Kurubur Shanthakumar: ಕುರುಬೂರು ಶಾಂತಕುಮಾರ್ ಕಾರು ಅಪಘಾತ
ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೆ ಈಡಾಗಿದೆ. ರೈತರ ಸಭೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಪಂಜಾಬ್‌ನಲ್ಲಿ ಕುರುಬೂರು ಶಾಂತಕುಮಾರ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು, ತಕ್ಷಣವೇ ಶಾಂತಕುಮಾರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಂಜಾಬ್‌ನ ಪಟಿಯಾಲ ರಸ್ತೆಯಲ್ಲಿ ಕಾರು ಡಿವೈಡರ್ ಗೆ ಡಿಕ್ಕಿಯಾಗಿದೆ. ದೆಹಲಿಯ ಗಡಿ ಭಾಗದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಳೆದ ಒಂದು ವರ್ಷದಿಂದ ಪ್ರತಿಭಟನೆ ನಡೆಯುತ್ತಿದ್ದು, ಶುಕ್ರವಾರ (ಫೆಬ್ರವರಿ 14) ಕರೆದಿದ್ದ ಸಭೆಯಲ್ಲಿ ಭಾಗವಹಿಸಲು ಕುರುಬೂರು ಶಾಂತಕುಮಾರ್ ತೆರಳುತ್ತಿದ್ದರು.

ಕುರುಬೂರು ಶಾಂತಕುಮಾರ್ ಅವರ ಜೊತೆಗೆ ತಮಿಳುನಾಡಿನ ಪಾಂಡಿಯನ್ ಕೂಡ ಕಾರಿನಲ್ಲಿದ್ದರು ಎಂದು ವರದಿಯಾಗಿದ್ದು ಅವರಿಗೂ ಕೂಡ ಗಾಯಗಳಾಗಿದೆ. ಅಪಘಾತ ನಡೆಯುತ್ತಿದ್ದಂತೆ ಇಬ್ಬರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕಾಲು, ಬೆನ್ನಿಗೆ ಗಾಯ
ಕರ್ನಾಟಕ ರಾಜ್ಯ ಸಂಯುಕ್ತ ಕಿಸಾನ್ ಮೋರ್ಚಾದ ಸಂಚಾಲಕ ಕುರುಬೂರು ಶಾಂತಕುಮಾರ್ ರೈತರ ಪ್ರತಿಭಟನೆಗೆ ಬೆಂಬಲ ನೀಡಲು ಪಂಜಾಬ್‌ಗೆ ತೆರಳಿದ್ದರು. ದೆಹಲಿಯಿಂದ ಪಂಜಾಬ್‌ಗೆ ಹೋಗುವ ಮಾರ್ಗದಲ್ಲಿ ಕಾರು ಅಪಘಾತಕ್ಕೀಡಲಾಗಿದೆ. ಶಾಂತಕುಮಾರ್ ಅವರ ಎಡಗೈ, ಕಾಲಿಗೆ ಪೆಟ್ಟಾಗಿದ್ದು ಸ್ಪೈನಲ್ ಕಾರ್ಡ್‌ಗೆ ಕೂಡ ಹಾನಿಯಾಗಿದೆ ಎಂದು ವರದಿಯಾಗಿದೆ.
ಬೆಂಗಳೂರಿನಿಂದ ದೆಹಲಿಗೆ ವಿಮಾನದಲ್ಲಿ ಪ್ರಯಾಣಿಸಿದ್ದ ಶಾಂತಕುಮಾರ್ ಅಲ್ಲಿಂದ ಪಂಜಾಬ್‌ಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಶಾಂತಕುಮಾರ್ ಪ್ರಯಾಣಿಸುತ್ತಿದ್ದ ಕಾರಿನ ಮುಂದೆ ತೆರಳುತ್ತಿದ್ದ ಎಸ್ಕಾರ್ಟ್ ವಾಹನ ಅಪಾಘತಕ್ಕೀಡಾಗಿದ್ದು, ಶಾಂತಕುಮಾರ್ ಕಾರಿನ ಚಾಲಕ ದಿಢೀರ್ ಬ್ರೇಕ್ ಹಾಕಿದ್ದರಿಂದ ಅಪಘಾತ ಸಂಭವಿಸಿದೆ.












Click it and Unblock the Notifications