮಂತ್ರಿಯಾಗಿದ್ದ ಮೊದಲ ಅವಧಿಯಲ್ಲಿ ಅಂದರೆ 2009ರಲ್ಲಿ ಈ ಯೋಜನೆ ಜಾರಿಗೆ ತಂದಿದ್ದರು. 3,100 ಮಂದಿ ಈ ಯೋಜನೆ ಅಡಿಯಲ್ಲಿ ಪಿಂಚಣಿ ಪಡೆಯುತ್ತಿದ್ದಾರೆ. ಅದರಲ್ಲಿ ಬಿಜೆಪಿಯ ಹಿರಿಯ ನಾಯಕ ಸುಶೀಲ್ ಕುಮಾರ್ ಮೋದಿ ಸಹ ಇದ್ದಾರೆ. ಸ್ವತಃ ನಿತೀಶ್ ಕುಮಾರ್ ಈ ಪಿಂಚಣಿಗೆ ಅರ್ಹರಿದ್ದರೂ ಅವರು ಪಡೆಯುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
RJD President Lalu Prasad would get JP Senani Samman Pension of Rs 10,000 per month after being declared eligible for it.
Please Wait while comments are loading...