ರಾಹುಲ್ ಗಾಂಧಿಯ ಟೀಕಿಸಿದ ಜ್ಯೋತಿಷಿಯ ಹೊರದಬ್ಬಿದ ಲಾಲೂ
ಪಾಟ್ನಾ, ಜುಲೈ 24: ಪಕ್ಷದ ಗ್ರಹ ಗತಿಗಳನ್ನು ಸರಿಮಾಡಲೆಂದು ನೇಮಿಸಿಕೊಂಡಿದ್ದ ಜ್ಯೋತಿಷಿ ಒಬ್ಬರನ್ನು ಆರ್‌ಜೆಡಿ ಪಕ್ಷದ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಹೊರದಬ್ಬಿದ್ದಾರೆ.
ಪಕ್ಷಕ್ಕೆ ಸಲಹೆಗಳನ್ನು ನೀಡಲೆಂದು ಜ್ಯೋತಿಷಿ ಶಂಕರ್ ಚರಣ್ ತ್ರಿಪಾಠಿ ಅವರನ್ನು ಲಾಲೂ ಪ್ರಸಾದ್ ಯಾದವ್ ನೇಮಿಸಿಕೊಂಡಿದ್ದರು. ಆದರೆ ಅವರು ರಾಹುಲ್ ಗಾಂಧಿ ಅವರ ವಿರುದ್ಧ ಮಾತನಾಡಿದ್ದರಿಂದ ಸಿಟ್ಟಾಗಿರುವ ಲಾಲೂ ಪ್ರಸಾದ್ ಯಾದವ್, ತ್ರಿಪಾಠಿ ಅವರನ್ನು ಪಕ್ಷದಿಂದ ಹೊರಗಟ್ಟಿದ್ದಾರೆ.
ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ಅವರನ್ನು ತಬ್ಬಿಕೊಂಡ ಬಗ್ಗೆ ಸುದ್ದಿ ವಾಹಿನಿಯೊಂದರಲ್ಲಿ ತ್ರಿಪಾಠಿ ಅವರು ಮಾತನಾಡಿ, ಅದೊಂದು ಮಕ್ಕಳು ಮಾಡುವ ವರ್ತನೆ, ಪ್ರಧಾನಿ ಹುದ್ದೆ ಆಕಾಂಕ್ಷಿಯೊಬ್ಬ ಹೀಗೆ ವರ್ತನೆ ಮಾಡಿರುವುದು ನಾಚಿಕೆಗೇಡು ಎಂದು ಟೀಕಿಸಿದ್ದರು.

ಆರ್‌ಜೆಡಿಯು ಯುಪಿಎಯ ಪ್ರಮುಖ ಮಿತ್ರಪಕ್ಷವಾಗಿದ್ದು, ಇತ್ತೀಚೆಗಷ್ಟೆ ಲಾಲೂ ಪ್ರಸಾದ್ ಯಾದವ್ ಅವರನ್ನು ರಾಹುಲ್ ಗಾಂಧಿ ಅವರು ಆಸ್ಪತ್ರೆಯಲ್ಲಿ ಭೇಟಿಯಾಗಿ ರಾಜಕೀಯ ಚರ್ಚಿಸಿದ್ದರು.
ನಿನ್ನೆಯಷ್ಟೆ ಆರ್‌ಜೆಡಿಯ ಮತ್ತೊಬ್ಬ ಮುಖಂಡ ತೇಜಸ್ವಿ ಯಾದವ್ ಅವರು, ರಾಹುಲ್ ಗಾಂಧಿ ಅವರು ಪ್ರಧಾನಿ ಅಭ್ಯರ್ಥಿ ಆಗುವುದಾದರೆ ನಮ್ಮ ಅಭ್ಯರ್ಥಿ ಅಲ್ಲ ಎಂದು ಹೇಳಿದ್ದರು.












Click it and Unblock the Notifications