ಕುಂಭಮೇಳಕ್ಕಾಗಿ 800ಕ್ಕೂ ಅಧಿಕ ರೈಲು, ಬೆಂಗಳೂರಿನಿಂದ ಎಷ್ಟು?

ಪ್ರಯಾಗ್ ರಾಜ್ (ಉತ್ತರಪ್ರದೇಶ), ಜನವರಿ 16: ಕುಂಭಮೇಳಕ್ಕೆ ಭರ್ಜರಿಯಾಗಿ ಚಾಲನೆ ಸಿಕ್ಕಿದ್ದು, ಸಂಗಮದಲ್ಲಿ ಮಿಂದೆದ್ದ ಭಕ್ತಾದಿಗಳು ಪುನೀತಭಾವವನ್ನು ಹೊಂದಿದ್ದಾರೆ. ಕುಂಭಮೇಳಕ್ಕೆ ದೇಶದ ವಿವಿಧ ಭಾಗದಿಂದ 800ಕ್ಕೂ ಅಧಿಕ ವಿಶೇಷ ರೈಲುಗಳು ಸಂಚರಿಸುತ್ತಿವೆ.

ಪ್ರಯಾಣಿಕರ ಅನುಕೂಲಕ್ಕಾಗಿ 22 ಪ್ರಮುಖ ಭಾಷೆಗಳಲ್ಲಿ ರೈಲ್ವೆ ಘೋಷಣೆ ಕೇಳಿ ಬರಲಿದೆ. ಮಾರ್ಚ್ 05ರ ತನಕ ವಿಶೇಷ ರೈಲುಗಳ ಸೌಲಭ್ಯ ಲಭ್ಯವಾಗಲಿದೆ. ಅನೇಕ ರೈಲ್ವೆ ಸ್ಟೇಷನ್ ಗಳಲ್ಲಿ ಕುಂಭ್ ಸೇವಕರನ್ನು ನೇಮಿಸಲಾಗಿದ್ದು, ಯಾತ್ರಾರ್ಥಿಗಳಿಗೆ ನೆರವಾಗುತ್ತಿದ್ದಾರೆ.

ವಿದೇಶಿ ಪ್ರವಾಸಿಗರನ್ನು ಸೆಳೆಯಲು ಉತ್ತರ ವಿಭಾಗದ ರೈಲ್ವೆಯು 5 ಎಸಿ ರೈಲುಗಳನ್ನು ನವದೆಹಲಿ ರೈಲ್ವೆ ನಿಲ್ದಾಣದಿಂದ ಪ್ರಯಾಣಕ್ಕೆ ಮುಕ್ತಗೊಳಿಸಿದೆ. ಹೊಸದಾಗಿ ಸೇರ್ಪಡೆಗೊಂಡ 66 ರೈಲುಗಳು ಸೇರಿದಂತೆ ಒಟ್ಟು 134 ರೈಲುಗಳು ಈ ವಿಭಾಗದಿಂದ ಸಂಚರಿಸುತ್ತಿವೆ.

Kumbh Mela 2019 : How to reach Prayagraj from Bengaluru

ಐಆರ್ ಸಿಟಿಸಿ ವೆಬ್ ಸೈಟ್ ಅಥವಾ ರೈಲ್ ಕನೆಕ್ಟ್ ಮೊಬೈಲ್ ಅಪ್ಲಿಕೇಷನ್ ಮೂಲಕ ಟಿಕೆಟ್ ಬುಕ್ ಮಾಡಿಕೊಳ್ಳಬಹುದು.

ಬೆಂಗಳೂರಿನಿಂದ ರೈಲುಗಳು:
* 12295 ಸಂಘಮಿತ್ರ ಎಕ್ಸ್ ಪ್ರೆಸ್ (ಸೋಮವಾರದಿಂದ ಭಾನುವಾರ)
ಬೆಳಗ್ಗೆ 9 ಗಂಟೆಗೆ ಹೊರಡಲಿದ್ದು, 40 ಗಂಟೆಗಳ ಪ್ರಯಾಣದ ನಂತರ ಅಲಹಾಬಾದ್ ತಲುಪಲಿದೆ. ಟಿಕೆಟ್ ಬೆಲೆ ಸುಮಾರು 805 ರು.

* 22352 ಪಾಟಲೀಪುತ್ರ ಎಕ್ಸ್ ಪ್ರೆಸ್ (ಸೋಮವಾರ)
ಬೆಳಗ್ಗೆ 9.55ಕ್ಕೆ ಹೊರಡುವ ವೇಳೆ 41 ಗಂಟೆ 35 ನಿಮಿಷ ಪ್ರಯಾಣದ ನಂತರ ಅಲಹಾಬಾದ್ 3.30ಕ್ಕೆ ತಲುಪಲಿದೆ. ಟಿಕೆಟ್ ಬೆಲೆ 805 ರು.

* 12578 ಬಾಗ್ಮತಿ ಎಕ್ಸ್ ಪ್ರೆಸ್ (ಶನಿವಾರ)
ಬೆಳಗ್ಗೆ 10.05ಕ್ಕೆ ಹೊರಡಲಿದ್ದು, 41 ಗಂಟೆ 25 ನಿಮಿಷ ಪ್ರಯಾಣದ ನಂತರ 3.30ಕ್ಕೆ ಅಲಹಾಬಾದ್ ತಲುಪಲಿದೆ. ಟಿಕೆಟ್ ಬೆಲೆ 805.

* 16229 ಮೈಸೂರು-ವಾರಣಾಸಿ (ಮಂಗಳವಾರ, ಗುರುವಾರ)
ಯಶವಂತಪುರದಿಂದ 10.25ಕ್ಕೆ ಹೊರಟು 45ಗಂಟೆ 35 ನಿಮಿಷದ ಪ್ರಯಾಣದ ಬಳಿಕ ಅಲಹಾಬಾದ್ ತಲುಪಲಿದೆ. ಟಿಕೆಟ್ ದರ 785 ರು.

* 1259 ಯಶವಂತಪುರ ಲಕ್ನೋ ಎಕ್ಸ್ ಪ್ರೆಸ್ (ಬುಧವಾರ)
ಯಶವಂತಪುರದಿಂದ ಬೆಳಗ್ಗೆ 10.50ಕ್ಕೆ ಹೊರಟು 39 ಗಂಟೆ 25 ನಿಮಿಷ ಪ್ರಯಾಣದ ಬಳಿಕ ಅಲಹಾಬಾದ್ ತಲುಪಲಿದ್. ಟಿಕೆಟ್ ದರ 800 ರು.

* 2683 ಯಶವಂತಪುರ ಲಕ್ನೋ ಮೇಲ್/ ಎಕ್ಸ್ ಪ್ರೆಸ್(ಸೋಮವಾರ)
ರಾತ್ರಿ 23.40ಕ್ಕೆ ಹೊರಟು 37 ಗಂಟೆ 5 ನಿಮಿಷ್ ಪ್ರಯಾಣದ ಬಳಿಕ 12.45ಕ್ಕೆ ಅಲಹಾಬಾದ್ ತಲುಪಲಿದೆ. ಟಿಕೆಟ್ ದರ 765 ರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+