ಮಣಿಪುರದಲ್ಲಿ 6 ಮಂದಿ ಕಾಂಗ್ರೆಸ್ ಶಾಸಕರು ರಾಜೀನಾಮೆ

ಇಂಫಾಲ್, ಆಗಸ್ಟ್ 11: ಮಣಿಪುರದಲ್ಲಿ 6 ಮಂದಿ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ್ದಾರೆ.

ಆಗಸ್ಟ್ 10 ರಂದು ನಡೆದಿದ್ದ ಒಂದು ದಿನದ ವಿಶೇಷ ಅಧಿವೇಶನಕ್ಕೆ ಗೈರಾಗುವ ಮೂಲಕ ಪಕ್ಷದ ವಿಪ್ ಉಲ್ಲಂಘಿಸಿದ ಎಂಟು ಶಾಸಕರಲ್ಲಿ ಈ ಆರು ಶಾಸಕರೂ ಇದ್ದರು.

ಶಾಸಕ ಓ ಹೆನ್ರಿ ಸಿಂಗ್, ಒನಂ ಲುಖೋಯಿ, ಪಾನೊಂ ಬ್ರೊಜೆನ್, ಗಮ್ ಥಂಗ್ ಹಾಕಿಪ್, ಗಿನ್ ಸುನಾಹ್, ಮೊಹಮ್ಮದ್ ಅಬ್ದುಲ್ ನಸೀರ್ ರಾಜೀನಾಮೆ ನೀಡಿದ್ದಾರೆ.

Lack Of Trust In Leadership 6 Congress MLAs Resign In Manipur

ಒ ಇಬೊಬಿ ಸಿಂಗ್ ಅವರ ನಾಯಕತ್ವದ ಮೇಲಿನ ನಂಬಿಕೆಯ ಕೊರತೆಯನ್ನು ಅವರು ಉಲ್ಲೇಖಿಸಿದರು ಮತ್ತು ಅವರ ಕಾರಣದಿಂದಾಗಿ ರಾಜಿನಾಮೆ ನೀಡಿದ್ದಾಗಿ ಹೇಳಿದ್ದಾರೆ. ರಾಜ್ಯದ ಏಕೈಕ ಅತಿದೊಡ್ಡ ಪಕ್ಷವಾಗಿದ್ದರೂ ಸಹ ಸರ್ಕಾರ ರಚಿಸಲು ಕಾಂಗ್ರೆಸ್ ವಿಫಲವಾಗಿದೆ.

ಸೋಮವಾರ ರಾತ್ರಿ ವಿಧಾನಸಭೆ ಅಧಿವೇಶನದ ನಂತರ ಅವರನ್ನು ಸ್ಪೀಕರ್ ಯುನ್ನಮ್ ಖೇಮಚಂದ್ ಸಿಂಗ್ ಅವರು ಕರೆಸಿದರು ಮತ್ತು ಅವರ ರಾಜೀನಾಮೆ ಪತ್ರಗಳನ್ನು ಪರಿಶೀಲಿಸಲಾಗಿದೆ ಎಂದು ಹೆನ್ರಿ ಸಿಂಗ್ ಹೇಳಿದ್ದಾರೆ. ರಾಜಿನಾಮೆ ಪತ್ರವನ್ನು ಇನ್ನೂ ಸ್ಪೀಕರ್ ಅಂಗೀಕರಿಸಬೇಕಾಗಿದೆ.

ರಾಜೀನಾಮೆಯನ್ನು ಸ್ಪೀಕರ್ ಇನ್ನೂ ಅಂಗೀಕರಿಸಿಲ್ಲ. ನಾವು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸಲಿದ್ದೇವೆ ಎಂದು ಹೆನ್ರಿಸಿಂಗ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+