ಗಾಜಿಯಾಬಾದ್‌ನಲ್ಲಿ ಮೂವರು ಅಪ್ರಾಪ್ತ ಸಹೋದರಿಯರ ಸಾವು: ‘ಕೊರಿಯನ್ ಲವರ್’ ಆನ್‌ಲೈನ್ ಗೇಮ್ ಬಗ್ಗೆ ತನಿಖೆ ತೀವ್ರ
Korean Lover Game: ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಮೂವರು ಅಪ್ರಾಪ್ತ ಸಹೋದರಿಯರು ಸಾವನ್ನಪ್ಪಿರುವ ಘಟನೆ ದೇಶಾದ್ಯಂತ ಆತಂಕ ಮೂಡಿಸಿದ್ದು, ಈ ಪ್ರಕರಣದ ಹಿಂದೆ 'ಕೊರಿಯನ್ ಲವರ್ ಗೇಮ್' ಎಂದು ಕರೆಯಲಾಗುತ್ತಿರುವ ಆನ್‌ಲೈನ್ ಚಟುವಟಿಕೆಗಳ ಪ್ರಭಾವವಿದೆಯೇ ಎಂಬುದರ ಕುರಿತು ಪೊಲೀಸರು ಗಂಭೀರ ತನಿಖೆ ಆರಂಭಿಸಿದ್ದಾರೆ. ಈ ದುರ್ಘಟನೆಯೊಂದಿಗೆ, ಮಕ್ಕಳ ಮೇಲೆ ಡಿಜಿಟಲ್ ಜಗತ್ತಿನ ಪರಿಣಾಮ ಮತ್ತು ಆನ್‌ಲೈನ್ ವ್ಯಸನದ ಅಪಾಯಗಳ ಕುರಿತು ಹೊಸ ಚರ್ಚೆ ಕೂಡ ಆರಂಭವಾಗಿದೆ.
ಏನಿದು ಕೊರಿಯನ್ ಲವರ್ ಗೇಮ್?
ಪೊಲೀಸರ ಪ್ರಕಾರ, 'ಕೊರಿಯನ್ ಲವರ್ ಗೇಮ್' ಎಂಬುದು ಅಧಿಕೃತ ಆಟವಲ್ಲ. ಬದಲಾಗಿ ಕೊರಿಯನ್ ಪಾಪ್ ಸಂಸ್ಕೃತಿ-ಕೆ-ಡ್ರಾಮಾ, ಕೆ-ಪಾಪ್ ಸಂಗೀತ, ದಕ್ಷಿಣ ಕೊರಿಯಾದ ಜೀವನ ಶೈಲಿಯ ಕಲ್ಪಿತ ಚಿತ್ರಣಗಳನ್ನಾಧರಿಸಿದ ಹಲವು ಆನ್‌ಲೈನ್ ಅಪ್ಲಿಕೇಶನ್‌ಗಳು ಮತ್ತು ವೆಬ್ ಪ್ಲಾಟ್‌ಫಾರ್ಮ್‌ಗಳ ಗುಂಪಿಗೆ ಬಳಸಲಾಗುವ ಪದವಾಗಿದೆ. ಈ ಪ್ಲಾಟ್‌ಫಾರ್ಮ್‌ಗಳು ಬಳಕೆದಾರರಿಗೆ ಕಲ್ಪಿತ ಕೊರಿಯನ್ ಪ್ರೇಮಿ ಅಥವಾ ಪ್ರೇಯಸಿಯೊಂದಿಗೆ ವರ್ಚುವಲ್ ಸಂಬಂಧವನ್ನು ನಿರ್ಮಿಸುವ ಅವಕಾಶ ನೀಡುತ್ತವೆ.

ಈ ಪ್ರಕರಣದ ತನಿಖೆಯ ವೇಳೆ ಸಹೋದರಿಯರ ಡೈರಿಯಲ್ಲಿದ್ದ ಬರಹಗಳು ಮತ್ತು ಡಿಜಿಟಲ್ ಚಟುವಟಿಕೆಗಳು ಮಹತ್ವದ ಸುಳಿವುಗಳನ್ನು ನೀಡಿವೆ. ಅವರು ಈ ವರ್ಚುವಲ್ ಪಾತ್ರಗಳೊಂದಿಗೆ ತೀವ್ರ ಭಾವನಾತ್ಮಕ ಸಂಬಂಧ ಬೆಳೆಸಿಕೊಂಡಿದ್ದರು ಎಂಬುದು ದಾಖಲೆಗಳಿಂದ ತಿಳಿದುಬಂದಿದೆ. ಈ ಆನ್‌ಲೈನ್ ಸಂಬಂಧಗಳು ಮಕ್ಕಳ ಮನಸ್ಸಿನ ಮೇಲೆ ಗಂಭೀರ ಪ್ರಭಾವ ಬೀರಿದ್ದು, ವಾಸ್ತವ ಮತ್ತು ಕಲ್ಪನೆಗಳ ನಡುವಿನ ಗಡಿಯನ್ನು ಮರೆಮಾಚಿವೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
'ಕೊರಿಯನ್ ಲವರ್' ಪ್ಲಾಟ್‌ಫಾರ್ಮ್‌ಗಳ ಕಾರ್ಯಾಚರಣೆ ಹೇಗೆ?
ಪೊಲೀಸರು ಮತ್ತು ಮಾಧ್ಯಮಗಳು ಸಂಗ್ರಹಿಸಿದ ಮಾಹಿತಿಯ ಪ್ರಕಾರ ನೋಡುವುದಾದರೆ ಆನ್‌ಲೈನ್ ಬಳಕೆದಾರರು ಇದರಲ್ಲಿ ಮೊದಲು ಒಂದು ಕಲ್ಪಿತ ಕೊರಿಯನ್ ಹುಡುಗ ಅಥವಾ ಹುಡುಗಿಯನ್ನು ಆಯ್ಕೆ ಮಾಡುತ್ತಾರೆ. ಹೆಚ್ಚಿನ ಚಾಟ್ ಮೂಲಕ ನಡೆಯುತ್ತದೆ. ವರ್ಚುವಲ್ ಸಂಗಾತಿ ಪ್ರೀತಿ ತುಂಬಿದ ಸಂದೇಶಗಳನ್ನು ಕಳುಹಿಸುವುದು, ಭಾವನಾತ್ಮಕ ಒತ್ತಡ ತರುವ ಮಾತುಗಳನ್ನು ಆಡಿಸುವುದು ಮತ್ತು ಕೆಲವೊಮ್ಮೆ ನಿರ್ದಿಷ್ಟ ಕಾರ್ಯಗಳನ್ನು ಮಾಡಲು ಸೂಚಿಸುವುದು ಸಾಮಾನ್ಯ.
ಆರಂಭದಲ್ಲಿ ನಿಗದಿತ ಸಮಯಕ್ಕೆ ಮೆಸೇಜ್‌ಗೆ ಉತ್ತರಿಸುವುದು, ತಮ್ಮ ಭಾವನೆಗಳನ್ನು ಹಂಚಿಕೊಳ್ಳುವುದು ಮೊದಲಾದವು ನಡೆಯುತ್ತವೆ. ಆದರೆ ಹಂತ ಹಂತವಾಗಿ ಬಳಕೆದಾರರನ್ನು ಇನ್ನಷ್ಟು ಒಳಗೆಳೆದು, ಹೆಚ್ಚು ಸಮಯ ಕಳೆಯುವಂತೆ ಮಾಡುತ್ತವೆ. ಕೆಲವು ವರದಿಗಳ ಪ್ರಕಾರ, ಇದರಲ್ಲಿ ಸುಮಾರು 50 ಹಂತಗಳ ಟಾಸ್ಕ್ ಇವೆ ಎನ್ನಲಾಗಿದ್ದು, ಇದನ್ನು ಪೊಲೀಸರು ಇನ್ನೂ ಅಧಿಕೃತವಾಗಿ ದೃಢಪಡಿಸಿಲ್ಲ. ಆರಂಭದ ಕಾರ್ಯಗಳು ಸರಳವಾಗಿದ್ದರೂ, ನಂತರದ ಹಂತಗಳಲ್ಲಿ ಅವು ಏಕಾಂತ, ಮಾನಸಿಕ ಒತ್ತಡ ಮತ್ತು ಅಪಾಯಕಾರಿ ತಿರುವು ಪಡೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಆಟ ಅಥವಾ ಅಪ್ಲಿಕೇಶನ್ ಬಳಕೆದಾರರ ನಿಷ್ಠೆ ಮತ್ತು ಪ್ರೀತಿಯನ್ನು ಪರೀಕ್ಷಿಸುವಂತೆ ತಮ್ಮ ಭಾಗವಹಿಸುವಿಕೆಯನ್ನು ಇಲ್ಲಿ ರೂಪಿಸುತ್ತವೆ.
ಕೊರಿಯನ್ ರಾಜಕುಮಾರಿಯರೆಂದು ಕಲ್ಪನೆ
ತನಿಖಾಧಿಕಾರಿಗಳನ್ನು ಸಹೋದರಿಯರ ಮನಸ್ಥಿತಿಯ ಬಗ್ಗೆ ಬೆಚ್ಚಿಬೀಳಿಸುವ ಅಂಶಗಳನ್ನು ತಿಳಿಸಿದ್ದಾರೆ. ಅವರ ಡೈರಿ ಬರಹಗಳು ಮತ್ತು ಕುಟುಂಬದ ಸದಸ್ಯರು ನೀಡಿದ ಮಾಹಿತಿ ಪ್ರಕಾರ, ಅವರು ತಾವು ಭಾರತೀಯರಲ್ಲ, ಕೊರಿಯನ್‌ಗಳು ಎಂದು ನಂಬಲು ಆರಂಭಿಸಿದ್ದರು. ಅವರು ಕೊರಿಯನ್ ಹೆಸರುಗಳನ್ನು ಇಟ್ಟುಕೊಂಡಿದ್ದು, ತಾವು ಕೊರಿಯನ್ ರಾಜಕುಮಾರಿಯರು ಎಂಬ ಕಲ್ಪನೆಗಳಲ್ಲೇ ಬದುಕುತ್ತಿದ್ದರು ಎಂದು ತಿಳಿದುಬಂದಿದೆ.
ಈ ಕುರಿತು ಮಾತನಾಡಿದ ಸಹಾಯಕ ಪೊಲೀಸ್ ಆಯುಕ್ತ ಅತುಲ್ ಕುಮಾರ್ ಸಿಂಗ್, "ಡೈರಿಗಳಲ್ಲಿ ಕ್ಷಮೆಯಾಚನೆಗಳು, ಮಾನಸಿಕ ತಳಮಳ ಮತ್ತು ಕೊರಿಯನ್ ಆಗಿರುವ ಕಲ್ಪನೆಗಳು ತುಂಬಿವೆ. ಮಕ್ಕಳು ತಾವು ಭಾರತೀಯರಲ್ಲ ಎಂಬ ನಂಬಿಕೆಗೆ ಬಿದ್ದಿದ್ದರು" ಎಂದು ತಿಳಿಸಿದ್ದಾರೆ. ಮಾನಸಿಕ ಆರೋಗ್ಯ ತಜ್ಞರು ಇದನ್ನು 'ಐಡೆಂಟಿಟಿ ಡಿಸ್ಪ್ಲೇಸ್ಮೆಂಟ್' ಎಂದು ಕರೆದಿದ್ದು, ಡಿಜಿಟಲ್ ಜಗತ್ತಿನಲ್ಲಿ ಅತಿಯಾಗಿ ಮುಳುಗಿದಾಗ, ವಿಶೇಷವಾಗಿ ಪ್ರಾಯದ ಮಕ್ಕಳಲ್ಲಿ ನಿಜ ಜೀವನ ಮತ್ತು ಆನ್‌ಲೈನ್ ವ್ಯಕ್ತಿತ್ವದ ನಡುವಿನ ಗಡಿ ಸಂಪೂರ್ಣವಾಗಿ ಮರೆಯಾಗುವ ಸ್ಥಿತಿ ಎನ್ನಲಾಗಿದೆ.
ಬ್ಲೂ ವೇಲ್ ಚಾಲೆಂಜ್‌ನೊಂದಿಗೆ ಹೋಲಿಕೆ
ಕೆಲವರು ಈ ಪ್ರಕರಣವನ್ನು ಕೆಲ ವರ್ಷಗಳ ಹಿಂದೆ ದೇಶದಾದ್ಯಂತ ಆತಂಕ ಹುಟ್ಟಿಸಿದ್ದ 'ಬ್ಲೂ ವೇಲ್ ಚಾಲೆಂಜ್' ಜೊತೆ ಹೋಲಿಕೆ ಮಾಡುತ್ತಿದ್ದಾರೆ. ಎರಡೂ ಸಂದರ್ಭಗಳಲ್ಲಿ ಹಂತ ಹಂತವಾಗಿ ಹೆಚ್ಚುವರಿ ಕಾರ್ಯಗಳನ್ನು ನೀಡುವ ಮಾದರಿ ಕಂಡುಬರುತ್ತದೆ. ಬ್ಲೂ ವೇಲ್ ಪ್ರಕರಣಗಳಲ್ಲಿ ಹಲವು ವರದಿಗಳು ದೃಢಪಡಿಸದಿದ್ದರೂ, ಅದು ಮಕ್ಕಳ ಮನಸ್ಸನ್ನು ಹೇಗೆ ದುರುಪಯೋಗಪಡಿಸಬಹುದು ಎಂಬ ಭಯವನ್ನು ಹುಟ್ಟಿಸಿತ್ತು. ಈ ಪ್ರಕರಣದಲ್ಲಿ ನೇರವಾಗಿ ಯಾವುದೇ ಗೇಮ್ ಅಥವಾ ಅಪ್ಲಿಕೇಶನ್ ಸಾವಿಗೆ ಕಾರಣ ಎಂಬುದಕ್ಕೆ ಇನ್ನೂ ಪುರಾವೆಗಳಿಲ್ಲ. ಆದರೆ ಮಾದರಿಗಳು ಮತ್ತು ಮನೋವೈಜ್ಞಾನಿಕ ಪರಿಣಾಮಗಳನ್ನು ಗಂಭೀರವಾಗಿ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಮಕ್ಕಳು ಏಕೆ ಹೆಚ್ಚು ಅಪಾಯದಲ್ಲಿದ್ದಾರೆ?
ಪ್ರಾಯದ ಮಕ್ಕಳು ಇನ್ನೂ ತಮ್ಮ ಸ್ವಯಂ ಗುರುತನ್ನು ರೂಪಿಸಿಕೊಳ್ಳುವ ಹಂತದಲ್ಲಿರುತ್ತಾರೆ. ಇಂತಹ ಸಂದರ್ಭದಲ್ಲಿ ಅಪ್ಲಿಕೇಶನ್‌ಗಳು ಪ್ರೀತಿ, ಗಮನ ಮತ್ತು ಸೇರಿರುವ ಭಾವನೆ ನೀಡಿದರೆ, ಮಕ್ಕಳು ಸುಲಭವಾಗಿ ಆಕರ್ಷಿತರಾಗುತ್ತಾರೆ. ಪೋಷಕರ ಮೇಲ್ವಿಚಾರಣೆ ಕೊರತೆಯಿದ್ದರೆ ಅಪಾಯ ಇನ್ನಷ್ಟು ಹೆಚ್ಚುತ್ತದೆ ಎನ್ನುವುದು ತಜ್ಞರ ಕಳವಳ. ಇನ್ನು ಪೊಲೀಸರು ತಿಳಿಸಿರುವಂತೆ, ಲಾಕ್‌ಡೌನ್ ಅವಧಿಯಲ್ಲಿ ಈ ಸಹೋದರಿಯರು ಹೆಚ್ಚಿನ ಸಮಯವನ್ನು ಮೊಬೈಲ್ ಫೋನ್‌ಗಳಲ್ಲೇ ಕಳೆಯುತ್ತಿದ್ದರು. ಕುಟುಂಬದ ಸದಸ್ಯರು ಅವರು ದೂರವಾಗುತ್ತಿರುವುದನ್ನು ಗಮನಿಸಿದ್ದರೂ, ವಿಷಯ ಇಷ್ಟೊಂದು ಗಂಭೀರವಾಗಿರಬಹುದು ಎಂಬುದು ಅವರಿಗೆ ತಿಳಿದಿರಲಿಲ್ಲ.
ಪ್ರಸ್ತುತ ಪೊಲೀಸರು ಮಕ್ಕಳ ಮೊಬೈಲ್‌ಗಳು, ಚಾಟ್ ಲಾಗ್‌ಗಳು, ಅಪ್ಲಿಕೇಶನ್‌ಗಳು, ವೆಬ್‌ಸೈಟ್‌ಗಳು ಮತ್ತು ಶಾಲಾ ದಾಖಲೆಗಳನ್ನೂ ಪರಿಶೀಲಿಸುತ್ತಿದ್ದಾರೆ. ಸೈಬರ್ ತಜ್ಞರು ಯಾವ ಪ್ಲಾಟ್‌ಫಾರ್ಮ್‌ಗಳು ಬಳಸಲ್ಪಟ್ಟಿದ್ದವು ಮತ್ತು ಅವುಗಳಲ್ಲಿ ಯಾವುದೇ ಹಾನಿಕಾರಕ ಅಥವಾ ಬಲವಂತದ ವಿಷಯಗಳಿವೆಯೇ? ಎಂಬುದನ್ನು ಪತ್ತೆಹಚ್ಚಲು ತನಿಖೆ ಮುಂದುವರಿಸಿದ್ದಾರೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications