ಮಹಾನಂದಿ ನೋಡಲು ಹೊರಟವರು ಶಿವನ ಪಾದ ಸೇರಿದ್ರು!
ಕರ್ನೂಲ್, ಜೂನ್ 24: ಮಹಾನಂದಿ ನೋಡಲು ಹೊರಟ್ಟಿದ್ದ ಭಕ್ತರು, ಕರ್ನೂಲ್-ಚಿತ್ತೂರು ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿ, ಮೃತಪಟ್ಟಿರುವ ಘಟನೆ ಭಾನುವಾರದಂದು ನಡೆದಿದೆ.
ಆಟೋರಿಕ್ಷಾಕ್ಕೆ ಆಂಧ್ರಪ್ರದೇಶದ ಸಾರಿಗೆ ಬಸ್ ಡಿಕ್ಕಿಯಾಗಿ ಒಂಭತ್ತು ಜನರು ಸಾವನ್ನಪ್ಪಿದ್ದಾರೆ. ನಾಲ್ಕು ಜನರು ಗಾಯಗೊಂಡಿದ್ದಾರೆ.

ಕರ್ನೂಲ್ ಜಿಲ್ಲೆಯ ಕಳಪ್ಪಾಡು ಗ್ರಾಮದ ಒಂಭತ್ತು ಮಂದಿ, ಒಂದೇ ಆಟೋದಲ್ಲಿ ಪ್ರಯಾಣಿಸುತ್ತಿದ್ದರು. ಮಹಾನಂದಿ ದರ್ಶನಕ್ಕೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ. ಗೌರಮ್ಮ, ಬೋವಾ ಲಕ್ಷ್ಮಿ ದೇವಿ, ಎರಾರಾಮು, ಮಾರ್ಪೆಪ್ಪ, ಚನ್ಸಂದ್ಲಾ ಗ್ರಾಮದ ಲಕ್ಷ್ಮಿ ದೇವಿ, ಹುಸನಾಮ್ಮ ಎಂದು ಗುರುತಿಸಲಾಗಿದೆ.
ಮತ್ತೊಂದು ಮೂಲಗಳ ಪ್ರಕಾರ, ಆಟೋ ಡ್ರೈವರ್ ನಿರ್ಲಕ್ಷ್ಯ ಕೂಡಾ ಕಾರಣ ಎನ್ನಲಾಗಿದೆ. ಅಪಘಾತ ವಲಯ ಎಂದು ತಿಳಿದಿದ್ದರೂ, ಬಸ್ ಓವರ್ ಟೇಕ್ ಮಾಡಲು ಯತ್ನಿಸಿದ್ದು ಮಾರಕವಾಗಿದೆ.












Click it and Unblock the Notifications