ಭಾರತದ ಗಡಿ ಭಾಗದಲ್ಲಿ ಭೀಕರ ಪ್ರತಿಭಟನೆ, ಹಿಂಸೆಗೆ 4 ಜನ ಬಲಿ? Ladakh Protests
ಭಾರತದ ಗಡಿಯಲ್ಲಿ ಭಾರಿ ದೊಡ್ಡ ಹಿಂಸಾಚಾರ ಶುರುವಾಗಿದೆ, ಲಡಾಖ್‌ಗೆ ರಾಜ್ಯ ಸ್ಥಾನಮಾನ ಮತ್ತು 6ನೇ ಪರಿಚ್ಛೇದ ಅಡಿ ಸೇರಿಸಲು ಒತ್ತಾಯಿಸಿ ದಿಢೀರ್ ಅಂತಾ ಪ್ರತಿಭಟನೆಗಳು ಆರಂಭವಾಗಿದ್ದವು. ಹೀಗೆ ಶುರುವಾದ ಪ್ರತಿಭಟನೆ ಇದೀಗ ಹಿಂಸೆಯ ಸ್ವರೂಪ ತಾಳಿದ್ದು, ಬಂದ್ ನಡುವೆ ಕೂಡ ಭಾರಿ ದೊಡ್ಡ ದುರ್ಘಟನೆಗಳು ನಡೆದಿವೆ. ಕಂಡ ಕಂಡಲ್ಲಿ ಬೆಂಕಿ ಹಚ್ಚುತ್ತಿರುವ ಉದ್ರಿಕ್ತರ ಗುಂಪು ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದ್ದಾರೆ. ಹೀಗಾಗಿ ಇದೀಗ ಲಡಾಖ್ ಕಾದ ಕಬ್ಬಿಣದಂತೆ ಆಗಿದ್ದು, ಭಾರತದ ಗಡಿ ಭಾಗದಲ್ಲಿ ಸೂಕ್ಷ್ಮ ಪರಿಸ್ಥಿತಿ ನಿರ್ಮಾಣ ಆಗಿದೆ.
ಹೌದು, ಲಡಾಖ್ ಭಾರತದ ತುತ್ತ ತುದಿಯಲ್ಲಿ ಇರುವ ಪ್ರದೇಶವಾಗಿದೆ. ಹೀಗಾಗಿ ಗಡಿ ಭಾಗದಲ್ಲಿರುವ ಈ ಪ್ರದೇಶ ಅತ್ಯಂತ ಸೂಕ್ಷ್ಮ ವಲಯವೂ ಹೌದು. ಹೀಗಿದ್ದಾಗ ದಿಢೀರ್ ಅಂತಾ ಪ್ರತಿಭಟನೆಗಳು ಶುರು ಆಗಿದ್ದು ಸಹಜವಾಗಿ ಆತಂಕ ಹೆಚ್ಚು ಮಾಡಿತ್ತು, ಅಲ್ಲದೆ ಲಡಾಖ್ ಬೆಳವಣಿಗೆ ಬಗ್ಗೆ ಕೇಂದ್ರ ಸರ್ಕಾರ ಕೂಡ ಸೂಕ್ಷ್ಮವಾಗಿ ಗಮನ ಹರಿಸಿತ್ತು. ಹೀಗಿದ್ದಾಗ ದಿಢೀರ್ ಅಂತಾ ಇವತ್ತು ನೂರಾರು ಜನ ಬೀದಿಗಿಳಿದು ಪ್ರತಿಭಟಿಸುವ ನೆಪದಲ್ಲಿ ಹಿಂಸಾಚಾರ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಲಡಾಖ್ ಭಾಗದ ಲೇಹ್ ಬಳಿ ಬಿಜೆಪಿ ಕಚೇರಿ ಮೇಲೆ ಕೂಡ ದಾಳಿ ಮಾಡಿರುವ ಆರೋಪ ಮಾಡಲಾಗಿದೆ. ಹಾಗೇ ಇದೇ ಸಮಯದಲ್ಲಿ ಕಲ್ಲು ತೂರಾಟ ಕೂಡ ಸಂಭವಿಸಿ, ಪೊಲೀಸರು ಲಾಠಿ ಪ್ರಯೋಗ ಮಾಡಿದ್ದಾರೆ. ಆದರೆ ಈ ವೇಳೆ ಹಿಂಸೆ ಇನ್ನಷ್ಟು ಹೆಚ್ಚಾಗಿದೆ.

ಗಡಿ ಭಾಗದಲ್ಲಿ ಭಾರಿ ಕಟ್ಟೆಚ್ಚರ
ಭಾರತ ದೇಶದ ಸುತ್ತಲೂ ಶತ್ರುಗಳ ಸಂಖ್ಯೆ ಹೆಚ್ಚಾಗಿದ್ದು, ಇದೀಗ ಭಾರತದ ಗಡಿಯಲ್ಲಿ ನಡೆದಿರುವ ಈ ಪ್ರತಿಭಟನೆಗಳ ಲಾಭ ಪಡೆಯಲು ಶತ್ರುಗಳು ಪ್ರಯತ್ನ ಮಾಡುತ್ತಿರುವ ಅನುಮಾನ ಕೂಡ ಇದೀಗ ಮೂಡಿದೆ. ಹೀಗಾಗಿ ಇದೀಗ ಭಾರತದ ಗಡಿ ಭಾಗದಲ್ಲಿ ಭಾರಿ ಕಟ್ಟೆಚ್ಚರ ವಹಿಸಲಾಗಿದ್ದು, ಲಡಾಖ್ ನೆಲದಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿರುವ ಕಿರಾತಕರನ್ನ ಈಗ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಖುದ್ದು ಸೇನೆ ಅಖಾಡಕ್ಕೆ ಎಂಟ್ರಿ ಕೊಟ್ಟು ಹಿಂಸಾಚಾರ ನಡೆಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ. ಹೋರಾಟ ಅಂತಾ ಪ್ರತಿಭಟನೆ ಶುರು ಮಾಡಿದ್ದವರು ಈಗ ಹಿಂಸೆಗೆ ಇಳಿದಿದ್ದು ಭಾರಿ ಅನುಮಾನ ಮೂಡಿಸಿದೆ.
ಸೆಕ್ಯುರಿಟಿ ಟೈಟ್, ಮುಂಜಾಗ್ರತಾ ಕ್ರಮ...
ಒಟ್ನಲ್ಲಿ ಭಾರತದ ಗಡಿ ಭಾಗದಲ್ಲಿ ಇದೀಗ ಪರಿಸ್ಥಿತಿ ಭಾರಿ ಸೂಕ್ಷ್ಮವಾಗಿದ್ದು, ಪ್ರವಾಸಿಗರು ಕೂಡ ಈ ಕಡೆ ಎಂಟ್ರಿ ಕೊಡದೇ ಇರುವುದು ಉತ್ತಮ. ಹಾಗೇ ಮುಂಜಾಗ್ರತಾ ಕ್ರಮವಾಗಿ ಭಾರಿ ಕಟ್ಟೆಚ್ಚರವನ್ನ ವಹಿಸಲಾಗಿದ್ದು, ಹಿಂಸೆ ನಡೆಸುತ್ತಿದ್ದವರನ್ನ ಹಿಡಿದು ಹಿಡಿದು ಕಂಬಿ ಹಿಂದೆ ತಳ್ಳಲಾಗುತ್ತಿದೆ. ಇನ್ನು ರಾಜಕೀಯ ಪಕ್ಷಗಳ ಕಚೇರಿಗಳನ್ನು ಕೂಡ ಟಾರ್ಗೆಟ್ ಮಾಡಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸೆಕ್ಯುರಿಟಿ ಟೈಟ್ ಮಾಡಲಾಗಿದೆ.












Click it and Unblock the Notifications